ನವದೆಹಲಿ: ಸೋನಿಯಾ ಗಾಂಧಿಯವರ ಆತ್ಮಚರಿತ್ರೆಯ ಕೆಲಸಗಳು ಹಲವು ವರ್ಷಗಳಿಂದ ನಡೆಯುತ್ತಿವೆ. ಕೊನೆಗೂ ಇದೀಗ ಅದು ಪ್ರಕಟಣೆಗೆ ಅಣಿಯಾಗಿದೆ. ಆದರೆ, ಆತ್ಮಕಥನದ ಪ್ರಕಟಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಸೋನಿಯಾ ಗಾಂಧಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾರ್ಪರ್‌ಕಾಲಿನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಂತ್ ಪದ್ಮನಾಭನ್ ಅವರು ಆಂಗ್ಲ ಪತ್ರಿಕೆಯೊಂದಕ್ಕೆ ಈ ವಿಷಯ ತಿಳಿಸಿದ್ದಾರೆ.
ಪೆಂಗ್ವಿನ್ ರಾಂಡಮ್ ಹೌಸ್ ಭಾರತದಲ್ಲಿ ಸೋನಿಯಾ ಗಾಂಧಿಯವರ ಆತ್ಮಕಥೆಯನ್ನು ಪ್ರಕಟಿಸಲಿದೆ. ಈ ಕುರಿತು ಅಧಿಕೃತ ಪ್ರಕಟಣೆಯಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು. ಇದು ನೆಹರೂ ಕುಟುಂಬದ ಮೊದಲ ಸಮಗ್ರ ಆತ್ಮಚರಿತ್ರೆಯಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಮಿತಿ ಹೆಚ್ಚಿಸುತ್ತೇವೆ; ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ
ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಅನಿರೀಕ್ಷಿತವಾಗಿ ಕೊಲ್ಲಲ್ಪಟ್ಟ ಕಾರಣ ಅವರ ಜೀವನದ ಸಂಪೂರ್ಣ ಜೀವನ ಚರಿತ್ರೆಯನ್ನು ಬರೆಯಲು ಸಾಧ್ಯವಾಗಲಿಲ್ಲ. ಸಾಂಸ್ಕೃತಿಕ ಕಾರ್ಯಕರ್ತ ಮತ್ತು ಲೇಖಕ ಪುಪುಲ್ ಜಯಕರ್ ಅವರ ‘ಇಂದಿರಾ ಗಾಂಧಿ: ಎ ಬಯಾಗ್ರಫಿ’, ಸೋನಿಯಾ ಗಾಂಧಿಯವರ ‘ರಾಜೀವ್’ ಮತ್ತು ನೆಹರೂ ಅವರ ‘ಆನ್ ಆಟೋಬಯೋಗ್ರಫಿ: ಟುವರ್ಡ್ ಫ್ರೀಡಂ’ ನೆಹರು-ಗಾಂಧಿ ಕುಟುಂಬದ ಈ ಹಿಂದೆ ಪ್ರಕಟವಾದ ಕೆಲವು ಪುಸ್ತಕಗಳು.
ಇದೇ ಡಿಸೆಂಬರ್‌ನಲ್ಲಿ 78ನೇ ವರ್ಷಕ್ಕೆ ಕಾಲಿಡುತ್ತಿರುವ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ಕುರಿತು ಇತ್ತೀಚಿನ ಮಾಹಿತಿ ಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:50 pm, Sat, 5 October 24