ದೆಹಲಿ: ನಿಯಂತ್ರಣ ತಪ್ಪಿ ಫುಟ್​​ಪಾತ್ ಬದಿಯಲ್ಲಿದ್ದ ಮೂವರು ಮಕ್ಕಳ ಮೇಲೆ ಹರಿದ ಕಾರು, ದೃಶ್ಯ ಸಿಸಿಟಿವಿಯಲ್ಲಿ ಸೆರೆ

| Updated By: ರಶ್ಮಿ ಕಲ್ಲಕಟ್ಟ

Updated on: Dec 18, 2022 | 5:22 PM

ಘಟನೆಯ ದೃಶ್ಯಗಳನ್ನು ಸಿಸಿಟಿವಿ ವಿಡಿಯೊ ನೋಡಿದರೆ ಕಾರು ಇದ್ದಕ್ಕಿದ್ದಂತೆ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದುಕೊಂಡು ಬಂದು ಮಕ್ಕಳ ಮೇಲೆ ಹರಿದು ಸ್ವಲ್ಪ ಸಮಯದ ನಂತರ ನಿಲ್ಲುವುದನ್ನು ಕಾಣಬಹುದು.

ದೆಹಲಿ: ನಿಯಂತ್ರಣ ತಪ್ಪಿ ಫುಟ್​​ಪಾತ್ ಬದಿಯಲ್ಲಿದ್ದ ಮೂವರು ಮಕ್ಕಳ ಮೇಲೆ ಹರಿದ ಕಾರು, ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಸಂಭವಿಸಿದ ಕಾರು ಅಪಘಾತ
Follow us on

ದೆಹಲಿ: ಉತ್ತರ ದೆಹಲಿಯ ಗುಲಾಬಿ ಬಾಗ್‌ನ(Gulabi Bagh) ಲೀಲಾವತಿ ಶಾಲೆಯ (Lilawati school) ಬಳಿ ನಿಯಂತ್ರಣ ಕಳೆದುಕೊಂಡ ಮಾರುತಿ ಬ್ರೆಝಾ ಕಾರು ಮೂವರು ಮಕ್ಕಳ ಮೇಲೆ ಹರಿದ ನಂತರ ಫುಟ್‌ಪಾತ್‌ಗೆ (footpath)ಡಿಕ್ಕಿಹೊಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳು ಫುಟ್‌ಪಾತ್‌ ಬದಿಯಲ್ಲಿ ಚಳಿ ಕಾಯಿಸುತ್ತಿದ್ದಾಗ ಈ ಕಾರು ಬಂದು ನುಗ್ಗಿದೆ. ಘಟನೆಯ ದೃಶ್ಯಗಳನ್ನು ಸಿಸಿಟಿವಿ ವಿಡಿಯೊ ನೋಡಿದರೆ ಕಾರು ಇದ್ದಕ್ಕಿದ್ದಂತೆ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದುಕೊಂಡು ಬಂದು ಮಕ್ಕಳ ಮೇಲೆ ಹರಿದು ಸ್ವಲ್ಪ ಸಮಯದ ನಂತರ ನಿಲ್ಲುವುದನ್ನು ಕಾಣಬಹುದು. ಅಲ್ಲಿದ್ದ ಜನರು ಮಕ್ಕಳಿಗೆ ಸಹಾಯ ಮಾಡಲು ಧಾವಿಸಿದ್ದು ಇನ್ನು ಕೆಲವರು ಚಾಲಕನನ್ನು ಹಿಡಿದು ಥಳಿಸಿದ್ದಾರೆ ಕಾರಿನಲ್ಲಿದ್ದವ ಓಡಿಹೋಗಲು ಪ್ರಯತ್ನಿಸಿದ್ದ. ಆದರೆ ಕಾರಿನ ಟೈರ್ ಒಡೆದು ಕಾರು ಇದ್ದಕ್ಕಿದ್ದಂತೆ ನಿಂತಿತು ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯರು ಇಬ್ಬರನ್ನು ಕೊಠಡಿಯೊಂದರಲ್ಲಿ ಬಂಧಿಸಿಟ್ಟು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.  ಮಕ್ಕಳ ಕುಟುಂಬಸ್ಥರು ರಸ್ತೆಯಲ್ಲಿ ರೋದಿಸುತ್ತಿರುವುದು ಕಂಡು ಬಂತು. ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.


ಇಂದು (ಭಾನುವಾರ) ಬೆಳಿಗ್ಗೆ 9 ಗಂಟೆಗೆ ಸಂಭವಿಸಿದ ಅಪಘಾತದ ನಂತರ ಸ್ಥಳೀಯರು ಕಾರು ಚಾಲಕ ಪ್ರತಾಪ್ ನಗರದ ನಿವಾಸಿ ಗಜೇಂದ್ರ ಎಂಬಾತನಿಗೆ ಥಳಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 10 ಮತ್ತು 4 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಆದರೆ ಅಪಾಯದಿಂದ ಪಾರಾಗಿದ್ದಾರೆ.ಇನ್ನೊಂದು 6 ವರ್ಷದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಗುಜರಾತ್ ವಿದ್ಯಾಪೀಠದ ಆವರಣದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್​​ರಿಂದ ಸ್ವಚ್ಛತಾ ಅಭಿಯಾನ

ಅಪಘಾತವನ್ನು ಕಣ್ಣಾರೆ ಕಂಡ ಸ್ಥಳೀಯರೊಬ್ಬರು ಯಾರೋ ಡ್ರೈವಿಂಗ್ ಕಲಿಯುತ್ತಿದ್ದವರು ಕಾರು ಚಲಾಯಿಸಿದ್ದಾರೆ. ಕಾರು ಆ ಪ್ರದೇಶವನ್ನು ಮೂರು ಸುತ್ತು ಹಾಕಿದೆ. ಚಾಲಕ ಮದ್ಯ ಸೇವಿಸಿದ್ದ. ಈ ಪ್ರದೇಶದಲ್ಲಿ ಶಾಲೆ ಇದೆ ಎಂದು ಸ್ಥಳೀಯರು ಎಚ್ಚರಿಸಿದರೂ ನಿಲ್ಲಿಸಲಿಲ್ಲ ಎಂದಿದ್ದಾರೆ.
ಸಿಟ್ಟಿಗೆದ್ದ ಸ್ಥಳೀಯರು ಜಖಂಗೊಳಿಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ