AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಿ 20 ವರ್ಷದ ನಂತರ ಪತ್ನಿಯನ್ನು ಕೊಂದು ಜಮೀನಿನಲ್ಲಿ ಹೂತಿಟ್ಟ ಆರೋಪದಡಿ ಗಂಡನ ಬಂಧನ

ತನಿಖೆ ನಡೆಸಿದ ಪೊಲೀಸರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಕೊಲ್ಹಾರ ತಹಸೀಲ್ದಾರರ ಸಮ್ಮುಖದಲ್ಲಿ ದ್ರಾಕ್ಷಾಯಣಿ ಶವ ಹೊರತೆಗೆದಿದ್ದಾರೆ.

ಮದುವೆಯಾಗಿ 20 ವರ್ಷದ ನಂತರ ಪತ್ನಿಯನ್ನು ಕೊಂದು ಜಮೀನಿನಲ್ಲಿ ಹೂತಿಟ್ಟ ಆರೋಪದಡಿ ಗಂಡನ ಬಂಧನ
ಪತಿ ರಾಚಯ್ಯ ಮತ್ತು ಪತ್ನಿ ದಾಕ್ಷಾಯಣಿ
TV9 Web
| Edited By: |

Updated on:Aug 28, 2021 | 7:23 PM

Share

ವಿಜಯಪುರ: ಪತ್ನಿಯನ್ನು ಕೊಲೆ ಮಾಡಿ ಜಮೀನಿನಲ್ಲಿ ಹೂತ್ತಿಟ್ಟಿದ್ದ ಆರೋಪದಡಿ ಪತಿರಾಯನೊಬ್ಬನನ್ನು ಕೋಲ್ಹಾರ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, 36 ವರ್ಷದ ದ್ರಾಕ್ಷಾಯಣಿ ರಾಚಯ್ಯ ಬನ್ನಿಗೋಳಮಠ (36) ಪತಿಯಿಂದ ಕೊಲೆಯಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈಕೆಯ ಪತಿ ರಾಚಯ್ಯ ಬನ್ನಿಗೋಳಮಠ ತನ್ನ ಪತ್ನಿಯನ್ನೇ ಕೊಲೆಗೈದು ಜಮೀನಿನಲ್ಲಿ ಹೂತುಹಾಕಿದ್ದ ಎಂಬ ಆರೋಪದಡಿ ಬಂಧಿಸಲಾಗಿದೆ.

20 ವರ್ಷಗಳ ಹಿಂದೆ ರಾಚಯ್ಯ ಮತ್ತು ದ್ರಾಕ್ಷಾಯಣಿ ವಿವಾಹವಾಗಿದ್ದರು. ಮದುವೆಯಾದಾಗಿನಿಂದಲೂ ರಾಚಯ್ಯ ಪತ್ನಿ ಜೊತೆಗೆ ಜಗಳ ಮಾಡಿಕೊಳ್ಳುತ್ತಲೇ ಇದ್ದ. ದ್ರಾಕ್ಷಾಯಣಿ ತನ್ನ ಪತಿಯೊಂದಿಗೆ ಜಗಳವಾಡಿ ಎಂಟು ತಿಂಗಳ ಹಿಂದೆ ಮೂವರು ಮಕ್ಕಳ ಸಮೇತ ತವರು ಸೇರಿದ್ದಳು. ಮಕ್ಕಳನ್ನು ಶಾಲೆಗೆ ಸೇರಿಸಲು ಆಧಾರ ಕಾರ್ಡ್ ತರಲು ಪತಿ ವಾಸವಿದ್ದ ಮನೆಗೆ ಕಳೆದ ಸೋಮವಾರ ದ್ರಾಕ್ಷಾಯಣಿ ಬಂದಿದ್ದಳು. ಆಧಾರ ಕಾರ್ಡ್ ತೆಗೆದುಕೊಂಡು ವಾಪಸ್ ತವರಿಗೆ ಹೋಗುವಾಗ ರಾಚಯ್ಯ ಪತ್ನಿಯನ್ನು ಪುಸಲಾಯಿಸಿಕೊಂಡು ಜಮೀನಿಗೆ ಕರೆಯ್ದೊಯ್ದಿದ್ದ. ಅಲ್ಲಿಯೇ ಪತ್ನಿ ದಾಕ್ಷಾಯಣಿಯನ್ನು ಉಸಿರುಗಟ್ಟಿ‌ಸಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ‌ ಜಮೀನಿನ ಬಳಿ‌ ಕಾಲುವೆ ಬಳಿ ಪತ್ನಿಯ ಮೃತದೇಹವನ್ನು ರಾಚಯ್ಯ ಹೂತುಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ದಿನಗಳವರೆಗೂ ಮಗಳು ಬಾರದ್ದಕ್ಕೆ ದಾಕ್ಷಾಣಿಯ ತವರು ಮನೆಯವರು ಗಾಬರಿಗೊಂಡಿದ್ದರು. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊಲೆಯ ಬಳಿಕ ದ್ರಾಕ್ಷಾಯಣಿಯ ಮೊಬೈಲನ್ನು ರಾಚಯ್ಯನೇ ಉಪಯೋಗಿಸುತ್ತಿದ್ದ. ತನಿಖೆ ನಡೆಸಿದ ಪೊಲೀಸರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಕೊಲ್ಹಾರ ತಹಸೀಲ್ದಾರರ ಸಮ್ಮುಖದಲ್ಲಿ ದ್ರಾಕ್ಷಾಯಣಿ ಶವ ಹೊರತೆಗೆದಿದ್ದಾರೆ. ಮುದ್ದೇಬಿಹಾಳ ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿ ರಾಚಯ್ಯ ಕೊಲ್ಹಾರ ಪೊಲೀಸರ ವಶದಲ್ಲಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

Vijayapura Rain: ವಿಜಯಪುರ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಸುರಿದ ಮಳೆ

ಕೋಲಾರದ ಕಲ್ಲು ಕುಟುಕರ ಸವಾಲಿನಂತಹ ಕಷ್ಟದ ಕೆಲಸಕ್ಕೆ ಬೇಕಿದೆ ಕಾನೂನಾತ್ಮಕ ಪರಿಹಾರ

(Vijayapura Husband who killed his wife after 20 years of marriage and buried her on the farm accused husband arrested)

Published On - 7:22 pm, Sat, 28 August 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ