ಆಜಾದಿ ಉತ್ಸವದ ಬ್ಯಾನರ್ನಲ್ಲಿಲ್ಲ ನೆಹರೂ ಫೋಟೋ; ಕಾಂಗ್ರೆಸ್ ನಾಯಕರ ಆಕ್ರೋಶ
Azadi ka Amrit Mahotsav: ಟ್ವೀಟ್ ಮಾಡಿರುವ ಶಶಿ ತರೂರ್, ಭಾರತೀಯ ಸ್ವಾತಂತ್ರ್ಯದ ಮುಂಚೂಣಿ ಧ್ವನಿಯಾಗಿರುವ ಜವಾಹರ್ ಲಾಲ್ ನೆಹರೂರವರನ್ನು ಬಿಟ್ಟು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಮಾಡುವುದು ತೀರ ಕ್ಷುಲ್ಲಕ ಎಂದು ಹೇಳಿದ್ದಾರೆ.
ದೆಹಲಿ: ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸುತ್ತಿದೆ. ಆದರೆ ಭಾರತೀಯ ಸಂಶೋಧನಾ ಐತಿಹಾಸಿಕ ಮಂಡಳಿ (ICHR) ವೆಬ್ಸೈಟ್ನಲ್ಲಿರುವ ಬ್ಯಾನರ್ನಲ್ಲಿ ಜವಾಹರ್ ಲಾಲ್ ನೆಹರೂ ಫೋಟೋವನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR)ಯ ವೆಬ್ಸೈಟ್ನಲ್ಲಿ ಈ ಆಜಾದಿ ಕಾ ಅಮೃತ ಮಹೋತ್ಸವ್ದ ಬ್ಯಾನರ್ ಹಾಕಲಾಗಿದೆ. ಅದರಲ್ಲಿ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ವಿನಾಯಕ್ ದಾಮೋದರ್ ಸಾವರ್ಕರ್, ಬಿ.ಆರ್.ಅಂಬೇಡ್ಕರ್ ಸೇರಿ ಹಲವು ಪ್ರಮುಖರ ಫೋಟೋ ಇದೆ. ಆದರೆ ಅದರಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಫೋಟೋವನ್ನು ಹಾಕಿಯೇ ಇಲ್ಲ. ಅದೀಗ ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿ, ಹಲವು ಗಣ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಟ್ವೀಟ್ ಮಾಡಿರುವ ಶಶಿ ತರೂರ್, ಭಾರತೀಯ ಸ್ವಾತಂತ್ರ್ಯದ ಮುಂಚೂಣಿ ಧ್ವನಿಯಾಗಿರುವ ಜವಾಹರ್ ಲಾಲ್ ನೆಹರೂರವರನ್ನು ಬಿಟ್ಟು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಮಾಡುವುದು ತೀರ ಕ್ಷುಲ್ಲಕ. ಈ ಬ್ಯಾನರ್ ಮೂಲಕ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ಮತ್ತೊಮ್ಮೆ ತನ್ನನ್ನು ತಾನು ಅವಮಾನಿಸಿಕೊಂಡಿದೆ. ಇದೊಂದು ಹವ್ಯಾಸವಾಗುತ್ತಿದೆ ಎಂದು ಹೇಳಿದ್ದಾರೆ.
ಶಶಿ ತರೂರ್ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಚತ್ತೀಸ್ಗಡ್ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ಡಿಯೋ, ಜವಾಹರ್ ಲಾಲ್ ನೆಹರೂ ಅವರು ತಮ್ಮ ಮನಸು ಮತ್ತು ಹೃದಯದಿಂದ ಭಾರತೀಯರನ್ನು ಪ್ರೀತಿಸುತ್ತಿದ್ದರು..ಹಾಗೇ, ದೇಶದ ಜನರಿಗೂ ಪ್ರೀತಿ ಪಾತ್ರರಾಗಿದ್ದರು ಎಂದು ಹೇಳಿದ್ದಾರೆ. ಹಾಗೇ, ಗೌರವ್ ಗೊಗೊಯಿ ಕೂಡ ಟ್ವೀಟ್ ಮಾಡಿದ್ದು, ಇನ್ಯಾವುದೇ ದೇಶದ ಸ್ವಾತಂತ್ರ್ಯ ಹೋರಾಟದ ವೆಬ್ಸೈಟ್ನಲ್ಲೂ ನಾವು ಇಂಥದ್ದನ್ನು ನೋಡಲು ಸಾಧ್ಯವಿಲ್ಲ. ಯಾವ ದೇಶವೂ ತನ್ನ ಮೊದಲ ಪ್ರಧಾನಿಯ ಫೋಟೋವನ್ನು ಕೈಬಿಡುವುದಿಲ್ಲ. ಜವಾಹರ್ ಲಾಲ್ ನೆಹರೂ ಮತ್ತು ಅಬುಲ್ ಕಲಾಂ ಆಜಾದ್ ಫೋಟೋ ಹಾಕದೆ ಇರುವುದು ಸರ್ಕಾರದ ಸಣ್ಣತನ ತೋರಿಸುತ್ತದೆ ಎಂದು ಹೇಳಿದ್ದಾರೆ. ಆರ್ಎಸ್ಎಸ್ ಭಾರತದ ಸ್ವಾತಂತ್ರ್ಯ ಸಂಗ್ರಾಮದಿಂದ ದೂರವೇ ಇತ್ತು ಎಂಬುದನ್ನು ಭಾರತ ಎಂದಿಗೂ ಮರೆಯೋದಿಲ್ಲ ಎಂದಿದ್ದಾರೆ.
It is not merely petty but absolutely ahistorical to celebrate Azadi by omitting the pre-eminent voice of Indian freedom, Jawaharlal Nehru. One more occasion for ICHR to disgrace itself. This is becoming a habit! pic.twitter.com/wZzKCvYEcD
— Shashi Tharoor (@ShashiTharoor) August 27, 2021
ಇದನ್ನೂ ಓದಿ: Whatsapp Scam: ವಾಟ್ಸ್ಆ್ಯಪ್ನಲ್ಲಿ ಬರುವ ಸ್ಕ್ಯಾಮ್ ಮೆಸೇಜ್ ಪತ್ತೆ ಮಾಡುವುದು ಈಗ ಸುಲಭ: ಹೀಗೆ ಮಾಡಿ
Kerala Corona cases: ಕೇರಳ ಈಗಲಾದರೂ ಲಾಕ್ಡೌನ್ ಹೇರಬೇಕು, ಗಡಿ ಬಂದ್ ಮಾಡಲಿ: ಬರುಣ್ ದಾಸ್
Published On - 3:46 pm, Sat, 28 August 21