G23 ನಾಯಕರ ಜೊತೆ ಮಾತುಕತೆಗೆ ಒಪ್ಪಿದ ಸೋನಿಯಾ ಗಾಂಧಿ: ಕಾಂಗ್ರೆಸ್​ನಲ್ಲಾಗುತ್ತಾ ಗಮನಾರ್ಹ ಬದಲಾವಣೆ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 18, 2020 | 1:38 PM

ಕೊನೆಗೂ ಕಾಂಗ್ರೆಸ್​ನ ಅಧಿನಾಯಕಿ ಸೋನಿಯಾ ಗಾಂಧಿ ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದು ಪತ್ರ ಬರೆದಿದ್ದ G23 ನಾಯಕರ ಜೊತೆ ಚರ್ಚೆ ನಡೆಸಲು ಒಪ್ಪಿದ್ದಾರೆ.

G23 ನಾಯಕರ ಜೊತೆ ಮಾತುಕತೆಗೆ ಒಪ್ಪಿದ ಸೋನಿಯಾ ಗಾಂಧಿ: ಕಾಂಗ್ರೆಸ್​ನಲ್ಲಾಗುತ್ತಾ ಗಮನಾರ್ಹ ಬದಲಾವಣೆ?
ಸೋನಿಯಾ ಗಾಂಧಿ
Follow us on

ದೆಹಲಿ: ಕೊನೆಗೂ ಕಾಂಗ್ರೆಸ್​ನ ಅಧಿನಾಯಕಿ ಸೋನಿಯಾ ಗಾಂಧಿ ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದು ಪತ್ರ ಬರೆದಿದ್ದ G23 ನಾಯಕರ ಜೊತೆ ಚರ್ಚೆ ನಡೆಸಲು ಒಪ್ಪಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಕಮಲ್​ ನಾಥ್ ಈ ಸಭೆಯನ್ನು ಆಯೋಜಿಸಿದ್ದು, ಕೇವಲ 6ರಿಂದ7 ನಾಯಕರ ಜೊತೆ ನಾಳೆ ಮಾತುಕತೆಗೆ ಸೋನಿಯಾ ಸಮ್ಮತಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ್ ವಾದ್ರಾ ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ.

ಪಕ್ಷವನ್ನು ಮರು ಸಂಘಟಿಸಲು ನಾಯಕತ್ವ ಬದಲಾವಣೆ ಕೋರಿ 23 ನಾಯಕರು ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದರು. ಪಕ್ಷದ ನಾಯಕತ್ವ ಬದಲಾವಣೆ, ಸಾರ್ವಜನಿಕರಲ್ಲಿ ಪಕ್ಷದ ಕುರಿತು ನಂಬಿಕೆ ಹೆಚ್ಚಳ ಮತ್ತು ಅಧಿಕಾರದ ವಿಕೇಂದ್ರೀಕರಣದ ಬೇಡಿಕೆಯಿಟ್ಟು ವರಿಷ್ಠರನ್ನು ಒತ್ತಾಯಿಸಿದ್ದರು. ದೇಶದಲ್ಲಿ ಪಕ್ಷದ ಪರಿಸ್ಥಿತಿಯನ್ನು ಅವಲೋಕಿಸಿ, ಬಲಪಡಿಸಿಕೊಳ್ಳಲು ಈ ಸಭೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಕೊರೊನಾ ನಂತರ ಸೋನಿಯಾ ಗಾಂಧಿ ಪಕ್ಷದ ನಾಯಕರ ಜೊತೆ ನಡೆಸಿದ ಮೊದಲ ಸಭೆ ಇದಾಗಿದೆ.

ಗುಲಾಂ ನಬೀ ಆಜಾದ್, ಕಪಿಲ್ ಸಿಬಲ್, ಭೂಪೇಂದ್ರ ಸಿಂಗ್ ಹೂಡಾ, ಮನೀಷ್ ತಿವಾರಿ, ವೀರಪ್ಪ ಮೋಯ್ಲಿ, ಶಶಿ ತರೂರ್ ಮುಂತಾದ ನಾಯಕರು ಆಗಸ್ಟ್​ನಲ್ಲಿ ಪಕ್ಷದ ವರಿಷ್ಠೆಗೆ ಪತ್ರ ಬರೆದಿದ್ದರು. ಜನರಿಗೆ ಹೆಚ್ಚು ಪರಿಚಿತವಿರುವ ನಾಯಕರಿಗೆ ಪಕ್ಷದ ನಾಯಕತ್ವ ವಹಿಸಬೇಕೆಂಬ ಕೂಗು ಗಾಂಗ್ರೆಸ್​ನಲ್ಲಿ ಹೆಚ್ಚಾಗಿತ್ತು. ಅದೇ ಸಮಯದಲ್ಲಿ 23 ನಾಯಕರು ಬರೆದ ಪತ್ರ ಸಂಚಲನ ಮೂಡಿಸಿತ್ತು. ಆದರೆ, ಪತ್ರ ಉಂಟುಮಾಡಿದ ತಲ್ಲಣವನ್ನು ಕಮಲ್​ ನಾಥ್ ಶಮನಗೊಳಿಸಿದ್ದರು. ನಾಯಕತ್ವದ ಆಕಾಂಕ್ಷೆಯುಳ್ಳವರು ಕೇವಲ ಹೇಳಿಕೆಗಳಿಗಿಂತ ತಳಮಟ್ಟದ ಪ್ರಚಾರದಲ್ಲಿ ನಿರತರಾಗಬೇಕು ಎಂದು ಎಚ್ಚರಿಕೆ ನೀಡಿದ್ದರು.

ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಕಿತ್ತಾಟ: ವೀರಪ್ಪ ಮೊಯ್ಲಿ ಅನುಭವದ ಮಾತು ಏನು?