‘ನಾವು ನಮ್ಮ ಮಕ್ಕಳನ್ನು ಉಳಿಸಬೇಕು’: ದೆಹಲಿಯಲ್ಲಿ ಶಾಲೆ ಪುನರಾರಂಭ ಬಗ್ಗೆ ಏಮ್ಸ್ ವೈದ್ಯರ ಸಲಹೆ

ನಾವು ಸಾಧಕ -ಬಾಧಕಗಳನ್ನು ನೋಡಬೇಕು. ಮಕ್ಕಳು ಮನೆಯಲ್ಲಿ ಸುಸ್ತಾಗಿದ್ದಾರೆ ಎಂದು ನಮಗೆ ತಿಳಿದಿದೆ. ಆದರೆ ನಾವು ಅಪಾಯಗಳನ್ನೂ ನೋಡಬೇಕು. ಈ ಮಕ್ಕಳಿಗೆ ಲಸಿಕೆ ಹಾಕಲಾಗಿಲ್ಲ. ಒಮ್ಮೆ ಅವರು ಶಾಲೆಗೆ ಹೋದಾಗ, ನಾವು ಅವರನ್ನು ಲಸಿಕೆ ಹಾಕದ ವ್ಯಕ್ತಿಗಳೆಂದು ಪರಿಗಣಿಸಬೇಕು

'ನಾವು ನಮ್ಮ ಮಕ್ಕಳನ್ನು ಉಳಿಸಬೇಕು': ದೆಹಲಿಯಲ್ಲಿ ಶಾಲೆ ಪುನರಾರಂಭ ಬಗ್ಗೆ ಏಮ್ಸ್ ವೈದ್ಯರ ಸಲಹೆ
ಪ್ರಾತಿನಿಧಿಕ ಚಿತ್ರ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Aug 28, 2021 | 6:06 PM

ದೆಹಲಿ: ದೆಹಲಿ ಸರ್ಕಾರವು ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ ನಂತರ, ವೈದ್ಯಕೀಯ ತಜ್ಞರು ಮಕ್ಕಳನ್ನು ಶಾಲೆಗೆ ಹಾಜರಾಗಲು ಆರಂಭಿಸಿದ ನಂತರ ಲಸಿಕೆ ಹಾಕದ ವ್ಯಕ್ತಿಗಳಂತೆ ಅವರನ್ನು ನೋಡಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ. ಏಮ್ಸ್ ವೈದ್ಯರಾದ ಡಾ.ನವನೀತ್ ವಿಗ್, ಮಕ್ಕಳು ಮನೆಯಲ್ಲಿ ಬೇಸರಗೊಂಡಿದ್ದರೂ ಶಾಲೆಗಳಲ್ಲಿ ಹಾಜರಾದಾಗ ಉಂಟಾಗುವ ಅಪಾಯಗಳನ್ನು ನೋಡುವುದು ಮುಖ್ಯ ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. “ನಾವು ಸಾಧಕ -ಬಾಧಕಗಳನ್ನು ನೋಡಬೇಕು. ಮಕ್ಕಳು ಮನೆಯಲ್ಲಿ ಸುಸ್ತಾಗಿದ್ದಾರೆ ಎಂದು ನಮಗೆ ತಿಳಿದಿದೆ. ಆದರೆ ನಾವು ಅಪಾಯಗಳನ್ನೂ ನೋಡಬೇಕು. ಈ ಮಕ್ಕಳಿಗೆ ಲಸಿಕೆ ಹಾಕಲಾಗಿಲ್ಲ. ಒಮ್ಮೆ ಅವರು ಶಾಲೆಗೆ ಹೋದಾಗ, ನಾವು ಅವರನ್ನು ಲಸಿಕೆ ಹಾಕದ ವ್ಯಕ್ತಿಗಳೆಂದು ಪರಿಗಣಿಸಬೇಕು ”ಎಂದು ವಿಗ್ ಹೇಳಿದ್ದನ್ನು ಎಎನ್‌ಐ ವರದಿ ಉಲ್ಲೇಖಿಸಿದೆ.

ದೆಹಲಿಯಲ್ಲಿ ಕೊವಿಡ್ -19 ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರ ಶುಕ್ರವಾರ ಶಾಲಾ, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಹಂತ ಹಂತವಾಗಿ ದೈಹಿಕ ತರಗತಿಗಳನ್ನು ಸೆಪ್ಟೆಂಬರ್ 1 ರಿಂದ ಆರಂಭಿಸಬಹುದು ಎಂದು ಹೇಳಿದೆ. ದೆಹಲಿ ಸೆಕ್ರೆಟರಿಯೇಟ್ ನಲ್ಲಿ ನಡೆದ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಯಾವುದೇ ವಿದ್ಯಾರ್ಥಿಗಳನ್ನು ದೈಹಿಕ ತರಗತಿಗಳಿಗೆ ಹಾಜರಾಗುವಂತೆ ಒತ್ತಾಯಿಸುವುದಿಲ್ಲ ಎಂದು ಭರವಸೆ ನೀಡಿದರು.

“ಸಾಮಾಜಿಕ ದೂರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಮತ್ತು ಯಾವುದೇ ವಿದ್ಯಾರ್ಥಿಯನ್ನು ಶಾಲೆಗೆ ಬರಲು ಒತ್ತಾಯಿಸುವುದಿಲ್ಲ. ವಿದ್ಯಾರ್ಥಿಗಳು ಬರಲು ಪೋಷಕರ ಒಪ್ಪಿಗೆ ಅತ್ಯಗತ್ಯವಾಗಿರುತ್ತದೆ. ಪೋಷಕರು ಅನುಮತಿಸದಿದ್ದರೆ, ವಿದ್ಯಾರ್ಥಿಗಳು ಬಲವಂತವಾಗಿ ಬರಬಾರದು, ಅವರನ್ನು ಗೈರಾಗಿದ್ದಾರೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸಿಸೋಡಿಯಾ ಹೇಳಿದರು.

ಕಳೆದ 24 ಗಂಟೆಗಳಲ್ಲಿ 46 ಹೊಸ ಸೋಂಕುಗಳು ಮತ್ತು ಯಾವುದೇ ಹೆಚ್ಚುವರಿ ಸಾವುಗಳು ವರದಿಯಾಗಿಲ್ಲ ಎಂದು ದೆಹಲಿ ಸರ್ಕಾರವು ಆರೋಗ್ಯ ಬುಲೆಟಿನ್ ನಲ್ಲಿ ಹೇಳಿದೆ. ಇಲ್ಲಿ ಧನಾತ್ಮಕ ದರ 0.06%. ಪರೀಕ್ಷಾ ಸಕಾರಾತ್ಮಕತೆಯ ದರವು 89 ದಿನಗಳವರೆಗೆ ಶೇ 1 ಕ್ಕಿಂತ ಕಡಿಮೆ ಇರುವುದರಿಂದ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು (DDMA) ಸೆಪ್ಟೆಂಬರ್ 1 ರಿಂದ ಹಂತ ಹಂತವಾಗಿ ಶಾಲೆಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲು ನಿರ್ಧರಿಸಿತು.

ಡಾ. ವಿಗ್ ಅವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಶಾಲೆಗಳಿಗೆ ಹಾಜರಾಗಲು ಅನುವು ಮಾಡಿಕೊಡುವಾಗ ಸಮತೋಲನವನ್ನು ಕಾಯ್ದುಕೊಳ್ಳುವ ಮತ್ತು ಪರೀಕ್ಷಾ ಸಕಾರಾತ್ಮಕತೆಯ ಪ್ರಮಾಣವು ಶೇ 0.5 ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. “ನಾವು ನಮ್ಮ ಮಕ್ಕಳನ್ನು ಉಳಿಸಬೇಕು. ಶಾಲೆಗಳಲ್ಲಿ ಉಸಿರಾಟದ ನೈರ್ಮಲ್ಯ, ಸ್ವಚ್ಛತೆ, ಮಾಸ್ಕ್ ಧರಿಸುವುದನ್ನು ಖಾತ್ರಿಪಡಿಸಬೇಕು, ”ಎಂದು ವೈದ್ಯರು ಹೇಳಿದರು.

ಇದನ್ನೂ ಓದಿ: ನಮ್ಮತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ, ಬಿಜೆಪಿ ದೇಶವನ್ನೇ ಮಾರಿದೆ: ಮಮತಾ ಬ್ಯಾನರ್ಜಿ

ಇದನ್ನೂ ಓದಿ:  ಬಿಜೆಪಿಯನ್ನು ದೇಶದಿಂದಲೇ ಕಿತ್ತೊಗೆಯುತ್ತೇವೆ, ತಾಕತ್ತಿದ್ದರೆ ಟಿಎಂಸಿಯನ್ನು ತಡೆಯಿರಿ; ಅಮಿತ್​ ಶಾಗೆ ಅಭಿಷೇಕ್ ಬ್ಯಾನರ್ಜಿ ಸವಾಲು

(AIIMS medical experts have highlighted the need to treat children as unvaccinated individuals)

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್