ಮುಂಬೈ ಸೆಪ್ಟೆಂಬರ್ 01: ಶುಕ್ರವಾರ ಮುಂಬೈನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi), ಕಾಂಗ್ರೆಸ್ ಮುಕ್ತ ಭಾರತ ಮಾಡಲು ಬ್ರಿಟಿಷರಿಗೂ ಸಾಧ್ಯವಾಗಿಲ್ಲ. ಅಂಥದರಲ್ಲಿ ಪ್ರಧಾನಿ ಮೋದಿ (Narendra Modi) ಹೇಗೆ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸುತ್ತಾರೆ ಎಂದು ಕೇಳಿದ್ದಾರೆ. ಅಮೆರಿಕಾದಂತೆ ಆ ಕಾಲದಲ್ಲಿ ಇಂಗ್ಲೆಂಡ್ ವಿಶ್ವದ ಸೂಪರ್ ಪವರ್ ಆಗಿತ್ತು. ಅವರಿಗೇ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ, ಕಾಂಗ್ರೆಸ್ (Congress) ಅವರನ್ನು ದೇಶದಿಂದ ಓಡಿಸಿತು. ಆದರೆ ಅದಾನಿ ಜೊತೆಗಿನ ಸಂಬಂಧವು ಕಾಂಗ್ರೆಸ್ ಅನ್ನು ಅಳಿಸಿಹಾಕಲು ಸಾಧ್ಯವಾಗುತ್ತದೆ ಎಂದು ಮೋದಿಜಿ ಭಾವಿಸಿದ್ದಾರೆ. ಅದಾನಿಯವರ ಹಣ ಕಾಂಗ್ರೆಸ್ ಅನ್ನು ಅಳಿಸಿಹಾಕಬಹುದು ಎಂದು ಅವರು ಭಾವಿಸಿದಂತಿದೆ ಎಂದು ರಾಹುಲ್ ಹೇಳಿದ್ದಾರೆ.
1 ಶತಕೋಟಿ ಡಾಲರ್‌ಗಳು ಭಾರತದಿಂದ ಬೇರೆ ದೇಶಗಳಿಗೆ ಹೋಗಿ ಮತ್ತೆ ಬಂದವು ಎಂದು ಹೇಳುವ ವಿಶ್ವದ ಅತಿದೊಡ್ಡ ಹಣಕಾಸು ಪತ್ರಿಕೆಯ ಶೀರ್ಷಿಕೆಯನ್ನು ನೀವೆಲ್ಲರೂ ನೋಡಿರಬೇಕು. ಅದಾನಿಯೊಂದಿಗೆ ಮೋದಿಜಿಗೆ ಗಾಢವಾದ ಮತ್ತು ಹಳೆಯ ಸಂಬಂಧವಿದೆ ಎಂದು ವರದಿ ಹೇಳಿದೆ. ಇಡೀ ದೇಶವು ಅರ್ಥಮಾಡಿಕೊಳ್ಳುತ್ತಿದೆ. ಹಣ ಇಲ್ಲಿಂದ ಹೋಗುತ್ತದೆ, ಅದಾನಿ ಗ್ರೂಪ್ ಷೇರುಗಳ ಬೆಲೆಗಳು ಹೆಚ್ಚಾಗುತ್ತದೆ. ನಂತರ ಹಣ ಬರುತ್ತದೆ.ಅದಾನಿ ಜಿ ವಿಮಾನ ನಿಲ್ದಾಣಗಳನ್ನು ಖರೀದಿಸುತ್ತಾರೆ. ಅಲ್ಲದೇ ಈಗ ಧಾರಾವಿಗೆ ಬರುವ ಕನಸು ಕಾಣುತ್ತಿದ್ದಾರೆ. ಧಾರಾವಿ ಎಂದರೆ ಏನು? ಧಾರಾವಿ ಜನರು ಏನು ಎಂದು ಅವರಿಗೆ ತಿಳಿದಿದೆಯೇ? ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅವರಿಗೆ ತಿಳುವಳಿಕೆ ನೀಡಲಿದೆ” ಎಂದು ಅದಾನಿ ಗ್ರೂಪ್‌ನ ಧಾರಾವಿ ಪುನರಾಭಿವೃದ್ಧಿ ಯೋಜನೆಯ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
LIVE: Address to Congress Workers | Mumbai, Maharashtra https://t.co/wMCvteAAfD
— Rahul Gandhi (@RahulGandhi) September 1, 2023
ಕಾಂಗ್ರೆಸ್ ಪಕ್ಷ ಮುಗಿದೇ ಹೋಯ್ತು ಎಂದು ಹೇಳುತ್ತಿದ್ದೀರಿ, ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿದವರು ಯಾರು? ಮಹಾರಾಷ್ಟ್ರದಲ್ಲಿ ತಲೆ ಎತ್ತಿರುವ ಏಕೈಕ ಪಕ್ಷ ಯಾವುದು? ರಾಜ್ಯದಲ್ಲಿ ನಮ್ಮ ಪಕ್ಷ ಒಡೆಯಲಿಲ್ಲ, ಅಲ್ಲವೇ? ಏಕೆಂದರೆ ನಮ್ಮ ಪಕ್ಷವು ಸಿದ್ಧಾಂತಗಳಿಂದ ಕೂಡಿದೆ. ಇದು ಇತರ ಪಕ್ಷಗಳಂತೆ ಅಲ್ಲ. ಎಲ್ಲಾ ಕಾಂಗ್ರೆಸ್ಸಿಗರ ರಕ್ತನಾಳಗಳಲ್ಲಿ ಒಂದೇ ರಕ್ತವಿದೆ, ಅದು ನಿರ್ಭಯತೆ. ಇದು ಸಿಂಹ ಮತ್ತು ಸಿಂಹಿಣಿಗಳ ಪಕ್ಷವಾಗಿದೆ, ಕಾಂಗ್ರೆಸ್ಸಿಗರು ಹೆದರುವುದಿಲ್ಲ ಎಂದು ನಾನು ನೋಡಿದ್ದೇನೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಅಸಾಧ್ಯ: ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ರಾಹುಲ್ ಗಾಂಧಿ
ಸಂಸತ್ ನಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಸದಸ್ಯರನ್ನು ಲೇವಡಿ ಮಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸದಸ್ಯರು ದೂರದರ್ಶನದಲ್ಲಿ ಹೆಚ್ಚು ತೋರಿಸದಿದ್ದರೂ ಸಂಸತ್ತಿನಲ್ಲಿ ಮುಗುಳುನಗುತ್ತಾರೆ, ನಗುತ್ತಿರುತ್ತಾರೆ. ಆದರೆ ಬಿಜೆಪಿ ಸದಸ್ಯರು ಯಾವಾಗಲೂ ‘ಮುಂಗೋಪಿ’ಗಳ. ಅವರಿಗೆ ಹೇಗೆ ಬದುಕಬೇಕು ಎಂದು ಗೊತ್ತಿಲ್ಲ ಎಂದು ವಿರೋಧ ಪಕ್ಷದ ಮೈತ್ರಿಕೂಟದ ಎರಡು ದಿನಗಳ ಸಭೆಯ ನಂತರ ಮುಂಬೈನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ