ದೆಹಲಿ: ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೀಡಿದ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಸ್ವೀಕರಿಸಿದ್ದಾರೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಟ್ವೀಟ್ ಮಾಡಿದ್ದು, “ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ” ಎಂದು ಹೇಳಿದ್ದಾರೆ.
Hon’ble Congress President has accepted the resignation of Captain Amarinder Singh from the primary membership of Indian National Congress.
— K C Venugopal (@kcvenugopalmp) November 3, 2021
ಅಮರಿಂದರ್ ಸಿಂಗ್ ಅವರು ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪದಚ್ಯುತಗೊಳಿಸಲು “ಮಧ್ಯರಾತ್ರಿ ಸಂಚು” ಮಾಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದರು. 79 ವರ್ಷದ ನಾಯಕ ಅವರು ಸಿಧು ಅವರನ್ನು “ಪಾಕಿಸ್ತಾನದ ಆಪ್ತ” ಎಂದು ಕರೆದ ಸಿಂಗ್ ಪಂಜಾಬ್‌ನ ಮಾಜಿ ಎಐಸಿಸಿ ಉಸ್ತುವಾರಿ ಹರೀಶ್ ರಾವತ್ ಅವರನ್ನು “ಸಂಶಯಾಸ್ಪದ ವ್ಯಕ್ತಿ” ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಪಂಜಾಬ್ ಸಚಿವರಾದ ಪರಗಟ್ ಸಿಂಗ್ ಮತ್ತು ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಮಾಜಿ ಸಿಎಂ ಅವರ ಪಕ್ಷ ಮತ್ತು ಬಿಜೆಪಿಯೊಂದಿಗಿನ ಬಾಂಧವ್ಯದ ಬಗ್ಗೆ ವಾಗ್ದಾಳಿ ನಡೆಸಿದರು.
ಕ್ರೀಡೆ ಮತ್ತು ಶಿಕ್ಷಣ ಸಚಿವ ಪರಗಟ್ ಅಮರಿಂದರ್ ಅವರ ಹೊಸ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ – ಇದು “ಪಂಜಾಬಿಗಳು” ಅಥವಾ “ಲೋಕ” ಗಾಗಿ ಅಲ್ಲ ಖಂಡಿತವಾಗಿಯೂ “ಕಾಂಗ್ರೆಸ್” ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಅದೇ ವೇಳೆ ರೈತ ವಿರೋಧಿ ಬಿಜೆಪಿಯೊಂದಿಗೆ ಸೀಟು ಹಂಚಿಕೆಗೆ ಕ್ಯಾಪ್ಟನ್ ಅಮರಿಂದರ್ ಅವರ ಯೋಜನೆಗಳ ಬಗ್ಗೆ ವಾರಿಂಗ್ ಟೀಕಾ ಪ್ರಹಾರ ಮಾಡಿದ್ದಾರೆ. “ಆತ್ಮೀಯ ಅಮರಿಂದರ್ ಸಾಹಬ್, ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರಿಗೆ ನೀವು ಬರೆದ ಪತ್ರದಲ್ಲಿ ಕಾಂಗ್ರೆಸ್ ಪಂಜಾಬ್ ಮುಖ್ಯಸ್ಥ ಸರ್ದಾರ್ ಸಿಧು, ಪಾಕ್ ಸೇನಾ ಮುಖ್ಯಸ್ಥ ಮತ್ತು ಪಾಕ್ ಪಿಎಂ ಅವರನ್ನು ಆಲಂಗಿಸಿದ್ದು ನೀವು ಕಾಂಗ್ರೆಸ್ ಪಕ್ಷವನ್ನು ತೊರೆಯಲು ಕಾರಣ ಎಂದು ಉಲ್ಲೇಖಿಸಿದ್ದೀರಿ. ನೀವು ಈಗ ರೈತ ವಿರೋಧಿ ಬಿಜೆಪಿಯೊಂದಿಗೆ ‘ಸೀಟು ಹಂಚಿಕೆ’ ಮಾಡುತ್ತಿರುವಂತೆ ನೀವು ಹೊಸದಾಗಿ ಕಂಡುಕೊಂಡಿರುವ ಬಮ್‌ಚುಮ್‌ಗಳ ಕೆಲವು ಚಿತ್ರಗಳು ಇಲ್ಲಿವೆ” ಎಂದು ಅವರು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಜತೆಗಿನ ಹಳೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲರ ಹೆಸರುಗಳನ್ನು ಬಹಿರಂಗಪಡಿಸುವಂತೆ ಪಕ್ಷದ ಸಂಸದ ಜಿಎಸ್ ಔಜ್ಲಾ ಅಮರಿಂದರ್ ಅವರನ್ನು ಕೇಳಿದರು. “ನಾನಷ್ಟೇ ಅಲ್ಲ, ಇಡೀ ವಿಶ್ವದ ಪಂಜಾಬಿಗಳು ಮರಳು ಮತ್ತು ಇತರ ಮಾಫಿಯಾಗಳಿಂದ ಮಾದಕವಸ್ತು ಹರಡುವಿಕೆ ಮತ್ತು ಲೂಟಿಗೆ ಕಾರಣವಾಗಿರುವ ಮಂತ್ರಿಗಳು, ರಾಜಕೀಯ ಹುನ್ನಾರದವರು, ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಹೆಸರನ್ನು ನೀವು ಬಹಿರಂಗಪಡಿಸುತ್ತೀರಿ ಎಂದು ನಿರೀಕ್ಷಿಸುತ್ತಾರೆ. ”ಎಂದು ಔಜ್ಲಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Punjab Politics ಅಮರಿಂದರ್ ಸಿಂಗ್ ವಿರುದ್ಧ ಸಿಧು ಆಪ್ತರಾದ ಪರಗಟ್ ಸಿಂಗ್, ವಾರಿಂಗ್ ಟೀಕೆ
Published On - 11:22 am, Thu, 4 November 21