Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಅಸಾಧ್ಯ: ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ರಾಹುಲ್ ಗಾಂಧಿ

"ನಾನು ಲಡಾಖ್‌ನಲ್ಲಿ ಒಂದು ವಾರ ಕಳೆದಿದ್ದೇನೆ. ನಾನು ಚೀನಿಯರು ಇರುವ ಸ್ಥಳದ ಮುಂದೆಯೇ ಪಾಂಗಾಂಗ್ ಸರೋವರಕ್ಕೆ ಹೋಗಿದ್ದೆ. ನಾನು ವಿವರವಾದ ಚರ್ಚೆಯನ್ನು ನಡೆಸಿದ್ದೇನೆ, ಬಹುಶಃ ಲಡಾಖ್‌ನ ಹೊರಗಿನ ಯಾವುದೇ ರಾಜಕಾರಣಿ ಲಡಾಖ್‌ನ ಜನರೊಂದಿಗೆ ನಡೆಸಿದ ಅತ್ಯಂತ ವಿವರವಾದ ಚರ್ಚೆ ಅದಾಗಿತ್ತು ಎಂದ ರಾಹುಲ್ ಗಾಂಧಿ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಅಸಾಧ್ಯ: ಇಂಡಿಯಾ ಮೈತ್ರಿಕೂಟ ಸಭೆಯಲ್ಲಿ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Sep 01, 2023 | 7:29 PM

ಮುಂಬೈ ಸೆಪ್ಟೆಂಬರ್ 01: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಬಿಜೆಪಿ (BJP) ಭ್ರಷ್ಟಾಚಾರದಿಂದ ಕೂಡಿದ್ದು. ಇದೇ ಮೊದಲ ಬಾರಿಗೆ ಇಂಡಿಯಾ (INDIA) ಮೈತ್ರಿಕೂಟವು ಅದನ್ನು ಸಾಬೀತು ಪಡಿಸುತ್ತದೆ ಎಂದು ಮುಂಬೈನಲ್ಲಿ ನಡೆದ ವಿರೋಧ ಪಕ್ಷದ ಮೈತ್ರಿಕೂಟದ ಎರಡು ದಿನಗಳ ಸಭೆ ಮುಕ್ತಾಯ ದಿನವಾದ ಇಂದು(ಶುಕ್ರವಾರ) ರಾಹುಲ್ ಗಾಂಧಿ ಹೇಳಿದರು. ಬಿಜೆಪಿ ಈ ಚುನಾವಣೆಯನ್ನು ಗೆಲ್ಲುವುದು ಅಸಾಧ್ಯ. ಆದ್ದರಿಂದ ನಮ್ಮ ಮುಂದಿರುವ ಕಾರ್ಯವು ಅತ್ಯಂತ ಸಮರ್ಥ ರೀತಿಯಲ್ಲಿ ಒಗ್ಗೂಡುವುದು. ಈ ನಿಟ್ಟಿನಲ್ಲಿ ಎರಡು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮನ್ವಯ ಸಮಿತಿ ಮತ್ತು ನಾವು ಎಲ್ಲಾ ಸೀಟು ಹಂಚಿಕೆ ಚರ್ಚೆಗಳನ್ನು ತ್ವರಿತಗೊಳಿಸುತ್ತೇವೆ. ಇವು ಎರಡು ಪ್ರಬಲ ಹಂತಗಳಾಗಿವೆ. ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಸೋಲಿಸುತ್ತದೆ ಎಂದು ರಾಹುಲ್ ಹೇಳಿದ್ದಾರೆ.

ಬಡವರಿಂದ ಹಣ ಪಡೆದು ಅದನ್ನು ಕೆಲವರಿಗೆ ವರ್ಗಾಯಿಸುವುದು ಪ್ರಧಾನಿ ಮೋದಿ ಸರ್ಕಾರದ ಹಿಂದಿನ ಆಲೋಚನೆಯಾಗಿದೆ. ಆದ್ದರಿಂದ ನಾವು ಮತ್ತೊಮ್ಮೆ ಬಡವರನ್ನು ಒಳಗೊಳ್ಳುವ ಸ್ಪಷ್ಟ ಮಾರ್ಗ, ಅಭಿವೃದ್ಧಿ ಮಾರ್ಗ, ಸ್ಪಷ್ಟವಾದ ಆಲೋಚನೆಗಳನ್ನು ಪ್ರಸ್ತಾಪಿಸಲಿದ್ದೇವೆ. ಜನರು, ರೈತರು, ಕಾರ್ಮಿಕರು ಈ ದೇಶದ ಪ್ರಗತಿಯಲ್ಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ನನಗಿಂತ ಹೆಚ್ಚು ಹಿರಿಯ ನಾಯಕರು ಇಲ್ಲಿ ಇದ್ದಾರೆ.ಈ ಮೈತ್ರಿಯಲ್ಲಿನ ನಿಜವಾದ ಕೆಲಸವೆಂದರೆ ಈ ಮೈತ್ರಿಕೂಟದ ನಾಯಕರ ನಡುವೆ ಬೆಸೆದುಕೊಂಡಿರುವ ಸಂಬಂಧಗಳು. ಈ ಸಭೆಗಳು ಬಾಂಧವ್ಯವನ್ನು ನಿರ್ಮಿಸಿವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ನಾಯಕರ ನಡುವೆ, ನಾವು ವಿಷಯಗಳನ್ನು ಸಂಪರ್ಕಿಸುವ ರೀತಿಯಲ್ಲಿ ಎಲ್ಲಾ ನಾಯಕರಲ್ಲಿ ಫ್ಲೆಕ್ಸಿಬಿಲಿಟಿ ಇರುವುದನ್ನು ನಾನು ನೋಡುತ್ತೇನೆ. ಭಿನ್ನಾಭಿಪ್ರಾಯಗಳಿವ.ಆದರೆ ಈ ಭಿನ್ನಾಭಿಪ್ರಾಯಗಳನ್ನು ಹೇಗೆ ಕಡಿಮೆ ಮಾಡಲಾಗಿದೆ, ಅದನ್ನು ನಿಭಾಯಿಸಿದ ರೀತಿ ನೋಡಿ ನಾನು ಪ್ರಭಾವಿತನಾಗಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ: ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ನಿರ್ಣಯ

ಚೀನಾ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ

“ನಾನು ಲಡಾಖ್‌ನಲ್ಲಿ ಒಂದು ವಾರ ಕಳೆದಿದ್ದೇನೆ. ನಾನು ಚೀನಿಯರು ಇರುವ ಸ್ಥಳದ ಮುಂದೆಯೇ ಪಾಂಗಾಂಗ್ ಸರೋವರಕ್ಕೆ ಹೋಗಿದ್ದೆ. ನಾನು ವಿವರವಾದ ಚರ್ಚೆಯನ್ನು ನಡೆಸಿದ್ದೇನೆ, ಬಹುಶಃ ಲಡಾಖ್‌ನ ಹೊರಗಿನ ಯಾವುದೇ ರಾಜಕಾರಣಿ ಲಡಾಖ್‌ನ ಜನರೊಂದಿಗೆ ನಡೆಸಿದ ಅತ್ಯಂತ ವಿವರವಾದ ಚರ್ಚೆ ಅದಾಗಿತ್ತು. ಅಲ್ಲಿನ ಕುರುಗಾಹಿಗಳು, ಪ್ಯಾಂಗೊಂಗ್ ಸರೋವರದ ನಾಯಕರು ಮತ್ತು ಪ್ಯಾಂಗೊಂಗ್ ಸರೋವರದ ಸುತ್ತಮುತ್ತ ವಾಸಿಸುವ ಜನರು ಚೀನಾ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಚೀನಾ ಭಾರತದ ಭೂಮಿಯನ್ನು ತೆಗೆದುಕೊಂಡಿಲ್ಲ ಎಂದು ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು. ಸರ್ಕಾರ ಮತ್ತು ಚೀನಿಯರ ನಡುವೆ ಏನೋ ನಡೆದಿದೆ. ಗಡಿಯಲ್ಲಿ ಸ್ಪಷ್ಟವಾಗಿ ಬದಲಾವಣೆಯಾಗಿದೆ. ನಮ್ಮ ಕುರಿಗಾಹಿಗಳು ತಮಗೆ ಮೊದಲು ಅನುಮತಿಸಿದ ಪ್ರದೇಶಕ್ಕೆ ಅವರನ್ನು ಅನುಮತಿಸಲಾಗುತ್ತಿಲ್ಲ ಎಂದು ನನಗೆ ಹೇಳಿದರು. ಲಡಾಖ್‌ನಲ್ಲಿ ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ ರಾಹುಲ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Fri, 1 September 23