ಸೋಂಕಿತನ ದೇಹದಲ್ಲಿ ಹುಳುಗಳು ಪತ್ತೆ, ಮೂವರು ವೈದ್ಯಕೀಯ ಸಿಬ್ಬಂದಿ ಅಮಾನತು
ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಸೋಂಕು ಬೇಗನೇ ನಿಯಂತ್ರಣಕ್ಕೆ ಬಂದಿತ್ತು. ಅದಕ್ಕೆ ಮುಖ್ಯ ಕಾರಣ ಅಲ್ಲಿನ ಸರ್ಕಾರ ಅದರಲ್ಲೂ ಅಲ್ಲಿನ ಆರೋಗ್ಯ ಸಚಿವೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳೇ ಹೇತುವಾಗಿದ್ದವು. ಆದ್ರೆ ಪರಿಸ್ಥಿತಿ ಈಗ ಅಲ್ಲಿ ಹಾಗಿಲ್ಲ. ಕೊರೊನಾ ಕಾಟ ಮತ್ತೆ ಹೆಚ್ಚಾಗಿದೆ. ಸರ್ಕಾರ ಕಂಗೆಟ್ಟಿದೆ. ಈ ಮಧ್ಯೆ, ಆಸ್ಪತ್ರೆಗಳಲ್ಲಿ ಕಾಳಜಿ ಇಲ್ಲವಾಗಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಹೆಚ್ಚಾಗಿದೆ. ಏನಾಗಿದೆಯಂದ್ರೆ, ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ಸೋಂಕಿತನೊಬ್ಬನ ದೇಹದ ಮೇಲೆ ಚಿಕ್ಕ ಚಿಕ್ಕ ಹುಳುಗಳು ಪತ್ತೆಯಾಗಿವೆ. ಈ […]
ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಸೋಂಕು ಬೇಗನೇ ನಿಯಂತ್ರಣಕ್ಕೆ ಬಂದಿತ್ತು. ಅದಕ್ಕೆ ಮುಖ್ಯ ಕಾರಣ ಅಲ್ಲಿನ ಸರ್ಕಾರ ಅದರಲ್ಲೂ ಅಲ್ಲಿನ ಆರೋಗ್ಯ ಸಚಿವೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳೇ ಹೇತುವಾಗಿದ್ದವು. ಆದ್ರೆ ಪರಿಸ್ಥಿತಿ ಈಗ ಅಲ್ಲಿ ಹಾಗಿಲ್ಲ. ಕೊರೊನಾ ಕಾಟ ಮತ್ತೆ ಹೆಚ್ಚಾಗಿದೆ. ಸರ್ಕಾರ ಕಂಗೆಟ್ಟಿದೆ. ಈ ಮಧ್ಯೆ, ಆಸ್ಪತ್ರೆಗಳಲ್ಲಿ ಕಾಳಜಿ ಇಲ್ಲವಾಗಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಹೆಚ್ಚಾಗಿದೆ.
ಏನಾಗಿದೆಯಂದ್ರೆ, ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ಸೋಂಕಿತನೊಬ್ಬನ ದೇಹದ ಮೇಲೆ ಚಿಕ್ಕ ಚಿಕ್ಕ ಹುಳುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಸೋಂಕಿತ ಗುಣಮುಖನಾದ ನಂತರ ಆತನನ್ನು ಮನೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ವ್ಯಕ್ತಿಯ ಸಂಬಂಧಿಕರಿಗೆ ಆತನ ದೇಹದ ಮೇಲೆ ಇದ್ದ ಹುಣ್ಣುಗಳಲ್ಲಿ (ಬೆಡ್ ಸೋರ್) ಹುಳುಗಳು ಕಂಡುಬಂದಿವೆ. ಕೂಡಲೇ ಈ ಬಗ್ಗೆ ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ವಿಚಾರಣೆ ನಡೆದಿದ್ದು ಇದೀಗ ಮೂರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.