ಸುಶಾಂತ್ ಸಿಂಗ್ ಸಾವು ಕೊಲೆಯಲ್ಲ, ಆತ್ಮಹತ್ಯೆ! ಏಮ್ಸ್ ಬಿಚ್ಚಿಟ್ಟ ಸಾವಿನ ಸತ್ಯ..
ದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಇಷ್ಟು ದಿನ ಇದು ಕೊಲೆಯೋ ಆತ್ಮಹತ್ಯೆಯೋ ಎಂಬ ಪ್ರಶ್ನೆ ಕಾಡುತ್ತಿತ್ತು. ಅದಕ್ಕೆ ಏಮ್ಸ್ ಆಸ್ಪತ್ರೆ ವೈದ್ಯರು ತೆರೆ ಎಳೆದಿದ್ದಾರೆ. ಬಾಲಿವುಡ್ ನಟ ಸುಶಾಂತ್ ಕೇಸ್‌ಗೆ ಸಿಕ್ತು ಟ್ವಿಸ್ಟ್! ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆನಾ.. ಆತ್ಮಹತ್ಯೆನಾ ಅನ್ನೋ ಪ್ರಶ್ನೆ ದೇಶದ ಜನರನ್ನ ಕಾಡುತ್ತಿತ್ತು. ಈ ಕೇಸ್ ಹಲವು ತಿರುವು ಪಡೆದುಕೊಂಡು, ನಾನಾ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಈಗ ಈ […]
ದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಇಷ್ಟು ದಿನ ಇದು ಕೊಲೆಯೋ ಆತ್ಮಹತ್ಯೆಯೋ ಎಂಬ ಪ್ರಶ್ನೆ ಕಾಡುತ್ತಿತ್ತು. ಅದಕ್ಕೆ ಏಮ್ಸ್ ಆಸ್ಪತ್ರೆ ವೈದ್ಯರು ತೆರೆ ಎಳೆದಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಕೇಸ್‌ಗೆ ಸಿಕ್ತು ಟ್ವಿಸ್ಟ್! ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆನಾ.. ಆತ್ಮಹತ್ಯೆನಾ ಅನ್ನೋ ಪ್ರಶ್ನೆ ದೇಶದ ಜನರನ್ನ ಕಾಡುತ್ತಿತ್ತು. ಈ ಕೇಸ್ ಹಲವು ತಿರುವು ಪಡೆದುಕೊಂಡು, ನಾನಾ ಚರ್ಚೆಗೆ ಕಾರಣವಾಗಿತ್ತು. ಆದ್ರೆ ಈಗ ಈ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸುಶಾಂತ್ ಸಿಂಗ್ ಕೊಲೆ ಎನ್ನುತ್ತಿದ್ದವರ ಬಾಯಿಯನ್ನು ಏಮ್ಸ್ ವೈದ್ಯರು ಮುಚ್ಚಿಸಿದ್ದಾರೆ. ಸುಶಾಂತ್ ಸಾವು ಕೊಲೆ ಅಲ್ಲ. ಅದು ಖಂಡಿತ ಆತ್ಮಹತ್ಯೆ. ಅವರಿಗೆ ವಿಷ ನೀಡಲಾಗಿತ್ತು, ಕತ್ತು ಹಿಸುಕಿ ಸಾಯಿಸಿದ್ದಾರೆ ಎಂಬುದು ಸುಳ್ಳು. ಆತ್ಮಹತ್ಯೆಯಿಂದಲೇ ಸಾವು ಸಂಭವಿಸಿದೆ ಅಂತಾ ಏಮ್ಸ್‌ನ ವಿಧಿವಿಜ್ಞಾನ ವಿಭಾಗ ತಿಳಿಸಿದೆ. ಈ ಮಾಹಿತಿಯನ್ನು ಸಿಬಿಐಗೆ ಏಮ್ಸ್‌ನ ವೈದ್ಯಕೀಯ ತಂಡ ಕೊಟ್ಟಿದೆ.
ಏಮ್ಸ್ ವರದಿಯಲ್ಲಿ ಏನಿದೆ? ‘ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ. ವಿಷ ನೀಡಿ ಅಥವಾ ಕತ್ತು ಹಿಸುಕಿ ಕೊಲೆ ಮಾಡಿಲ್ಲ. ನೇಣು ಹಾಕಿಕೊಂಡಿರುವುದರ ಗುರುತು ಹೊರತಾಗಿ ದೇಹದಲ್ಲಿ ಯಾವುದೇ ಗಾಯದ ಗುರುತು ಇರಲಿಲ್ಲ’ ಹೀಗೆ ಸಿಬಿಐಗೆ ಏಮ್ಸ್ ವೈದ್ಯರ ತಂಡ ವರದಿ ನೀಡಿದ್ದು, ರಿಯಾ ಚಕ್ರವರ್ತಿ ಕೊಲೆ ಮಾಡಿದ್ದಾಳೆ ಅನ್ನೋ ಸುಶಾಂತ್ ಕುಟುಂಬದ ಆರೋಪವನ್ನ ಏಮ್ಸ್ ತಳ್ಳಿಹಾಕಿದೆ. ಈ ವರದಿಯಿಂದ ಸಿಬಿಐ ಅಧಿಕಾರಿಗಳ ತನಿಖೆಯ ಆಯಾಮ ಬದಲಾಗಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಾದರೆ ಅದಕ್ಕೆ ಕಾರಣ ಏನು ಅನ್ನೋದನ್ನ ಅಧಿಕಾರಿಗಳು ಈಗ ಪತ್ತೆ ಹಚ್ಚಬೇಕಾಗಿದೆ. ಹಾಗೇ ಆತ್ಮಹತ್ಯೆಗೆ ಕುಮ್ಮಕ್ಕು ಕೊಟ್ಟವರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಡ್ರಗ್ಸ್ ಮಾಫಿಯಾ ಬಗ್ಗೆ ಮೌನ ಮುರಿದ ಬಾಲಿವುಡ್ ಖಿಲಾಡಿ ಬಾಲಿವುಡ್‌ನಲ್ಲಿ ಡ್ರಗ್ಸ್ ಪ್ರಕರಣದ ಸಂಬಂಧ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ತುಂಬ ದಿನಗಳಿಂದ ನೋಡುತ್ತಿದ್ದೇನೆ.. ಎಲ್ಲಿ ನೋಡಿದರೂ ನೆಗೆಟಿವ್ ನೆಗೆಟಿವ್. ಆದರೆ ಯಾರಿಗೆ ಅಂತ ಹೇಳಲಿ, ಎಷ್ಟು ಅಂತ ಹೇಳಲಿ.? ಬಾಲಿವುಡ್ ಅಂದರೆ ನಮಗೆ ಬರೀ ಇಂಡಸ್ಟ್ರಿ ಅಲ್ಲ. ಅದು ನಮ್ಮ ದೇಶದ ಸಂಸ್ಕೃತಿ. ಬಾಲಿವುಡ್‌ನಲ್ಲಿ ಡ್ರಗ್ಸ್ ಖಂಡಿತ ಇದೆ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲಿಯೂ ಇದೆ. ಆದರೆ ಇಡೀ ಬಾಲಿವುಡ್ಡನ್ನೇ ಕೆಟ್ಟ ದೃಷ್ಟಿಯಲ್ಲಿ ನೋಡಬೇಡಿ ಅಂತಾ ಅಕ್ಷಯ್ ಕುಮಾರ್ ಕೈಜೋಡಿಸಿ ಬೇಡಿಕೊಂಡಿದ್ದಾರೆ.
ಸದ್ಯ ಬಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿದ ಸುಶಾಂತ್ ಸಿಂಗ್ ಸಾವಿನ ಕೇಸ್‌ಗೆ ಈಗ ತೆರೆಬಿದ್ದಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದು ಅಂತಾ ಏಮ್ಸ್ ಹೇಳಿದ್ದು, ಈಗ ಸಿಬಿಐ ಆತ್ಮಹತ್ಯೆಗೆ ಕಾರಣ ಏನು ಅನ್ನೋದನ್ನ ಹುಡುಕಬೇಕಿದೆ.