ಪದ್ಮ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಲು ಮೂವರು ವೈದ್ಯರ ಹೆಸರು ಅಂತಿಮಗೊಳಿಸಿದ ದೆಹಲಿ ಸರ್ಕಾರ; ಯಾರು ಈ ಡಾಕ್ಟರ್ಸ್?

ಪದ್ಮ ಪುರಸ್ಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಈ ಬಾರಿ ಶಿಫಾರಸ್ಸು ಮಾಡಲು ಸಾಧಕರನ್ನು ಆಯ್ಕೆ ಮಾಡಬೇಕಿದೆ. ಆದರೆ ನಾವು ಈ ಬಾರಿ ವೈದ್ಯಕೀಯ ಕ್ಷೇತ್ರಕ್ಕೆ ಆದ್ಯತೆ ನೀಡುತ್ತವೆ ಎಂದು ದೆಹಲಿ ಸರ್ಕಾರ ಘೋಷಿಸಿತ್ತು.

ಪದ್ಮ ಪುರಸ್ಕಾರಕ್ಕೆ ಶಿಫಾರಸ್ಸು ಮಾಡಲು ಮೂವರು ವೈದ್ಯರ ಹೆಸರು ಅಂತಿಮಗೊಳಿಸಿದ ದೆಹಲಿ ಸರ್ಕಾರ; ಯಾರು ಈ ಡಾಕ್ಟರ್ಸ್?
ಅರವಿಂದ ಕೇಜ್ರಿವಾಲ್
Follow us
TV9 Web
| Updated By: Lakshmi Hegde

Updated on:Aug 28, 2021 | 6:49 PM

ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ದೆಹಲಿ ಸರ್ಕಾರ, ಮೂವರು ವೈದ್ಯರ ಹೆಸರನ್ನು ಅಂತಿಮಗೊಳಿಸಿದೆ. ಇನ್ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸಸ್ (ILBS)ನ ನಿರ್ದೇಶಕ  ಡಾ. ಎಸ್​.ಕೆ.ಸರಿನ್​, ಲೋಕ್ ನಾಯಕ್​ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆ (LNJP)ಯ ನಿರ್ದೇಶಕ ಡಾ. ಸುರೇಶ್​ ಕುಮಾರ್​ ಮತ್ತು ಮ್ಯಾಕ್ಸ್​ ಆಸ್ಪತ್ರೆಯ ನಿರ್ದೇಶಕ ಡಾ. ಸಂದೀಪ್​ ಬುದ್ಧರಾಜ್​ ಹೆಸರನ್ನು ದೆಹಲಿ ಸರ್ಕಾರ, ಪದ್ಮ ಪುರಸ್ಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ.

ಪದ್ಮ ಪುರಸ್ಕಾರಕ್ಕೆ ಶಿಫಾರಸ್ಸು ಮಾಡುವ ಸಂಬಂಧ ದೆಹಲಿ ಸರ್ಕಾರ ಹೆಸರುಗಳನ್ನು ಸಲಹೆ ನೀಡುವಂತೆ ಜನರಿಗೆ ಹೇಳಿತ್ತು. ಅದರಂತೆ 9427 ಹೆಸರುಗಳನ್ನು ಅಲ್ಲಿನ ನಾಗರಿಕರು ಸರ್ಕಾರಕ್ಕೆ ತಿಳಿಸಿದ್ದರು. ಅದರಲ್ಲಿ ಸುಮಾರು 740 ವೈದ್ಯರ ಹೆಸರುಗಳಿದ್ದವು, ಉಳಿದೆಲ್ಲ ಪ್ಯಾರಾಮೆಡಿಕಲ್​ ಸಿಬ್ಬಂದಿಯ ಹೆಸರಾಗಿದ್ದವು. ಕೊನೇದಾಗಿ ಮೂವರ ಹೆಸರನ್ನು ಅಂತಿಮಗೊಳಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಸಮಿತಿಯ ಅಧ್ಯಕ್ಷರಾಗಿದ್ದರು.

ಪದ್ಮ ಪುರಸ್ಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಈ ಬಾರಿ ಶಿಫಾರಸ್ಸು ಮಾಡಲು ಸಾಧಕರನ್ನು ಆಯ್ಕೆ ಮಾಡಬೇಕಿದೆ. ಆದರೆ ನಾವು ಈ ಬಾರಿ ವೈದ್ಯಕೀಯ ಕ್ಷೇತ್ರಕ್ಕೆ ಆದ್ಯತೆ ನೀಡುತ್ತವೆ. ಹಾಗಾಗಿ, ಜನರು ವೈದ್ಯರು, ಪ್ಯಾರಾಮೆಡಿಕಲ್​ ಸಿಬ್ಬಂದಿಯ ಹೆಸರನ್ನು ಸರ್ಕಾರಕ್ಕೆ ಸೂಚಿಸಬಹುದು ಎಂದು ದೆಹಲಿ ಸರ್ಕಾರ ಹಿಂದೆಯೇ ಘೋಷಿಸಿತ್ತು. ಅದೇ ಕಾರಣಕ್ಕೆ ಈ ಸಲ ಎಲ್ಲ ವೈದ್ಯಕೀಯ ಸಿಬ್ಬಂದಿಯ ಹೆಸರನ್ನೇ ದೆಹಲಿ ನಾಗರಿಕರು ಸೂಚಿಸಿದ್ದರು.

ಆಯ್ಕೆಯಾದ ವೈದ್ಯರ ಸಾಧನೆಗಳು ಇದೀಗ ಮೂವರು ವೈದ್ಯರ ಹೆಸರನ್ನು ದೆಹಲಿ ಸರ್ಕಾರ ಅಂತಿಮಗೊಳಿಸಿದೆ. ಅದರಂತೆ ಡಾ. ಸರಿನ್​, ದೇಶದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್​ ಶುರು ಮಾಡಿದ ಖ್ಯಾತಿಗಳಿಸಿದ್ದಾರೆ. ಅಷ್ಟೇ ಅಲ್ಲ, ಜಗತ್ತಿನಲ್ಲೇ ಮೊದಲ ಪ್ಲಾಸ್ಮಾ ಬ್ಯಾಂಕ್​ ಪ್ರಾರಂಭ ಮಾಡಿದ್ದಾರೆಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಇನ್ನು ಡಾ.ಸುರೇಶ್ ಕುಮಾರ್ ಅವರು ಎಲ್​ಎನ್​ಜೆಪಿಯಲ್ಲಿ ವೈದ್ಯಕೀಯ ನಿರ್ದೇಶಕರಾಗಿದ್ದಾರೆ. ಇಲ್ಲಿ 20,500 ಕೊವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಷ್ಟೇ ಅಲ್ಲ, ದೇಶದಲ್ಲಿ ಎರಡನೇ ಪ್ಲಾಸ್ಮಾ ಬ್ಯಾಂಕ್​ ಪ್ರಾರಂಭಿಸಿದ ಕೀರ್ತಿ ಈ ಸುರೇಶ್​ ಕುಮಾರ್​ಗೆ ಸಲ್ಲಬೇಕು. ಹಾಗೇ..ಪದ್ಮ ಪುರಸ್ಕಾರಕ್ಕೆ ದೆಹಲಿ ಸರ್ಕಾರದಿಂದ ನಾಮನಿರ್ದೇಶನಗೊಳ್ಳಲಿರುವ ಮತ್ತೋರ್ವ ವೈದ್ಯ ಡಾ. ಸಂದೀಪ್​ ಬುದ್ಧರಾಜ್​, ದೇಶದಲ್ಲೇ ಮೊಟ್ಟ ಮೊದಲಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದವರಾಗಿದ್ದಾರೆ.

ಇದನ್ನೂ ಓದಿ: ಗೂಗಲ್​ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರ; ಕೊನೆಗೂ ಮ್ಯಾಪ್​ನಲ್ಲಿ ಸರಿಯಾಯ್ತು ಕರ್ನಾಟಕದ ಊರುಗಳ ಹೆಸರು

Afghanistan: ತಾಲಿಬಾನ್ ವಶದಲ್ಲಿದೆ ಆಧುನಿಕ ಶಸ್ತ್ರಾಸ್ತ್ರಗಳು; ಅವುಗಳು ಯಾವುವು? ಬಳಕೆ ಹೇಗೆ? ಭಾರತಕ್ಕೆ ಏನು ಹಾನಿ?

Published On - 6:49 pm, Sat, 28 August 21