ಭಾರತದೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಶ್ರೀಲಂಕಾ (Srilanka) ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಅವರು ಜುಲೈ 21 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ರಾಜಕೀಯ ಅವ್ಯವಸ್ಥೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ (economic crisis) ಶ್ರೀಲಂಕಾ ಬಳಲುತ್ತಿದ್ದಾಗ ಭಾರತ 3.5 ಬಿಲಿಯನ್ ಅಮೆರಿಕನ್ ಡಾಲರ್ ತುರ್ತು ನೆರವು ನೀಡಿ ಸಹಾಯ ಮಾಡಿತ್ತು. ಕೋವಿಡ್ ನಂತರದ ಪ್ರವಾಸಿಗರ ವಾಪಸಾತಿ ಮತ್ತು ಶ್ರೀಲಂಕಾದ ವಲಸೆಗಾರರಿಂದ ಹೆಚ್ಚಿದ ಯುಎಸ್ ಡಾಲರ್ ವಹಿವಾಟಿನೊಂದಿಗೆ ದೇಶದ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯು ಸ್ಥಿರತೆಯತ್ತ ಸಾಗುತ್ತಿದೆ. ತಮ್ಮ ಭೇಟಿಯ ಸಮಯದಲ್ಲಿ, ಅಧ್ಯಕ್ಷ ವಿಕ್ರಮಸಿಂಘೆ ಅವರು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸುವುದರ ಜತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.
ಶ್ರೀಲಂಕಾದಲ್ಲಿ ರಾಜಕೀಯ ಪರಿಸ್ಥಿತಿ ಸುಸ್ಥಿತಿಯಲ್ಲಿ ಇಲ್ಲದೇ ಇದ್ದರೂ ಅಧ್ಯಕ್ಷ ವಿಕ್ರಮಸಿಂಘೆ ಅವರು ಸಾರ್ವತ್ರಿಕ ಚುನಾವಣೆ ನಡೆಸಲುಮತ್ತು ನವೆಂಬರ್ 2024 ರವರೆಗೆ ಗೋಟಾಬಯ ರಾಜಪಕ್ಸೆಗೆ ನೀಡಿದ ಜನಾದೇಶವನ್ನು ಪೂರೈಸಲು ಯಾವುದೇ ಆತುರ ತೋರಿಸುತ್ತಿಲ್ಲ. ಶ್ರೀಲಂಕಾದ ಪರಿಸ್ಥಿತಿಯು ಈ ವರ್ಷದ ಕೊನೆಯಲ್ಲಿ ಬಾಕಿ ಇರುವ USD 2.9 ಶತಕೋಟಿಯ ಒಟ್ಟು ಪ್ಯಾಕೇಜ್‌ನಲ್ಲಿ ಐಎಂಎಫ್ ಎರಡನೇ ಸಾಲದ ಮೂಲಕ ಸುಧಾರಿಸಲು ಸಮಯ ತೆಗೆದುಕೊಳ್ಳುತ್ತದೆ.
ಕಳೆದ ವರ್ಷ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಶ್ರೀಲಂಕಾಕ್ಕೆ ತುರ್ತು ಸಹಾಯದ ಪ್ಯಾಕೇಜ್ ಅನ್ನು ನೀಡಿತು. ಅದರಲ್ಲಿ 3 ಬಿಲಿಯನ್ ಅಮೆರಿಕನ್ ಡಾಲರ್ ಈ ಹಿಂದೆ ನೀಡಲಾದ ದ್ವಿಪಕ್ಷೀಯ ನೆರವಿನ ಹೊರತಾಗಿ ಇನ್ನೂ ಒಂದು ಬಿಲಿಯನ್ ಡಾಲರ್‌ಗಳಷ್ಟು ಬಾಕಿ ಉಳಿದಿದೆ.
ಅಧ್ಯಕ್ಷ ವಿಕ್ರಮಸಿಂಘೆ ಅವರು ಬೆಲ್ಟ್-ರೋಡ್ ಉಪಕ್ರಮದಲ್ಲಿ ಪಾಲ್ಗೊಳ್ಳಲು ಅಕ್ಟೋಬರ್‌ನಲ್ಲಿ ಚೀನಾಕ್ಕೆ ಪ್ರಯಾಣಿಸಲಿದ್ದಾರೆ. ಶ್ರೀಲಂಕಾ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ