National Sickle Cell Anemia Elimination Program: 2047ರ ವೇಳೆಗೆ ಸಿಕಲ್‌ ಸೆಲ್‌ ಅನೀಮಿಯಾ ಮುಕ್ತವಾಗಬೇಕು ಭಾರತ, ಪ್ರಧಾನಿ ಮೋದಿ ಇಂದು ಆರೋಗ್ಯ ಮಿಷನ್​​ಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್ 27) ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ರಾಷ್ಟ್ರೀಯ ಕುಡಗೋಲು ಕಣ ರಕ್ತಹೀನತೆ ನಿವಾರಣೆ (Sickle cell anemia) ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

National Sickle Cell Anemia Elimination Program: 2047ರ ವೇಳೆಗೆ ಸಿಕಲ್‌ ಸೆಲ್‌ ಅನೀಮಿಯಾ ಮುಕ್ತವಾಗಬೇಕು ಭಾರತ, ಪ್ರಧಾನಿ ಮೋದಿ ಇಂದು ಆರೋಗ್ಯ ಮಿಷನ್​​ಗೆ ಚಾಲನೆ
ಸಾಂದರ್ಭಿಕ ಚಿತ್ರ
Follow us
|

Updated on: Jun 27, 2023 | 11:07 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜೂನ್ 27) ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ರಾಷ್ಟ್ರೀಯ ಕುಡಗೋಲು ಕಣ ರಕ್ತಹೀನತೆ ನಿವಾರಣೆ (Sickle cell anemia) ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಬುಡಕಟ್ಟು ಸಮುದಾಯದ ಜನರು ಈ ಕಾಯಿಲೆಗೆ ಗಣನೀಯವಾಗಿ ಒಳಗಾಗುತ್ತಿದ್ದಾರೆ. ಈ ಕಾರಣಕ್ಕೆ ಕುಡಗೋಲು ಕಣ ರಕ್ತಹೀನತೆ (ಸಿಕಲ್‌ ಸೆಲ್‌ ಅನೀಮಿಯಾ) ನಿವಾರಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಈಗಾಗಲೇ ಕೇಂದ್ರ ಸರ್ಕಾರವು ರಾಷ್ಟ್ರದಾದ್ಯಂತ 17 ರಾಜ್ಯಗಳಲ್ಲಿ ವಾಸಿಸುವ ಸುಮಾರು 70 ಮಿಲಿಯನ್ ಜನರ ಮೇಲೆ ಸಿಕಲ್‌ ಸೆಲ್‌ ಅನೀಮಿಯಾ ಪರಿಣಾಮ ಬೀರುತ್ತದೆ ಎಂದು ಪತ್ತೆ ಮಾಡಿದೆ. ಈ ಕಾಯಿಲೆಯನ್ನು ತಡೆಗಟಲು ಮತ್ತು ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಆರೋಗ್ಯ ಮಿಷನ್ ರಚಿಸಲಾಗಿದೆ, ವಿಶೇಷವಾಗಿ ಬುಡಕಟ್ಟು ಸಮುದಾಯಕ್ಕೆ ಇದರ ಪರಿಣಾಮ ಹೆಚ್ಚಾಗಿರುವ ಕಾರಣ ಅವರಿಗೆ ಇದರ ಅಗತ್ಯತೆಗಳನ್ನು ತಿಳಿಸಲಾಗುವುದು.

ಮಿಷನ್ 2047ರ ವೇಳೆಗೆ ದೇಶದಲ್ಲಿ ಸಿಕಲ್‌ ಸೆಲ್‌ ಅನೀಮಿಯಾ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ, ಕೇಂದ್ರ ಸರ್ಕಾರ ಈ ಕ್ರಮವನ್ನು ತರಲು ಮುಂದಾಗಿದೆ. ಈ ಹಂತದಲ್ಲಿಯೇ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ತರಲಾಗುವುದು, ಇದಕ್ಕೆ ಪರಿಹಾರಗಳೇನು ಎಂಬುದ ಬಗ್ಗೆಯು ಈ ಕಾರ್ಯಕ್ರಮದಲ್ಲಿ ತಿಳಿಸಲಾಗುವುದು.

ಇದನ್ನೂ ಓದಿ: World Sickle Cell Awareness Day 2023: ವರ್ಲ್ಡ್ ಸಿಕಲ್ ಸೆಲ್ ಜಾಗೃತಿ ದಿನ ಇತಿಹಾಸ, ಮಹತ್ವ ಮತ್ತು ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ

ರಾಷ್ಟ್ರೀಯ ಕುಡಗೋಲು ಕಣ ರಕ್ತಹೀನತೆ (ಸಿಕಲ್‌ ಸೆಲ್‌ ಅನೀಮಿಯಾ) ನಿರ್ಮೂಲನೆ ಮಿಷನ್​ನ್ನು 17 ರಾಜ್ಯಗಳಲ್ಲಿ 278 ಜಿಲ್ಲೆಗಳಾದ್ಯಂತ ಕಾರ್ಯಗತಗೊಳಿಸಲಾಗುವುದು, 2023ರ ಕೇಂದ್ರ ಬಜೆಟ್​​​ನಲ್ಲಿ ಈ ಬಗ್ಗೆ ಘೋಷಣೆ ಕೂಡ ಮಾಡಲಾಗಿದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಒಡಿಶಾ, ತಮಿಳು ನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ, ಕೇರಳ, ಬಿಹಾರ ಮತ್ತು ಉತ್ತರಾಖಂಡ ಈ ರಾಜ್ಯಗಳಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲಾಗುವುದು.

2047ರ ವೇಳೆಗೆ ಕುಡಗೋಲು ಕಣ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ಕೇಂದ್ರ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕಾಯಿಲೆಗೆ ಚಿಕಿತ್ಸೆ ಕಂಡುಹಿಡಿಯಲು 70 ಮಿಲಿಯನ್ ಜನರ ತಪಾಸಣೆಗೆ ಒಳಪಡಿಸಲಾಗುವುದು. ಹೆಚ್ಚುವರಿಯಾಗಿ, ಸಿಕಲ್ ಸೆಲ್ ಸ್ಕ್ರೀನಿಂಗ್ ಹೊಂದಿರುವ ಪ್ರತಿಯೊಬ್ಬರಿಗೂ sickle cell ಕಾರ್ಡ್ ನೀಡಲಾಗುವುದು ಎಂದು ಮಾಂಡವಿಯಾ ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ