ಚೀನಾ(China)ದ ಶಕ್ತಿಶಾಲಿ ಬೇಹುಗಾರಿಕಾ ಹಡಗು ಶಿ ಯಾನ್ 6 ಹಿಂದೂ ಮಹಾಸಾಗರವನ್ನು ಪ್ರವೇಶಿಸಿ ಭಾರತದತ್ತ ಸಾಗುತ್ತಿದೆ. ಮಿಶ್ರ ಸಂದೇಶವನ್ನು ಕಳುಹಿಸುವ ಮೂಲಕ ಶ್ರೀಲಂಕಾ ಈ ಮಾಹಿತಿ ಹಂಚಿಕೊಂಡಿದೆ. ಪ್ರಸ್ತುತ ಈ ಹಡಗು ಹಿಂದೂ ಮಹಾಸಾಗರದ ಮಧ್ಯದಲ್ಲಿ 90 ಡಿಗ್ರಿ ಪೂರ್ವ ರೇಖಾಂಶದ ತುದಿಯಲ್ಲಿದೆ ಮತ್ತು ನಿರಂತರವಾಗಿ ಶ್ರೀಲಂಕಾ ಕಡೆ ಚವಲಿಸುತ್ತಿದೆ. ಶಿ ಯಾನ್ 6 ಹಡಗು ವಿಜ್ಞಾನ ಮತ್ತು ಶಿಕ್ಷಣ ಮೂಲಸೌಕರ್ಯವನ್ನು ಸ್ಥಾಪಿಸಲು ಚೀನಾದ 13 ನೇ ಪಂಚವಾರ್ಷಿಕ ಯೋಜನೆಯ ಪ್ರಮುಖ ಯೋಜನೆ ಇದಾಗಿದೆ.
ಉದ್ಘಾಟನೆಯ ಎರಡು ವರ್ಷಗಳ ಬಳಿಕ ಹಡಗು 2022ರಲ್ಲಿ ಪೂರ್ವ ಹಿಂದೂ ಮಹಾಸಾಗರದಲ್ಲಿ ತನ್ನ ಮೊದಲ ಪ್ರಯಾಣವನ್ನು ಯಶಸ್ವಿಯಾಗಿ ಮಾಡಿತ್ತು. ಅಕ್ಟೋಬರ್ನಲ್ಲಿ ಕೊಲಂಬೊ ಬಂದರಿನಲ್ಲಿ ಚೀನಾದ ಈ ಸಂಶೋಧನಾ ಹಡಗನ್ನು ನಿಲುಗಡೆ ಮಾಡಲು ಶ್ರೀಲಂಕಾದ ವಿಕ್ರಮಸಿಂಘೆ ಸರ್ಕಾರ ಅನುಮತಿ ನೀಡಿದೆ.
ಚೀನಾ 2019ರಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸುಮಾರು 48 ವೈಜ್ಞಾನಿಕ ಸಂಶೋಧನಾ ಹಡಗುಗಳನ್ನು ನಿಯೋಜಿಸಿದೆ. ಈ ಎಲ್ಲಾ ಹಡಗುಗಳ ನಿಯೋಜನೆಯು ಬಂಗಾಳಕೊಲ್ಲಿಯಿಂದ ಅರಬ್ಬಿ ಸಮುದ್ರ ಹಾಗೂ ಪರ್ಷಿಯನ್ನು ಕೊಲ್ಲಿಯವರೆಗೆ ಇರಲಿದೆ.
ಮತ್ತಷ್ಟು ಓದಿ: ಭಾರತೀಯರ ಕಾಳಜಿ ಮುಖ್ಯ, ಚೀನಾದ ಸಂಶೋಧನಾ ಹಡಗು ನಿಲುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಲಂಕಾ
ಚೀನಾದ ಹಡಗು ಶಿ ಯಾನ್ 6 ಸೆಪ್ಟೆಂಬರ್ 23 ರಂದು ಮಲಕ್ಕಾ ಜಲಸಂಧಿಯ ಮೂಲಕ ಹಿಂದೂ ಮಹಾಸಾಗರವನ್ನು ಪ್ರವೇಶಿಸಿತು ಮತ್ತು ಸೆಪ್ಟೆಂಬರ್ 10 ರಂದು ಹೋಮ್‌ಪೋರ್ಟ್ ಗುವಾಂಗ್‌ಝೌವನ್ನು ತೊರೆದ ನಂತರ ಸೆಪ್ಟೆಂಬರ್ 14 ರಂದು ಸಿಂಗಾಪುರದಲ್ಲಿ ಕಾಣಿಸಿಕೊಂಡಿತು.
ಈ ಮೊದಲು ಚೀನಾ ಸಂಶೋಧನಾ ಹಡಗು ಶ್ರೀಲಂಕಾಗೆ ಬಂದಿರುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀಲಂಕಾವು ನಮಗೆ ಭಾರತದ ಕಾಳಜಿ ಮುಖ್ಯ, ಚೀನಾದ ಹಡಗಿನ ನಿಲುಗಡೆಗೆ ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ