AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಹಸೀಲ್ದಾರ್​​ನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ? ಅಧಿಕಾರಿಯ ಪತ್ನಿಗೆ ಶಾಕ್ ಮೇಲೆ ಶಾಕ್

ಅಧಿಕಾರಿಯೊಬ್ಬರು ಒತ್ತಾಯಕ್ಕೆ ಮಣಿದು ಮತಾಂತರಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಲವಂತವಾಗಿ ಮತಾಂತರ ಮಾಡಿ, ಆ ಅಧಿಕಾರಿಗೆ ಮದುವೆಯಾಗಿದ್ದರು, ಮುಸ್ಲಿಂ ಮಹಿಳೆಯ ಜತೆಗೆ ಮರುಮದುವೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಸುದ್ದಿ ದೇಶದ್ಯಾಂತ ಭಾರೀ ಚರ್ಚೆ ಕಾರಣವಾಗಿದೆ. ಆಶಿಶ್ ಗುಪ್ತಾ ಎಂಬ ತಹಸೀಲ್ದಾರ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಈ ಬಗ್ಗೆ ಆಶಿಶ್ ಗುಪ್ತಾ ಅವರ ಪತ್ನಿ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ.

ತಹಸೀಲ್ದಾರ್​​ನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ? ಅಧಿಕಾರಿಯ ಪತ್ನಿಗೆ ಶಾಕ್ ಮೇಲೆ ಶಾಕ್
ಅಕ್ಷಯ್​ ಪಲ್ಲಮಜಲು​​
|

Updated on: Dec 29, 2023 | 3:22 PM

Share

ಲಕ್ನೋ,ಡಿ.29: ಅಧಿಕಾರಿಯೊಬ್ಬರು ಒತ್ತಾಯಕ್ಕೆ ಮಣಿದು ಮತಾಂತರಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಲವಂತವಾಗಿ ಮತಾಂತರ ಮಾಡಿ, ಆ ಅಧಿಕಾರಿಗೆ ಮದುವೆಯಾಗಿದ್ದರು, ಮುಸ್ಲಿಂ ಮಹಿಳೆಯ ಜತೆಗೆ ಮತ್ತೊಂದು ಮದುವೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಸುದ್ದಿ ದೇಶದ್ಯಾಂತ ಭಾರೀ ಚರ್ಚೆ ಕಾರಣವಾಗಿದೆ. ಆಶಿಶ್ ಗುಪ್ತಾ ಎಂಬ ತಹಸೀಲ್ದಾರ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಈ ಬಗ್ಗೆ ಆಶಿಶ್ ಗುಪ್ತಾ ಅವರ ಪತ್ನಿ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ. ಮತಾಂತರಗೊಂಡ ಆಶಿಶ್ ಗುಪ್ತಾ ಇದೀಗ ಮೊಹಮ್ಮದ್ ಯೂಸುಫ್ ಎಂದು ಹೆಸರು ಕೂಡ ಬದಲಾಯಿಸಲಾಗಿದೆ. ದಕ್ಷಿಣ ಉತ್ತರ ಪ್ರದೇಶದ ಮೌದಾಹಾ ಪಟ್ಟಣದಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ಆತನ ಪತ್ನಿ ಹೇಳಿದ್ದಾರೆ.

ಸೆಪ್ಟೆಂಬರ್ 2 ರಿಂದ ಆಶಿಶ್ ಗುಪ್ತಾ ಮೌದಾಹಾದಲ್ಲಿ ನಾಯಬ್ ತಹಸೀಲ್ದಾರಾಗಿ ಸೇವೆ ಸಲ್ಲಿಸುತ್ತಿದ್ದರು. ಪಟ್ಟಣದ ಕಚರಿಯಾ ಬಾಬಾ ಮಸೀದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತನ್ನ ಗಂಡನ್ನು ಮಸೀದಿ ಕರೆದುಕೊಂಡು ಹೋಗಿ ನಮಾಜ್​​​ ಮಾಡುತ್ತಿದ್ದರು ಎಂದು ಗುಪ್ತಾ ಅವರ ಪತ್ನಿ ಆರತಿ ಯಜ್ಞಸೈನಿ ಹೇಳಿದ್ದಾರೆ. ಈ ಬಗ್ಗೆ ತನಿಖೆಯನ್ನು ನಡೆಸಿದಾಗ ಹಲವು ಅಚ್ಚರಿಯ ಸಂಗತಿಗಳು ಹೊರಬಿದ್ದಿದೆ. ಜತೆಗೆ ಆಶಿಶ್ ಗುಪ್ತಾ ಅವರು ಹೆಸರು ಬದಲಾವಣೆ ಮಾಡಿಕೊಂಡಿದ್ದು ಮಾತ್ರವಲ್ಲ ತಾನು ಕಾನ್ಪುರದ ನಿವಾಸಿ ಎಂದು ಕೂಡ ಬದಲಾಯಿಸಲಾಗಿತ್ತು.

ಇನ್ನು ಆರತಿ ಯಜ್ಞಸೈನಿ ದೂರಿನ ಆಧಾರದ ಮೇಲೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಯೂಸುಫ್ ಬೇರೆ ಯಾರೂ ಅಲ್ಲ, ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈ ವಿಚಾರ ಪೊಲೀಸರಿಗೆ ತಿಳಿದಿದೆ ಎಂದು ಮಸೀದಿಯ ಧರ್ಮಗುರು ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಈ ಧರ್ಮಗುರುವಿನ ಮೇಲೆ ಬಲವಂತದ ಧಾರ್ಮಿಕ ಮತಾಂತರ ಮತ್ತು ರುಕ್ಷಾರ್ ಎಂಬ ಮಹಿಳೆಯೊಂದಿಗೆ ‘ಅನೈತಿಕ’ ವಿವಾಹಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಎಲ್ಲರೂ ಇಸ್ಲಾಂಗೆ ಮತಾಂತರವಾಗಿ, ಇಲ್ಲ ಎಲ್ಲರೂ ಸಾಯಲು ಸಿದ್ಧರಾಗಿ: ಇದು ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ

ಪೊಲೀಸರು ತನಿಖೆ ವೇಳೆ ಈ ಮತಾಂತರ ಮಾಡಿದ ವ್ಯಕ್ತಿಯನ್ನು ರುಕ್ಷಾರ್ ಅವರ ತಂದೆ ಮುನ್ನಾ ಎಂದು ಗುರುತಿಸಲಾಗಿದೆ. ಇತ ಮಸೀದಿಯ ಧರ್ಮಗುರು ಎಂದು ಹೇಳಲಾಗಿದೆ. ಇಂತಹ ಅನೇಕ ಮತಾಂತರ ಕೃತ್ಯವನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ. ಆಶಿಶ್ ಗುಪ್ತಾ ಅವರನ್ನು ತನ್ನ ಮಗಳ ಜತೆಗೆ ಮದುವೆಗೂ ಮುನ್ನ ಮತಾಂತರ ಮಾಡಿದ್ದಾನೆ ಎಂದು ಹೇಳಲಾಗಿದೆ. ಇನ್ನು ಈ ಮತಾಂತರ ಆಶಿಶ್ ಗುಪ್ತಾ ಅವರಿಗೆ ಒಪ್ಪಿಗೆ ಇದ್ದು ಮಾಡಿದ್ದಾರೋ ಅಥವಾ ಒಪ್ಪಿಗೆ ಇಲ್ಲದೆ ಮಾಡಿದ್ದಾರೋ ಎಂಬುದನ್ನು ಇನ್ನು ತನಿಖೆ ಮಾಡಬೇಕಿದೆ. ಈ ಪ್ರರಕಣಕ್ಕೆ ಸಂಬಂಧಿಸಿದಂತೆ ಧರ್ಮಗುರು ಮುನ್ನಾನ್ನು ಬಂಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?