Viral Video: ಡಂಬಲ್ಸ್ ಎತ್ತಿ ವ್ಯಾಯಾಮ ಮಾಡುತ್ತಿರುವ ಕಪ್ಪೆ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು
ಮನುಷ್ಯರಷ್ಟೇ ಅಲ್ಲ ಇತರ ಪ್ರಾಣಿಗಳೂ ತಮ್ಮ ಆರೋಗ್ಯದ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತವೆ ಎಂಬುವುದು ನಿಮಗೆ ತಿಳಿದಿದೆಯೇ? ಇದು ಸತ್ಯ. ಇತ್ತೀಚಿಗೆ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಕಪ್ಪೆ ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವುದನ್ನು ಕಾಣಬಹುದು.
ಕೊರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯಿಂದಾಗಿ ಇತ್ತೀಚೆಗೆ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಸುರಕ್ಷಿತವಾಗಿರಲು ದೇಹವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ ಎಂದು ಜನರು ಅರ್ಥಮಾಡಿಕೊಂಡಿದ್ದಾರೆ. ಆದರೆ ಮನುಷ್ಯರಷ್ಟೇ ಅಲ್ಲ ಇತರ ಪ್ರಾಣಿಗಳೂ ತಮ್ಮ ಆರೋಗ್ಯದ (Health) ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತವೆ ಎಂಬುವುದು ನಿಮಗೆ ತಿಳಿದಿದೆಯೇ? ಇದು ಸತ್ಯ. ಇತ್ತೀಚಿಗೆ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಇದರಲ್ಲಿ ಕಪ್ಪೆ (Frog) ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವುದನ್ನು ಕಾಣಬಹುದು.
ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಕಪ್ಪೆಯೊಂದು ರಸ್ತೆಯ ಬದಿಯಲ್ಲಿ ಮಲಗಿದ್ದು, ತನ್ನ ಕೈಗಳಿಂದ ಡಂಬಲ್ಸ್ ಹಿಡಿದು ಮೇಲೆ ಕೆಳಗೆ ಮಾಡುತ್ತಿದೆ. ಆದರೆ ಕಪ್ಪೆಗೆ ವಿಶೇಷವಾದ ರೀತಿಯಲ್ಲಿ ಡಂಬಲ್ಸ್ ತಯಾರಿಸಲಾಗಿದೆ. ಕಪ್ಪೆಯ ಕೈಯಲ್ಲಿರುವ ಡಂಬಲ್ಸ್ ಹಣ್ಣು ಅಥವಾ ಯಾವುದೋ ಪುಟ್ಟ ಕಾಯಿಯನ್ನು ಒಂದು ಕಡ್ಡಿಗೆ ಹಾಕಿ ತಯಾರಿಸಲಾಗಿದೆ. ಕಪ್ಪೆಯ ಕಸರತ್ತು ಮತ್ತು ಅದರ ವಿಶೇಷ ಡಂಬಲ್ಸ್ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
View this post on Instagram
ಕಾಮಿಡಿ ವೀಡಿಯೋಸ್ ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ನೋಡುತ್ತಿರುವ ಯಾರೇ ಆಗಲಿ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಇಷ್ಟ ಆಗುತ್ತದೆ. ಈ ವಿಡಿಯೋವನ್ನು ನೀವು ಎಷ್ಟು ಬಾರಿ ನೋಡುತ್ತೀರೋ ಅಷ್ಟು ಬಾರಿ ನೀವು ಇದನ್ನು ನೋಡಿ ಆಶ್ಚರ್ಯ ಪಡುತ್ತೀರಿ. ಈ ವಿಡಿಯೋವನ್ನು ಕಂಡ ನೆಟ್ಟಿಗರು ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ರಿಪೋಸ್ಟ್ ಮಾಡಿ ಖುಷಿಪಟ್ಟಿದ್ದಾರೆ.
ವಿಡಿಯೋ ಕುರಿತು ಪ್ರತಿಕ್ರಿಯಿಸಿದ ನೆಟ್ಟಿಗರು ಕಪ್ಪೆಗೆ ವ್ಯಾಯಾಮದ ಜ್ವರ ಬಂದಂತೆ ತೋರುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬೆಳಗ್ಗೆ ಜಿಮ್‌ಗೆ ಹೋಗುವಾಗ ಕೋಪಗೊಳ್ಳುವವರಿಗೆ ಈ ವೀಡಿಯೊ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಜಿಮ್‌ನಲ್ಲಿ ತಪ್ಪು ವ್ಯಾಯಾಮ ಮಾಡುವವರು ಈ ವೀಡಿಯೊವನ್ನು ನೋಡಬೇಕು ಎಂದು ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: 77ರ ಹರೆಯದಲ್ಲೂ ಸ್ಕೇಟಿಂಗ್ ಕಲಿಯುತ್ತಿರುವ ವೃದ್ಧ: ವೈರಲ್ ಆದ ವೀಡಿಯೋ
Viral Video: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ; ಡೇಂಜರಸ್ ವಿಡಿಯೋ ಹೇಗಿತ್ತು ನೀವೇ ನೋಡಿ
Published On - 9:48 am, Sun, 12 December 21