ಸೀಲಿಂಗ್ ಫ್ಯಾನ್​ಗೆ ಸ್ಪ್ರಿಂಗ್! ಆತ್ಮಹತ್ಯೆಗೆ ತಡೆಗೆ ರಾಜಸ್ಥಾನದ ಕೋಟಾ ಹಾಸ್ಟೆಲ್​​​ಗಳಿಂದ ಹೊಸ ಪ್ರಯೋಗ​

|

Updated on: Aug 18, 2023 | 6:31 PM

Ceiling fans fitted with springs to prevent suicide; ಒಬ್ಬ ವ್ಯಕ್ತಿಯು ವಸತಿಗೃಹದಲ್ಲಿ ಸೀಲಿಂಗ್‌ ಫ್ಯಾನ್​ಗೆ ನೇಣುಹಾಕಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಆದರೆ, ಅದಕ್ಕೆ ಸ್ಪ್ರಿಂಗ್ ಅಳವಡಿಸಿದ್ದರಿಂದ, ವ್ಯಕ್ತಿಯು ನೇಣು ಹಾಕಿ ಕೆಳಜಾರಿದಾಗ ಅವರ ಜತೆಗೇ ಫ್ಯಾನ್ ಕೂಡ ಕೆಳಬೀಳುವ ದೃಶ್ಯ ‘ಎಎನ್​ಐ’ ವಿಡಿಯೋದಲ್ಲಿದೆ.

ಸೀಲಿಂಗ್ ಫ್ಯಾನ್​ಗೆ ಸ್ಪ್ರಿಂಗ್! ಆತ್ಮಹತ್ಯೆಗೆ ತಡೆಗೆ ರಾಜಸ್ಥಾನದ ಕೋಟಾ ಹಾಸ್ಟೆಲ್​​​ಗಳಿಂದ ಹೊಸ ಪ್ರಯೋಗ​
ಸೀಲಿಂಗ್ ಫ್ಯಾನ್​ಗೆ ಸ್ಪ್ರಿಂಗ್!
Follow us on

ಕೋಟಾ, ಆಗಸ್ಟ್ 18: ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ರಾಜಸ್ಥಾನ(Rajasthan) ಕೋಟಾದ (Kota) ಹಾಸ್ಟೆಲ್​​​ಗಳು ಮತ್ತು ಪೇಯಿಂಗ್ ಗೆಸ್ಟ್‌ಗಳು ಹೊಸದೊಂದು ಐಡಿಯಾ ಕಂಡುಕೊಂಡಿವೆ! ಹಾಸ್ಟೆಲ್​​​ಗಳು ಮತ್ತು ಪೇಯಿಂಗ್ ಗೆಸ್ಟ್‌ಗಳು ಕೊಠಡಿಗಳಲ್ಲಿ ಸೀಲಿಂಗ್ ಫ್ಯಾನ್‌ಗಳನ್ನು ನೇತುಹಾಕಲು ಸ್ಪ್ರಿಂಗ್‌ಗಳನ್ನು ಅಳವಡಿಸಲು ಆರಂಭಿಸಿವೆ. ಪರಿಣಾಮವಾಗಿ ಸೀಲಿಂಗ್ ಫ್ಯಾನ್​​ಗಳಿಗೆ ನೇಣು ಹಾಕಿ ಆತ್ಮಹತ್ಯೆ ಮಾಡುವವರ ಸಂಖ್ಯೆಯಾದರೂ ಕಡಿಮೆಯಾಗಲಿ ಎಂಬುದು ಅವರ ಆಶಯ. ಈ ವಿಚಾರವಾಗಿ ‘ಎಎನ್​ಐ’ ಸುದ್ದಿಸಂಸ್ಥೆ ಟ್ವೀಟ್ ಮೂಲಕ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ವ್ಯಕ್ತಿಯೊಬ್ಬರು, ಸೀಲಿಂಗ್ ಫ್ಯಾನ್​ಗಳಿಗೆ ಸ್ಪ್ರಿಂಗ್ ಅಳವಡಿಸುವುದರಿಂದ ಹೇಗೆ ಆತ್ಮಹತ್ಯೆ ತಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಒಬ್ಬ ವ್ಯಕ್ತಿಯು ವಸತಿಗೃಹದಲ್ಲಿ ಸೀಲಿಂಗ್‌ ಫ್ಯಾನ್​ಗೆ ನೇಣುಹಾಕಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಆದರೆ, ಅದಕ್ಕೆ ಸ್ಪ್ರಿಂಗ್ ಅಳವಡಿಸಿದ್ದರಿಂದ, ವ್ಯಕ್ತಿಯು ನೇಣು ಹಾಕಿ ಕೆಳಜಾರಿದಾಗ ಅವರ ಜತೆಗೇ ಫ್ಯಾನ್ ಕೂಡ ಕೆಳಬೀಳುವ ದೃಶ್ಯ ‘ಎಎನ್​ಐ’ ವಿಡಿಯೋದಲ್ಲಿದೆ.

ಸೀಲಿಂಗ್ ಫ್ಯಾನ್​ಗೆ ಸ್ಪ್ರಿಂಗ್; ವಿಡಿಯೋ ನೋಡಿ


ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಲು ಕೋಟಾದ ಎಲ್ಲಾ ಹಾಸ್ಟೆಲ್‌ಗಳು ಮತ್ತು ಪೇಯಿಂಗ್ ಗೆಸ್ಟ್ ಕೊಠಡಿಗಳಲ್ಲಿ ಸ್ಪ್ರಿಂಗ್ ಲೋಡೆಡ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ ಎಂದು ‘ಎಎನ್​ಐ’ ವರದಿ ತಿಳಿಸಿದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.

ಈ ಮಧ್ಯೆ, ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಕೋಟಾದಲ್ಲಿ ಈ ವರ್ಷ ಇಲ್ಲಿಯವರೆಗೆ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುತ್ತಿರುವ ಜೆಇಇ ಮತ್ತು ನೀಟ್ ಆಕಾಂಕ್ಷಿಗಳ ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡಿದೆ.

ಇದನ್ನೂ ಓದಿ: ಅಪ್ರಾಪ್ತ ಮಗಳಿಗೆ ಮದುವೆ ಮಾಡಿಸಲು ಒಲ್ಲೆ ಎಂದ ಗಂಡ, ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಮಂಗಳವಾರವಷ್ಟೇ ಬಿಹಾರದ 18 ವರ್ಷದ ಜೆಇಇ ಆಕಾಂಕ್ಷಿಯೊಬ್ಬರು ಮಹಾವೀರ್ ನಗರದಲ್ಲಿನ ತನ್ನ ಪಿಜಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಆಗಸ್ಟ್‌ನಲ್ಲಿ ವರದಿಯಾದ ನಾಲ್ಕನೇ ಆತ್ಮಹತ್ಯೆ ಪ್ರಕರಣವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Fri, 18 August 23