14 ವಾಹನಗಳಿಗೆ ಅಪ್ಪಳಿಸಿದ ಲಾರಿ; ನಾಲ್ಕು ಮಂದಿ ಸಾವು, 13 ಜನರಿಗೆ ಗಂಭೀರ ಗಾಯ
ಚಾಲಕ ಪರಾರಿಯಾಗಿದ್ದು ಪೊಲೀಸರು ಹುಡುಕುತ್ತಿದ್ದಾರೆ. ಅಪಘಾತದಿಂದಾಗಿ ಮಾರ್ಗದಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

14 ವಾಹನಗಳಿಗೆ ಡಿಕ್ಕಿಯಾದ ಟ್ರಕ್
ಚೆನ್ನೈ: ಓವರ್ಲೋಡ್ ಆಗಿದ್ದ ಟ್ರಕ್, 14 ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ದುರ್ಘಟನೆ ತಮಿಳುನಾಡಿನ ಧರ್ಮಪುರಿ-ಸೇಲಂ ಗಡಿಯಲ್ಲಿರುವ ತೊಪ್ಪೂರು ಘಾಟ್ ರಸ್ತೆಯಲ್ಲಿ ನಡೆದಿದೆ. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರಕ್ 14 ವಾಹನಗಳ ಮೇಲೆ ನುಗ್ಗಿತು ಎಂದು ಟೋಲ್ ಪ್ಲಾಜಾದ ಮ್ಯಾನೇಜರ್ ತಿಳಿಸಿದ್ದಾರೆ. ಚಾಲಕ ಪರಾರಿಯಾಗಿದ್ದು ಪೊಲೀಸರು ಹುಡುಕುತ್ತಿದ್ದಾರೆ. ಪ್ರಕರಣ ದಾಖಲಾಗಿದೆ. ಅಪಘಾತದಿಂದಾಗಿ ಮಾರ್ಗದಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ನೆಲಮಂಗಲದಲ್ಲಿ ಎರಡು ಪ್ರತ್ಯೇಕ ಭೀಕರ ಅಪಘಾತ.. ಕಾರಿನ ಚಾಲಕ ದುರ್ಮರಣ
Published On - 12:21 pm, Sun, 13 December 20



