ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಭಾಗಿಯಾಗುವ ಸಾಧ್ಯತೆ: ಕಾಂಗ್ರೆಸ್​​​

|

Updated on: Dec 29, 2023 | 3:09 PM

ಅಯೋಧ್ಯೆ ರಾಮಮಂದಿರ ಲೋರ್ಕಾಪಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ ನಾಯಕಿ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್​​​ ಮೂಲಗಳು ತಿಳಿಸಿದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಭಾಗಿಯಾಗುವ ಸಾಧ್ಯತೆ: ಕಾಂಗ್ರೆಸ್​​​
Follow us on

ದೆಹಲಿ, ಡಿ.29: ಅಯೋಧ್ಯೆ ರಾಮಮಂದಿರ ಲೋರ್ಕಾಪಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ ನಾಯಕಿ ಸೋನಿಯಾ ಗಾಂಧಿ (Sonia Gandhi) ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್​​​ ಮೂಲಗಳು ತಿಳಿಸಿದೆ. ಕಾಂಗ್ರೆಸ್​​​ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಇದೀಗ ಸೋನಿಯಾ ಗಾಂಧಿ ಅವರು ರಾಮಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್​​ ಹೇಳಿದೆ. ಇದೀಗ ಈ ವಿಚಾರ ದೇಶದ ರಾಜಕೀಯದಲ್ಲಿ ಭಾರೀ ದೊಡ್ಡ ಸುದ್ದಿ ಮಾಡಿದೆ. ಹಾಗೂ ಇಂಡಿಯಾ ಮೈತ್ರಿ ಕೂಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಗೆ 22ರಂದು ರಾಮಮಂದಿರದ ಲೋರ್ಕಾಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಅವರು ಕೂಡ ಭಾಗವಹಿಸುವ ಸಾಧ್ಯತೆ ಎಂದು ಕಾಂಗ್ರೆಸ್​​ ಮೂಲಗಳು ಹೇಳಿದೆ. ಈ ಹಿಂದೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಸೋನಿಯಾ ಗಾಂಧಿ ಅವರನ್ನು ಪ್ರತಿನಿಧಿಸುವ ನಿಯೋಗ ರಾಮಮಂದಿರದಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ರಾಮ ಮಂದಿರ ವಿಚಾರದಲ್ಲಿ ಅವರು ಸೂಕ್ಷ್ಮವಾಗಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಏಕೆಂದರೆ, ಇಂಡಿಯಾ ಮೈತ್ರಿಕೂಟದಲ್ಲಿ ಯೂನಿಯನ್ ಮುಸ್ಲಿಂ ಲೀಗ್​​ನಂತಹ ರಾಮಮಂದಿರ ವಿರೋಧಿ ಪಕ್ಷಗಳು ಇರುವಾಗ, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಕಾಂಗ್ರೆಸ್​​​​ ಮೂಲಗಳು ಹೇಳಿದೆ. ಇನ್ನು ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಈ ನಿರ್ಧಾರದಿಂದ ದೇಶದಲ್ಲಿ ಇಂಡಿಯಾ ಮೈತ್ರಿ ಕೂಟದ ಮೇಲೆ ಪ್ರಮುಖ ಪ್ರಭಾವ ಉಂಟು ಮಾಡಬಹುದು. ಹಾಗೂ ಇದೆ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್​​​ ಎಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಯಾಗಲಿದೆ 600ಕೆಜಿ ತೂಕದ ಲೋಹದ ಗಂಟೆ

ಆಡಳಿತ ಪಕ್ಷದ ಟೀಕೆಗಳನ್ನು ಹಾಗೂ ಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧಕ-ಭಾದಕಗಳ ಲೆಕ್ಕಚಾರವನ್ನು ನೋಡಿಕೊಂಡು ಇಂಡಿಯಾ ಮೈತ್ರಿ ಪಕ್ಷಗಳು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ಇದೆ. ಇನ್ನು ಕಾಂಗ್ರೆಸ್​​​ ರಾಮಮಂದಿರ ವಿಚಾರದಲ್ಲಿ ಪ್ರಾಣಸಂಕಟಕ್ಕೆ ಸಿಲುಕಿಕೊಂಡದಂತಾಗಿದೆ. ಒಂದು ಕಡೆ ರಾಮಮಂದಿರ ಕಾರ್ಯಕ್ರಮದಲ್ಲಿ ಭಾಗಿಯಾದರೆ ಮುಸ್ಲಿಂ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕು. ಭಾಗಿಯಾಗದಿದ್ದಾರೆ ಬಿಜೆಪಿ ಟೀಕೆಗಳು ಹಾಗೂ ಹಿಂದೂ ಸಮುದಾಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ಒಟ್ಟಾರೆ ಕಾಂಗ್ರೆಸ್​​ಗೆ​​​​ ರಾಮಮಂದಿರ ನುಂಗಲಾರದ ತುತ್ತಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Fri, 29 December 23