ಗೂಗಲ್​ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರ; ಕೊನೆಗೂ ಮ್ಯಾಪ್​ನಲ್ಲಿ ಸರಿಯಾಯ್ತು ಕರ್ನಾಟಕದ ಊರುಗಳ ಹೆಸರು

ಕರ್ನಾಟಕದ ಬಹಳಷ್ಟು ನಗರಗಳು ಮತ್ತು ಹಳ್ಳಿಗಳ ಹೆಸರನ್ನು ತಪ್ಪಾಗಿ ಗೂಗಲ್ ಮ್ಯಾಪ್‍ನಲ್ಲಿ ದಾಖಲಿಸಿರುವುದನ್ನು ಕೂಡಲೇ ಸರಿಪಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಬೆಂಗಳೂರಿನ ಗೂಗಲ್ ಇಂಡಿಯಾ ಕಚೇರಿಗೆ ಪತ್ರ ಬರೆದಿದ್ದರು

ಗೂಗಲ್​ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರ; ಕೊನೆಗೂ ಮ್ಯಾಪ್​ನಲ್ಲಿ ಸರಿಯಾಯ್ತು ಕರ್ನಾಟಕದ ಊರುಗಳ ಹೆಸರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 28, 2021 | 6:19 PM

ಬೆಂಗಳೂರು: ಗೂಗಲ್ ಮ್ಯಾಪ್​ನಲ್ಲಿ ಕನ್ನಡ ಆಯ್ಕೆಯೂ ಇದ್ದು, ಅದರಲ್ಲಿ ಕರ್ನಾಟಕದ ಊರುಗಳ ಹೆಸರನ್ನು ತಪ್ಪು ತಪ್ಪಾಗಿ ದಾಖಲಿಸಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಧ್ವನಿಯೆತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕರ್ನಾಟಕದ ಬಹುತೇಕ ಗ್ರಾಮಗಳು ಹಾಗೂ ಊರುಗಳ ಹೆಸರನ್ನು ತಪ್ಪಾಗಿ ದಾಖಲಿಸಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್​ಗೆ ಪತ್ರ ಬರೆದಿದ್ದಾರೆ. ಇದರ ಪರಿಣಾಮವಾಗಿ ಸದ್ಯದಲ್ಲೇ ಗೂಗಲ್ ಮ್ಯಾಪ್​ನಲ್ಲಿ ಕರ್ನಾಟಕದ ಊರುಗಳು ಹೆಸರು ಸರಿಯಾಗಲಿವೆ ಎಂದು ಗೂಗಲ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.

ಕರ್ನಾಟಕದ ಬಹಳಷ್ಟು ನಗರಗಳು ಮತ್ತು ಹಳ್ಳಿಗಳ ಹೆಸರನ್ನು ತಪ್ಪಾಗಿ ಗೂಗಲ್ ಮ್ಯಾಪ್‍ನಲ್ಲಿ ದಾಖಲಿಸಿರುವುದನ್ನು ಕೂಡಲೇ ಸರಿಪಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಬೆಂಗಳೂರಿನ ಗೂಗಲ್ ಇಂಡಿಯಾ ಕಚೇರಿಗೆ ಪತ್ರ ಬರೆದಿದ್ದರು. ಎಲ್ಲರ ಕೈಯಲ್ಲೂ ಸ್ಮಾರ್ಟ್​ ಫೋನ್ ಇರುವುದರಿಂದ ಪ್ರಯಾಣಿಕರು ಗೂಗಲ್ ಮ್ಯಾಪ್ ಮೇಲೆ ಅವಲಂಬಿತರಾಗಿದ್ದಾರೆ. ಈ ಗೂಗಲ್ ಮ್ಯಾಪ್​ನಲ್ಲಿ ಕನ್ನಡದಲ್ಲಿಯೂ ಊರುಗಳ ಹೆಸರನ್ನು ದಾಖಲಿಸಿರುವುದು ಖುಷಿಯ ವಿಚಾರ. ಆದರೆ, ಅಲ್ಲಿ ದಾಖಲಾಗಿರುವ ಊರುಗಳ ಹೆಸರು ತಪ್ಪಾಗಿದೆ. ಗೂಗಲ್ ಮ್ಯಾಪ್‍ಗಳನ್ನು ಹೆಚ್ಚಾಗಿ ಜನ ಬಳಕೆಯಲ್ಲಿ ತೊಡಗಿರುವುದರಿಂದಾಗಿ ಅದರಲ್ಲಿರುವ ರಾಜ್ಯದ ನಗರಗಳ ತಪ್ಪು ಹೆಸರುಗಳನ್ನು ಕೂಡಲೇ ಸರಿಪಡಿಸಿ ಬಳಕೆಗೆ ಒದಗಿಸಬೇಕು. ಈ ಸಂಬಂಧ ಅಗತ್ಯವಿದ್ದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯ ಪಡೆಯಬಹುದು ಎಂದು ಟಿ.ಎಸ್. ನಾಗಾಭರಣ ಪತ್ರದಲ್ಲಿ ತಿಳಿಸಿದ್ದರು.

ಆಗಸ್ಟ್​ 21ರಂದು ನಾವು ಗೂಗಲ್​ಗೆ ಈ ಬಗ್ಗೆ ಪತ್ರ ಬರೆದಿದ್ದೆವು. ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಗೂಗಲ್ ಇಂಡಿಯಾವನ್ನು ಸಂಪರ್ಕಿಸುವುದೇ ದೊಡ್ಡ ಕಷ್ಟಕರ ಸಂಗತಿಯಾಗಿದೆ. ಅವರ ದೂರವಾಣಿ ಸಂಖ್ಯೆ, ಇ-ಮೇಲ್​ಗಳಿಗೆ ಸಂಪರ್ಕ ಮಾಡಿದರೆ ಪ್ರತಿಕ್ರಿಯೆ ಬರುತ್ತಿಲ್ಲ. ವೈಟ್​ಫೀಲ್ಡ್ ಅನ್ನು ವಿಟ್ಟಿಫೈಲ್ಡ್, ರಿಪ್ಪನ್​ಪೇಟೆಯನ್ನು ರಿಪ್ಪೊನ್​ಪೇಟ, ಹಾರ್ನಹಳ್ಳಿಯನ್ನು ಹನಹಳ್ಳಿ, ಹೊನ್ನಾಳಿಯನ್ನು ಹೊನ್ನಳ್ಳಿ, ಗುರ್​ಮಿಟ್ಕಲ್ ಅನ್ನು ಗುಮಟ್ಕಲ್ ಹೀಗೆ ತಪ್ಪಾಗಿ ಗೂಗಲ್​ನಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಕೇಳಿದರೆ ತಾಂತ್ರಿಕ ದೋಷ ಎಂದು ಕಾರಣ ನೀಡುತ್ತಾರೆ ಎಂದು ಟಿ.ಎಸ್. ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಬಗ್ಗೆ ಟೈಮ್ಸ್​ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಗೂಗಲ್ ಇಂಡಿಯಾದ ವಕ್ತಾರರು, ಗೂಗಲ್ ಮ್ಯಾಪ್​ನಲ್ಲಿ ಕರ್ನಾಟಕದ ಊರುಗಳ ಸ್ಪೆಲಿಂಗ್​ನಲ್ಲಿ ತಪ್ಪಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ನಮ್ಮ ತಂಡದವರು ಕಾರ್ಯೋನ್ಮುಖರಾಗಿದ್ದಾರೆ. ಕೆಲವೇ ದಿನಗಳಲ್ಲಿ ಗೂಗಲ್ ಮ್ಯಾಪ್​ನಲ್ಲಿ ಆ ಊರುಗಳ ಹೆಸರು ಸರಿಯಾಗಿ ಡಿಸ್​ಪ್ಲೇ ಆಗಲಿದೆ. ಗೂಗಲ್ ಮ್ಯಾಪ್ ಬಳಕೆದಾರರು ನೀಡುವ ಎಲ್ಲ ರೀತಿಯ ಪ್ರತಿಕ್ರಿಯೆ, ಸಲಹೆಗಳನ್ನೂ ನಾವು ಸ್ವೀಕರಿಸುತ್ತೇವೆ. ಅದು ನಮ್ಮ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ ವೈಟ್​ಫೀಲ್ಡ್, ತುಮಕೂರು ಮುಂತಾದ ಹೆಸರುಗಳನ್ನು ಗೂಗಲ್ ಮ್ಯಾಪ್​ನಲ್ಲಿ ಸರಿಪಡಿಸಲಾಗಿದೆ.

ಇದನ್ನೂ ಓದಿ: ಅಮೆರಿಕದ ಗೂಗಲ್, ಆಪಲ್​ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?

ನಮ್ಮ ಕನ್ನಡದ ಹುಡುಗ ಯಶ್ ಅಫಘಾನಿಸ್ತಾನದ ಪಂಜಶೀರ್ ಯೋಧರಿಗೂ ಪ್ರೇರಣೆಯಾಗಿದ್ದಾರೆಯೇ?

(Google Bengaluru Corrects Karnataka Cities and Villages Name in Google Map after Kannada Development Authority Nudge)

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ