ಕೊರೊನಾದಿಂದ ಶಾಲೆಗಳಿಲ್ಲದೆ ಓದಲು..ಬರೆಯಲು ಮರೆತ ಮಕ್ಕಳು; ಇದು ಯಾವ ರಾಜ್ಯದಲ್ಲಿ ಗೊತ್ತಾ?

17 ತಿಂಗಳು ಕಲಿಕೆಯಿಂದ ದೂರವುಳಿದ ಮಕ್ಕಳಲ್ಲಿ ಅನೇಕರಿಗೆ ಈಗ ಅಕ್ಷರಗಳನ್ನೇ ಬರೆಯಲು ಆಗುತ್ತಿಲ್ಲ. ಅದಕ್ಕೊಂದು ಉದಾಹರಣೆ ಜಾರ್ಖಂಡದ ರಾಧಿಕಾ ಎಂಬ 10 ವರ್ಷದ ಬಾಲಕಿ.

ಕೊರೊನಾದಿಂದ ಶಾಲೆಗಳಿಲ್ಲದೆ ಓದಲು..ಬರೆಯಲು ಮರೆತ ಮಕ್ಕಳು; ಇದು ಯಾವ ರಾಜ್ಯದಲ್ಲಿ ಗೊತ್ತಾ?
ಮಕ್ಕಳಿಗೆ ಪಾಠ ಹೇಳುವ ವ್ಯವಸ್ಥೆ (ಫೋಟೋ ಕ್ರೆಡಿಟ್​-GETTY IMAGES)
Follow us
TV9 Web
| Updated By: Lakshmi Hegde

Updated on: Aug 28, 2021 | 7:15 PM

ಕೊರೊನಾ ಸೋಂಕು ಎಂಬುದು ಎಲ್ಲ ಕ್ಷೇತ್ರಗಳಿಗೂ ಮಾರಕವಾಗಿದೆ. ಅದರಲ್ಲೂ ಮುಖ್ಯವಾಗಿ ಶಿಕ್ಷಣ ವ್ಯವಸ್ಥೆಯ ಮೇಲೆ ತುಂಬ ಋಣಾತ್ಮಕ ಪರಿಣಾಮ ಬೀರಿದೆ. ಕೊರೊನಾ ಶುರುವಾದ 2020ರ ಮಾರ್ಚ್​ನಿಂದ ಇವತ್ತಿನವರೆಗೆ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಈಗೀಗ ಕೆಲವೆಡೆ ಶಾಲೆ ಶುರುವಾದರೂ ಅದೂ ಕೂಡ ಪ್ರತಿದಿನ, ಸಹಜವಾಗಿ ನಡೆಯುತ್ತಿಲ್ಲ. ಆನ್​ಲೈನ್​ ಕ್ಲಾಸ್​ಗಳು ಶುರುವಾಗಿದ್ದರೂ ತಮಗೆ ಅರ್ಥವಾಗುತ್ತಿಲ್ಲ..ಕಲಿಕೆ ಹಿಂಸೆಯಾಗುತ್ತದೆ ಎಂದೇ ಅನೇಕ ವಿದ್ಯಾರ್ಥಿಗಳು ಹೇಳಿದ್ದಾರೆ. ಅದರಲ್ಲೂ ಹಿಂದುಳಿದ, ಹಳ್ಳಿಗಳ ಮಕ್ಕಳಿಗೆ ಆ ಸೌಭಾಗ್ಯವೂ ಸರಿಯಾಗಿ ಸಿಗಲಿಲ್ಲ. ಮೊಬೈಲ್​, ಲ್ಯಾಪ್​ಟಾಪ್​, ನೆಟ್​ವರ್ಕ್​ಗಳಿಲ್ಲದೆ ಕಷ್ಟಪಟ್ಟವರೇ ಅನೇಕ ಮಂದಿ.

ಹೀಗೆ 17 ತಿಂಗಳು ಕಲಿಕೆಯಿಂದ ದೂರವುಳಿದ ಮಕ್ಕಳಲ್ಲಿ ಅನೇಕರಿಗೆ ಈಗ ಅಕ್ಷರಗಳನ್ನೇ ಬರೆಯಲು ಆಗುತ್ತಿಲ್ಲ. ಅದಕ್ಕೊಂದು ಉದಾಹರಣೆ ಜಾರ್ಖಂಡದ ರಾಧಿಕಾ ಎಂಬ 10 ವರ್ಷದ ಬಾಲಕಿ. ಅವಳಿಗೀಗ ಹಿಂದಿ ಅಕ್ಷರಗಳನ್ನು ಬರೆಯಲು ಸಾಧ್ಯವಾಗುತ್ತಿಲ್ಲವಂತೆ. ರಾಧಿಕಾ ಜಾರ್ಖಂಡದ ಬಾಲಕಿ..ಈ ರಾಜ್ಯದಲ್ಲಿ ಬುಡಕಟ್ಟು ಜನಾಂಗದವರೇ ಜಾಸ್ತಿ ಇದ್ದಾರೆ. ಹಿಂದುಳಿದ ಹಳ್ಳಿಯ, ದಲಿತ ಕುಟುಂಬಕ್ಕೆ ಸೇರಿದ ರಾಧಿಕಾಗೆ ಆನ್​ಲೈನ್​ ಕ್ಲಾಸ್​ ದೂರದ ಮಾತೇ ಆಗಿತ್ತು. ರಾಧಿಕ ಅಂತಲ್ಲ, ಇಂಥ ಹಲವು ಮಕ್ಕಳಿಗೆ ಇದೇ ಸಮಸ್ಯೆ ಕಾಡಿದೆ. ಲತೇಹಾರ್ ಜಿಲ್ಲೆಯ ಒಂದು ಪುಟ್ಟ ಹಳ್ಳಿಯ ನಿವಾಸಿಯಾಗಿರುವ ಈಕೆಗೆ ಶೈಕ್ಷಣಿಕವಾಗಿ ಯಾವುದೇ ಸೌಲಭ್ಯವೂ ಈ ಕೊರೊನಾ, ಲಾಕ್​ಡೌನ್​ ಕಾಲದಲ್ಲಿ ಸಿಕ್ಕಿಲ್ಲ. ಕೆಲವು ಸರ್ಕಾರಿ ಟಿವಿ ಚಾನೆಲ್​ಗಳು ಶಿಕ್ಷಣಕ್ಕೆ ಸಂಬಂಧಪಟ್ಟ ಕಲಿಕೆ, ಪಾಠದ ಕಾರ್ಯಕ್ರಮಗಳನ್ನು ಬಿತ್ತಿರಿಸುತ್ತಿದ್ದರೂ ಅದೂ ಕೂಡ ರಾಧಿಕಾಳಂಥ ಅದೆಷ್ಟೋ ಮಕ್ಕಳಿಗೆ ತಲುಪಿಲ್ಲ.

ಇಂಗ್ಲಿಷ್​-ಹಿಂದಿ ನೆಚ್ಚಿನ ವಿಷಯವಾಗಿತ್ತು..! ಇದೀಗ ಕೆಲವು ರಾಜ್ಯಗಳಲ್ಲಿ ಶಾಲೆಗಳು ಶುರುವಾಗುತ್ತಿವೆ. ಇದೇ ಹೊತ್ತಲ್ಲ ಆರ್ಥಿಕ ತಜ್ಞ ಜೀನ್ ಡ್ರೀಜ್ ಎಂಬುವರು ಒಂದು ಸರ್ವೇ ನಡೆಸಿದ್ದಾರೆ. ಹೀಗೆ ಹಿಂದುಳಿದ ಹಳ್ಳಿಗಳಿಗೆ ಹೋಗಿ ಅಲ್ಲಿನ ಮಕ್ಕಳನ್ನು ಮಾತಾಡಿಸಿದ್ದಾರೆ. ಅದರಂತೆ ರಾಧಿಕಾಳ ಹಳ್ಳಿಗೂ ಹೋಗಿದ್ದರು. ಅಲ್ಲಿ ರಾಧಿಕಾ ಸೇರಿ 35 ಮಕ್ಕಳನ್ನು ಮಾತನಾಡಿದ್ದಾರೆ. ಅವರೆಲ್ಲ ಕೊವಿಡ್​ 19 ಸಂದರ್ಭದಲ್ಲಿ ಹೇಗೆ ವಿದ್ಯಾಭ್ಯಾಸ ಮಾಡಿದ್ದಾರೆ ಎಂದೂ ಪ್ರಶ್ನಿಸಿದ್ದಾರೆ. ಆದರೆ ಈ ವೇಳೆ ಅವರಿಗೆ ಶಾಕ್​ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ನಾನು ಮಾತನಾಡಿಸಿದ 36 ಮಕ್ಕಳಲ್ಲಿ, 30 ಜನರಿಗೆ ಒಂದೇ ಒಂದು ಶಬ್ದವನ್ನೂ ಬರೆಯಲು, ಓದಲು ಬರುವುದಿಲ್ಲ. ಅವರಿಗೆ ಕೊರೊನಾ ಸಮಯದಲ್ಲಿ ಶಿಕ್ಷಣ ಕೈಗೆಟುಕಲೇ ಇಲ್ಲ ಎಂದು ಹೇಳಿದ್ದಾರೆ.

ಹಾಗೇ, ರಾಧಿಕಾ ಕೂಡ ಇದೀಗ ನಾಲ್ಕನೇ ತರಗತಿ. ಆದರೆ ಕಳೆದ 17 ತಿಂಗಳಿಂದಲೂ ತಾನೇನೂ ಬರೆದಿಲ್ಲ..ಓದಿಲ್ಲ ಎನ್ನುತ್ತಿದ್ದಾಳೆ. ಆದರೂ ನಾನು ಶಾಲೆಗೆ ಹೋಗುತ್ತಿದ್ದಾಗ ನನಗೆ ಹಿಂದಿ ಮತ್ತು ಇಂಗ್ಲಿಷ್​ಗಳು ನೆಚ್ಚಿನ ವಿಷಯಗಳಾಗಿದ್ದವು ಎಂಬುದನ್ನು ಹೇಳಿಕೊಂಡಿದ್ದಾಗಿ ಜೀನ್​ ಹೇಳಿದ್ದಾರೆ. ಆದರೆ ಈಗ ಹಿಂದಿ ವರ್ಣಮಾಲೆ ಅಕ್ಷರ ಬರೆಯಲು ತಡವರಿಸುತ್ತಾಳೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಶಿಕ್ಷಣ ಕಡ್ಡಾಯವಾದರೂ, ಕೊರೊನಾ ಸಂದರ್ಭದಲ್ಲಿ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ರಾಧಿಕಾ ವಿಚಾರವೇ ಬಂದರೆ, ಕೊರೊನಾ ಬರುವುದಕ್ಕೂ ಮೊದಲು ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಆದರೆ 17 ತಿಂಗಳ ಅವಧಿಯಲ್ಲಿ ಒಂದಕ್ಷರವನ್ನೂ ಕಲಿಯದೆ ನಾಲ್ಕನೇ ತರಗತಿಗೆ ಕಾಲಿಡುತ್ತಿದ್ದಾಳೆ. ಹೀಗಾದರೆ ಹೇಗೆ ಎಂಬುದು ಜೀನ್​ ಪ್ರಶ್ನೆ..

ರಾಧಿಕಾ ಅಷ್ಟೇ ಅಲ್ಲ, ಆಕೆಯ ನೆರೆಹೊರೆಯ ಹಲವು ಮಕ್ಕಳದ್ದು ಇದೇ ಸಮಸ್ಯೆ. ಹೇಳಿಕೇಳಿ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳು. ಅದರಲ್ಲೂ ಸಣ್ಣ ಹಳ್ಳಿ ಬೇರೆ. ಕಲಿತಿದ್ದನ್ನೂ ಮರೆಯುವಷ್ಟು ದಿನ ಮನೆಯಲ್ಲಿ ಉಳಿದಿದ್ದಾರೆ. ಅಷ್ಟಾದರೂ ಈಗ ಶಾಲೆ ಮತ್ತೆ ತೆರೆಯಲಿ ಎಂದು ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಜೀನ್​ ತಿಳಿಸಿದ್ದಾರೆ.

ಇದನ್ನೂ ಓದಿ: ಪದ್ಮ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಲು ಮೂವರು ವೈದ್ಯರ ಹೆಸರು ಅಂತಿಮಗೊಳಿಸಿದ ದೆಹಲಿ ಸರ್ಕಾರ; ಯಾರು ಈ ಡಾಕ್ಟರ್ಸ್?

Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ