ಹತ್ರಾಸ್ ಅತ್ಯಾಚಾರ-ಕೊಲೆ ಪ್ರಕರಣ: ಎಸ್ಪಿ ವಿಕ್ರಾಂತ್ ವೀರ್ ಸೇರಿ ಐವರ ಅಮಾನತು
ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿ, ಮಧ್ಯರಾತ್ರಿ ಯುವತಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೆ ಎಸ್ಐಟಿ ಶಿಫಾರಸು ಮೇರೆಗೆ ಹತ್ರಾಸ್‌ನ ಎಸ್ಪಿ ವಿಕ್ರಾಂತ್ ವೀರ್ ಸೇರಿ ಐವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಇನ್ಸ್ಪೆಕ್ಟರ್ ದಿನೇಶ್ ವರ್ಮಾ, ಎಸ್ಐ ಜಗವೀರ್ ಸಿಂಗ್, ಎಸ್ಒ ರಾಮ್ಶಬ್ದ್, ಹೆಡ್ ಕಾನ್ಸ್ಟೇಬಲ್ ಮಹೇಶ್ […]
ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿ, ಮಧ್ಯರಾತ್ರಿ ಯುವತಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಈ ಬೆನ್ನಲ್ಲೆ ಎಸ್ಐಟಿ ಶಿಫಾರಸು ಮೇರೆಗೆ ಹತ್ರಾಸ್‌ನ ಎಸ್ಪಿ ವಿಕ್ರಾಂತ್ ವೀರ್ ಸೇರಿ ಐವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಇನ್ಸ್ಪೆಕ್ಟರ್ ದಿನೇಶ್ ವರ್ಮಾ, ಎಸ್ಐ ಜಗವೀರ್ ಸಿಂಗ್, ಎಸ್ಒ ರಾಮ್ಶಬ್ದ್, ಹೆಡ್ ಕಾನ್ಸ್ಟೇಬಲ್ ಮಹೇಶ್ ಪಾಲ್, ಎಸ್ಪಿ, ಎಸ್ಒ ಸೇರಿ ಐವರು ಪೊಲೀಸರ ಅಮಾನತಿಗೆ ಆದೇಶಿಲಾಗಿದೆ.