ನಮ್ಮತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ, ಬಿಜೆಪಿ ದೇಶವನ್ನೇ ಮಾರಿದೆ: ಮಮತಾ ಬ್ಯಾನರ್ಜಿ

Mamata Banerjee: ಸರ್ಕಾರ ದೇಶವನ್ನು ಮಾರಲು ಪ್ರಯತ್ನಿಸುತ್ತಿದೆ. ರೈಲ್ವೇಗಳು, ವಿಮಾನ ನಿಲ್ದಾಣಗಳು, ಪಿಎಸ್ಯು ಎಲ್ಲವನ್ನೂ ಮಾರಾಟ ಮಾಡಲು ಬಯಸುತ್ತಾರೆ. ನೀವು ದೇಶದ ಮಣ್ಣನ್ನು ಮಾರಾಟ ಮಾಡಬಹುದೇ? ಎಂದು ಬ್ಯಾನರ್ಜಿ ಕೇಳಿದ್ದಾರೆ.

ನಮ್ಮತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ, ಬಿಜೆಪಿ ದೇಶವನ್ನೇ ಮಾರಿದೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 28, 2021 | 5:03 PM

ದೆಹಲಿ: ಕಲ್ಲಿದ್ದಲು ಕಳ್ಳಸಾಗಣೆ ಆರೋಪಿತ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರನ್ನು ಕರೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿ ನಮ್ಮ ವಿರುದ್ಧ ಕೇಂದ್ರ ಏಜೆನ್ಸಿಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಡೈಮಂಡ್ ಹಾರ್ಬರ್  ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಸೆಪ್ಟೆಂಬರ್ 6 ರಂದು ನವದೆಹಲಿಯಲ್ಲಿರುವ ಏಜೆನ್ಸಿಯ ಮುಂದೆ ಹಾಜರಾಗುವಂತೆ ಹೇಳಲಾಗಿದ್ದು , ಅವರ ಪತ್ನಿಗೆ ಸೆಪ್ಟೆಂಬರ್ 1 ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಬಿಜೆಪಿಯು ತನ್ನ ಪಕ್ಷದ ವಿರುದ್ಧ ರಾಜಕೀಯವಾಗಿ ಹೋರಾಡುವಂತೆ ಸವಾಲು ಹಾಕಿದ ಮುಖ್ಯಮಂತ್ರಿ, “ನೀವು ಯಾಕೆ ನಮ್ಮ ವಿರುದ್ಧ ಇಡಿಯನ್ನು ಬಿಡುತ್ತಿದ್ದೀರಿ. ನೀವು ಒಂದು ಪ್ರಕರಣವನ್ನು ನಮ್ಮತ್ತ ಬಿಟ್ಟರೆ ಮೂಟೆಯಷ್ಟು ಪ್ರಕರಣಗಳನ್ನು ನಾವು ಹೊರಗೆ ಹಾಕುತ್ತೇವೆ. ಹೇಗೆ ಹೋರಾಡಬೇಕೆಂದು ನಮಗೆ ತಿಳಿದಿದೆ. ಗುಜರಾತ್ ಇತಿಹಾಸ ನಮಗೆ ತಿಳಿದಿದೆ . ನೈಸರ್ಗಿಕ ಸಂಪನ್ಮೂಲಗಳಿಗೆ ಹಕ್ಕುಗಳ ಹಂಚಿಕೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.

“ಕಲ್ಲಿದ್ದಲು ಭ್ರಷ್ಟಾಚಾರಕ್ಕಾಗಿ ತೃಣಮೂಲದತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ. ಅದು ಕೇಂದ್ರದಲ್ಲಿದೆ. ಅದರ ಮಂತ್ರಿಗಳ ಬಗ್ಗೆ ಏನಂತೀರಿ? ಬಂಗಾಳದ ಕಲ್ಲಿದ್ದಲು ಪ್ರದೇಶ, ಅಸನ್ಸೋಲ್ ಪ್ರದೇಶವನ್ನು ಲೂಟಿ ಮಾಡಿದ ಬಿಜೆಪಿ ನಾಯಕರ ಬಗ್ಗೆ ಏನು ಹೇಳುತ್ತೀರಿ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಪಕ್ಷದ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಮತಾ ಈ ರೀತಿ ಹೇಳಿದ್ದಾರೆ.

ಕೇಂದ್ರವು ಇತ್ತೀಚೆಗೆ ಘೋಷಿಸಿದ ರಾಷ್ಟ್ರೀಯ ನಗದೀಕರಣ ಯೋಜನೆಯನ್ನು (National Monetisation Pipeline plan) ಗುರಿಯಾಗಿಟ್ಟುಕೊಂಡು ಅಲ್ಲಿ ಖಾಸಗಿ ಬಳಕೆಯಿಂದ ಲಾಭದಾಯಕವಲ್ಲದ ಸರ್ಕಾರಿ ಸ್ವತ್ತುಗಳನ್ನು ನಗದೀಕರಿಸಲಾಗುವುದು. ಬಿಜೆಪಿ ಸರ್ಕಾರವು ದೇಶದ ಆಸ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ದೇಶವನ್ನು ಮಾರಲು ಪ್ರಯತ್ನಿಸುತ್ತಿದೆ. ರೈಲ್ವೇಗಳು, ವಿಮಾನ ನಿಲ್ದಾಣಗಳು, ಪಿಎಸ್ಯು ಎಲ್ಲವನ್ನೂ ಮಾರಾಟ ಮಾಡಲು ಬಯಸುತ್ತಾರೆ. ನೀವು ದೇಶದ ಮಣ್ಣನ್ನು ಮಾರಾಟ ಮಾಡಬಹುದೇ? ಎಂದು ಬ್ಯಾನರ್ಜಿ ಕೇಳಿದ್ದಾರೆ.

ಸರ್ಕಾರವು ರಸ್ತೆ ವಲಯದಿಂದ 6 1.6 ಲಕ್ಷ ಕೋಟಿ, ರೈಲ್ವೆ ವಲಯದಿಂದ 1.5 ಲಕ್ಷ ಕೋಟಿ ಮತ್ತು ವಿದ್ಯುತ್ ವಲಯದಿಂದ ₹ 79,000 ಕೋಟಿ ಮೌಲ್ಯದ ಆಸ್ತಿಯನ್ನು ನಗದೀಕರಿಸಲಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. ಕೇಂದ್ರವು ವಿಮಾನ ನಿಲ್ದಾಣಗಳಿಂದ ₹ 20,800 ಕೋಟಿ, ಬಂದರುಗಳಿಂದ ₹ 13,000 ಕೋಟಿ, ಟೆಲಿಕಾಂನಿಂದ ₹ 35,000 ಕೋಟಿ, ಕ್ರೀಡಾಂಗಣಗಳಿಂದ 11,500 ಕೋಟಿ ಮತ್ತು ವಿದ್ಯುತ್ ಪ್ರಸರಣ ವಲಯಗಳಿಂದ ₹ 45,200 ಕೋಟಿ ಹಣ ಗಳಿಸಲಿದೆ.

ಇದನ್ನೂ ಓದಿ: Coal Scam: ಅಕ್ರಮ ಹಣ ವರ್ಗಾವಣೆ ಪ್ರಕರಣ; ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ದಂಪತಿಗೆ ಇ.ಡಿಯಿಂದ ಸಮನ್ಸ್ ಜಾರಿ

ಇದನ್ನೂ ಓದಿ:  ‘ನಮ್ಮ ಸ್ವಾತಂತ್ರ್ಯ ಹತ್ತಿಕ್ಕುವವರ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತೋಣ’ -ಮಮತಾ ಬ್ಯಾನರ್ಜಿ ಸಲಹೆ

(Why are you unleashing the ED against us asks West Bengal Chief Minister Mamata Banerjee)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ