ಇನ್ನು ಮುಂದೆ ಈ ರೈಲಿನಲ್ಲಿ ಪ್ರಮಾಣೀಕರಿಸಿದ ಸಂಪೂರ್ಣ ಸಸ್ಯಾಹಾರಿ ಆಹಾರ ಲಭ್ಯವಾಗಲಿದೆ; ಇಲ್ಲಿದೆ ಸಂಪೂರ್ಣ ಮಾಹಿತಿ

| Updated By: shivaprasad.hs

Updated on: Dec 12, 2021 | 10:10 AM

ಇನ್ನು ಮುಂದೆ ಈ ರೈಲಿನಲ್ಲಿ ಸಾತ್ವಿಕ ಎಂದು ಪ್ರಮಾಣೀಕರಿಸಲಾದ ಸಸ್ಯಾಹಾರಿ ಆಹಾರ ಲಭ್ಯವಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಇನ್ನು ಮುಂದೆ ಈ ರೈಲಿನಲ್ಲಿ ಪ್ರಮಾಣೀಕರಿಸಿದ ಸಂಪೂರ್ಣ ಸಸ್ಯಾಹಾರಿ ಆಹಾರ ಲಭ್ಯವಾಗಲಿದೆ; ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಶನಿವಾರ ಹೊರಡಿಸಿದ ಹೇಳಿಕೆಯ ಪ್ರಕಾರ, ‘ಶ್ರೀ ರಾಮಾಯಣ ಯಾತ್ರೆ’ ರೈಲು ಭಾನುವಾರ ‘ಸಸ್ಯಾಹಾರಿ ಪ್ರಮಾಣೀಕರಣ’ಪಡೆಯಲು ಸಿದ್ಧವಾಗಿದೆ. ದೇಶಾದ್ಯಂತ ವಿವಿಧ ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ಈ ರೈಲು ಸಸ್ಯಾಹಾರಿ ಆಹಾರದ ಪ್ರಮಾಣೀಕರಣವನ್ನು ಉತ್ತೇಜಿಸಲು ಸ್ಥಾಪಿಸಲಾದ ಲಾಭರಹಿತ ಸಂಸ್ಥೆಯಾದ ‘ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ’ದಿಂದ (ಎಸ್​​ಸಿಐ) ಸಸ್ಯಾಹಾರಿ ಪ್ರಮಾಣೀಕರಣವನ್ನು ಪಡೆಯಲಿದೆ. “ಸಸ್ಯಾಹಾರಿ ಸ್ನೇಹಿ ರೈಲ್ವೇ ಸೇವೆಗಳನ್ನು ಉತ್ತೇಜಿಸುವ ಸಲುವಾಗಿ, ಬ್ಯೂರೋ ವೆರಿಟಾಸ್ (ಜಾಗತಿಕ ಲೆಕ್ಕಪರಿಶೋಧನಾ ಪಾಲುದಾರ) ಸಹಯೋಗದೊಂದಿಗೆ ಎಸ್​​ಸಿಐ ಭಾನುವಾರ ಸಫ್ದರ್‌ಜಂಗ್ ರೈಲು ನಿಲ್ದಾಣದಲ್ಲಿ ‘ಶ್ರೀ ರಾಮಾಯಣ ಯಾತ್ರೆ’ಗೆ ಸಸ್ಯಾಹಾರಿ ಪ್ರಮಾಣೀಕರಣವನ್ನು ನೀಡುತ್ತದೆ” ಎಂದು ಐಆರ್​ಸಿಟಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸಸ್ಯಾಹಾರಿ-ಸ್ನೇಹಿ ರೈಲ್ವೇ ಸೇವೆಗಳು ವಿಶೇಷವಾಗಿ ಭಾರತೀಯ ರೈಲ್ವೇಯಲ್ಲಿನ ಪವಿತ್ರ ಸ್ಥಳಗಳಿಗೆ ಪ್ರಯಾಣಿಸುವ ಸಸ್ಯಾಹಾರಿಗಳು ಮತ್ತು ಸಸ್ಯಾಹಾರಿಗಳಿಗೆ ಮೀಸಲಾಗಿವೆ ಎಂದು ಹೇಳಿಕೆ ಸ್ಪಷ್ಟಪಡಿಸಿದೆ. “ಐಆರ್‌ಸಿಟಿಸಿ ಅಡುಗೆ ಕೋಣೆ, ಎಕ್ಸಿಕ್ಯೂಟಿವ್ ಲಾಂಜ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ಕೂಡ ಸಸ್ಯಾಹಾರಿ ಸ್ನೇಹಿ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಪ್ರಮಾಣೀಕರಿಸಲ್ಪಡಲಿವೆ” ಎಂದು ತಿಳಿಸಲಾಗಿದೆ.

‘ಶ್ರೀ ರಾಮಾಯಣ ಯಾತ್ರೆ’ ರೈಲು ಪ್ರವಾಸವು ಅಯೋಧ್ಯೆ, ನಂದಿಗ್ರಾಮ್, ಜನಕ್‌ಪುರ, ಸೀತಾಮರ್ಹಿ ಮತ್ತು ವಾರಣಾಸಿಯಂತಹ ಸ್ಥಳಗಳನ್ನು ಒಳಗೊಂಡಿದೆ. ಈ ಪ್ರವಾಸದ ಅವಧಿಯು 16 ರಾತ್ರಿಗಳು ಮತ್ತು 17 ದಿನಗಳದ್ದಾಗಿದೆ. ನವೆಂಬರ್ 13 ರಂದು, ಐಆರ್​ಸಿಟಿಸಿ ಕೆಲವು ರೈಲುಗಳನ್ನು ಸಾತ್ವಿಕ್ ಪ್ರಮಾಣೀಕರಿಸಿದ ಸಸ್ಯಾಹಾರಿ ಆಹಾರ ನೀಡಲಿದೆ ಎಂದು ತಿಳಿಸಿತ್ತು. ಇದೀಗ ಆ ಪ್ರಮಾಣಪತ್ರ ರಾಮಾಯಣ ಯಾತ್ರೆ ರೈಲಿಗೆ ಲಭ್ಯವಾಗಲಿದೆ.

ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾ ಸಸ್ಯಾಹಾರಿಗಳ ಅವಶ್ಯಕತೆಗಳಿಗೆ ಸರಿಹೊಂದುವ ಸೇವೆಗಳನ್ನು ಪರಿಚಯಿಸಲು ಮತ್ತು ಪವಿತ್ರ ಸ್ಥಳಗಳಿಗೆ ಸಸ್ಯಾಹಾರಿ ಪ್ರಯಾಣವನ್ನು ಉತ್ತೇಜಿಸಲು ಐಆರ್​ಸಿಟಿಸಿಯೊಂದಿಗೆ ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ತೀರ್ಥಯಾತ್ರೆಯ ಸ್ಥಳಗಳಿಗೆ ತೆರಳುವ ರೈಲುಗಳಿಗೆ ಈ ಪ್ರಮಾಣೀಕರಣ ನೀಡಲು ಉದ್ದೇಶಿಸಲಾಗಿದೆ. ಒಟ್ಟು 18 ರೈಲುಗಳು ಈ ಪ್ರಮಾಣೀಕರಣ ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ:

Viral Video: ಡಂಬಲ್ಸ್​ ಎತ್ತಿ ವ್ಯಾಯಾಮ ಮಾಡುತ್ತಿರುವ ಕಪ್ಪೆ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

ಜಮ್ಮು ಮತ್ತು ಕಾಶ್ಮೀರ: ಪುಲ್ವಾಮಾದಲ್ಲಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

Published On - 9:57 am, Sun, 12 December 21