ಚೆನ್ನೈ: ಗಾನಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ(74) ಸೆಪ್ಟೆಂಬರ್ 25 ಶುಕ್ರವಾರ ಮಧ್ಯಾಹ್ನ ಇಹ ಲೋಕ ತ್ಯಜಿಸಿದ್ದರು. ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನಲ್ಲಿರುವ ರೆಡ್ ಹಿಲ್ಸ್ ಫಾರ್ಮ್ ಹೌಸ್ನಲ್ಲಿ ಸಂಗೀತ ಪುತ್ರನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇಂದಿಗೆ SPB ನಮ್ಮನ್ನು ಅಗಲಿ 10 ದಿನಗಳು ಕಳೆದಿವೆ.
ನಿನ್ನೆ SPB ಪುತ್ರ SP ಚರಣ್ ತಂದೆ ಸಮಾಧಿ ಬಳಿ ತೆರಳಿ ಸಮಾಧಿ ಪೂಜೆ ನೆರವೇರಿಸಿದ್ದಾರೆ. 9ನೇ ದಿನದ ಕಾರ್ಯವನ್ನು ಮಾಡಿದ್ದಾರೆ. ಜೊತೆಗೆ ಇಂದು ಧರ್ಮೋದಕ ಕಾರ್ಯ ನೆರವೇರಲಿದೆ. ಈ ಮಧ್ಯೆ, ಗಾನ ಗಂಧರ್ವ SP ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ, ಪುರಸ್ಕರಿಸಬೇಕು ಎಂಬ ಮನವಿ ವ್ಯಾಪಕವಾಗಿ ಕೇಳಿಬಂದಿದೆ.
Published On - 9:36 am, Sun, 4 October 20