ತಮಿಳುನಾಡಿನಲ್ಲಿರುವ ಶ್ರೀಲಂಕಾದ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಡಲು ಸ್ಟಾಲಿನ್ ನಿರ್ಧಾರ; ಶಿಬಿರದ ಹೆಸರೂ ಬದಲಾವಣೆ
ಶ್ರೀಲಂಕಾದ ತಮಿಳರು ಇರುವ ಶಿಬಿರಗಳಿಗೆ 30 ಕೋಟಿ ರೂ.ವೆಚ್ಚದಲ್ಲಿ ಕುಡಿವ ನೀರು, ವಿದ್ಯುತ್, ಶೌಚಗೃಹದಂಥ ಮೂಲ ಸೌಕರ್ಯಗಳನ್ನು ನೀಡಲಾಗುತ್ತದೆ ಎಂದು ಎಂ.ಕೆ.ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಚೆನ್ನೈ: ‘ಶ್ರೀಲಂಕಾ ತಮಿಳು ನಿರಾಶ್ರಿತರ ಶಿಬಿರ’ದ ಹೆಸರನ್ನು ‘ಶ್ರೀಲಂಕಾ ತಮಿಳು ಪುನರ್ವಸತಿ ಶಿಬಿರ’ ಎಂದು ಬದಲಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Tamil Nadu Chief Minister MK Stalin) ಇಂದು ಘೋಷಿಸಿದ್ದಾರೆ. ಇಲ್ಲಿರುವ ಶ್ರೀಲಂಕಾದ ತಮಿಳರನ್ನು ನಿರಾಶ್ರಿತರು ಎಂದು ಕರೆಯಲು ಅವರು ಅನಾಥರಲ್ಲ. ಅವರೊಂದಿಗೆ ನಾವು, ತಮಿಳುನಾಡಿನ ತಮಿಳರು ಇದ್ದೇವೆ ಎಂದು ಇಂದು ವಿಧಾನಸಭೆಯಲ್ಲಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡಿನ ಪುನರ್ವತಿ ಶಿಬಿರಗಳಲ್ಲಿ ಇರುವ ತಮಿಳಿಗರ ಕ್ಷೇಮಾಭಿವೃದ್ಧಿಗಾಗಿ ಆಗಸ್ಟ್ 27ರಂದು ಎಂ.ಕೆ.ಸ್ಟಾಲಿನ್ 317.4 ಕೋಟಿ ರೂಪಾಯಿ ಘೋಷಿಸಿದ್ದರು. ಹಾಗೇ, ಅವರಿಗಾಗಿ ಸರ್ಕಾರದಿಂದ, 231.54 ಕೋಟಿ ರೂ.ವೆಚ್ಚದಲ್ಲಿ 7469 ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದು ವಿಧಾನಸಭೆಯಲ್ಲಿ ಇಂದು ಸ್ಟಾಲಿನ್ ಘೋಷಿಸಿದ್ದಾರೆ. ಮೊದಲ ಹಂತದಲ್ಲಿ 108.81 ಕೋಟಿ ರೂಪಾಯಿ ವೆಚ್ಚದಲ್ಲಿ 3520 ಮನೆಗಳನ್ನು ಕಟ್ಟಿಸಲಾಗುತ್ತದೆ ಎಂದಿದ್ದಾರೆ.
ಶ್ರೀಲಂಕಾದ ತಮಿಳರು ಇರುವ ಶಿಬಿರಗಳಿಗೆ 30 ಕೋಟಿ ರೂ.ವೆಚ್ಚದಲ್ಲಿ ಕುಡಿವ ನೀರು, ವಿದ್ಯುತ್, ಶೌಚಗೃಹದಂಥ ಮೂಲ ಸೌಕರ್ಯಗಳನ್ನು ನೀಡಲಾಗುತ್ತದೆ. ಹಾಗೇ ಅವರ ಜೀವನ ಮಟ್ಟ ಸುಧಾರಿಸಲು 5 ಕೋಟಿ ರೂಪಾಯಿ ವೆಚ್ಚದ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಸ್ಟಾಲಿನ್ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಸುಮಾರು 3,04,269 ಜನ ಶ್ರೀಲಂಕಾದ ತಮಿಳಿಗರು, 1983ರಿಂದಲೂ ಇದ್ದಾರೆ. 29 ಜಿಲ್ಲೆಗಳಿಂದ 58,822 ನಿರಾಶ್ರಿತರ ಶಿಬಿರಗಳು ಇದ್ದವು. ಆ ಶಿಬಿರಗಳಿಗೆ ಇನ್ನು ಮುಂದೆ ಪುನರ್ವಸತಿ ಶಿಬಿರ ಎಂದು ಕರೆಯಾಲಗುತ್ತದೆ.
ಇದನ್ನೂ ಓದಿ: ಅಪಾಯದ ಅಂಚಿನಲ್ಲಿ ಪಾರಂಪರಿಕ ವಾಟರ್ ಕರೆಜ್; ಅರ್ಧಕ್ಕೆ ನಿಂತ ಭೂ ಕಾಲುವೆ ಕಾಮಗಾರಿ ಆರಂಭಿಸುವಂತೆ ಜನರ ಮನವಿ
ಹಾವೇರಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ತನಿಖೆಗೆ ಎಬಿವಿಪಿ ಒತ್ತಾಯ