ದೂರದೂರಿನಿಂದ ಮಗಳು ಆಗಮಿಸಿ ಸರ್ಪ್ರೈಸ್ ನೀಡಿದರೆ ತಂದೆಗೆ ಎಷ್ಟು ಖುಷಿಯಾಗುತ್ತದೆ?; ಭಾವುಕ ವಿಡಿಯೋ ನೋಡಿ
Viral Video: ಕ್ರಿಸ್ಮಸ್ ಹಬ್ಬಕ್ಕೆ ಊರಿಗೆ ಆಗಮಿಸಿದ ಯುವತಿಯೊಬ್ಬಳು, ತನ್ನ ತಂದೆಗೆ ಸರ್ಪ್ರೈಸ್ ನೀಡಿದ್ದಾರೆ. ಈ ಸಂದರ್ಭದ ಭಾವುಕ ಸನ್ನಿವೇಶ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.
ಎಲ್ಲರಿಗೂ ಅವರವರ ಕುಟುಂಬದೊಂದಿಗೆ ಸಮಯ ಕಳೆಯುವುದೆಂದರೆ ಅದು ಅತ್ಯಂತ ಖುಷಿಯ ವಿಚಾರ. ಅದರಲ್ಲೂ ಹಲವು ಕಾರಣಗಳಿಂದಾಗಿ ದೂರದೂರುಗಳಲ್ಲಿ ಇರುವ ವ್ಯಕ್ತಿಗಳು, ಮರಳಿ ಕುಟುಂಬವನ್ನು ಭೇಟಿ ಮಾಡುವಾಗ ಆಗುವ ಆನಂದ ಅಷ್ಟಿಷ್ಟಲ್ಲ. ಸದ್ಯ ವಿದೇಶಗಳಲ್ಲಿ ಕ್ರಿಸ್ಮಸ್ ಸಂಭ್ರಮ ಜೋರಾಗಿದೆ. ಬೇರೆಬೇರೆ ದೇಶಗಳಲ್ಲಿ ಇರುವವರು ತಮ್ಮ ತಮ್ಮ ಸ್ವದೇಶಕ್ಕೆ ಮರಳಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸದ್ಯ ಅಂತರ್ಜಾಲದಲ್ಲಿ ಇಂತಹ ವಿಶೇಷ ಸಂದರ್ಭವೊಂದು ವೈರಲ್ ಆಗಿದ್ದು, ನೆಟ್ಡಿಗರು ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಮಗಳೊಬ್ಬಳು ವಯಸ್ಸಾದ ತಂದೆಯನ್ನು ಭೇಟಿಯಾಗಿ ಸರ್ಪ್ರೈಸ್ ನೀಡಿದ್ದಾಳೆ. ಈ ವಿಡಿಯೋ ನೋಡುಗರ ಮನಗೆದ್ದಿದೆ.
ಇನ್ಸ್ಟಾಗ್ರಾಂ ಬಳಕೆದಾರರಾದ ಮೆಕ್ ಮೆಕ್ಲಾಚ್ಲಾನ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದರ ಹಿನ್ನೆಲೆಯನ್ನು ಬರೆದಿದ್ದಾರೆ. ಅವರ ಸಹೋದರಿ ದೂರದ ಸ್ವಿಟ್ಜರ್ಲ್ಯಾಂಡ್ನಲ್ಲಿ 12 ವರ್ಷಗಳಿಂದ ವಾಸವಾಗಿದ್ದಾರೆ. ಆದ್ದರಿಂದ ಕುಟುಂಬದೊಂದಿಗಿನ ಭೇಟಿ ಅಪರೂಪವಾಗಿತ್ತಂತೆ. ಕುಟುಂಬದವರೊಂದಿಗೆ ಕ್ರಿಸ್ಮಸ್ ಸಮಯವನ್ನು ಕಳೆಯಲು ಆಗಮಿಸಿದ ಅವರು ತಂದೆಗೆ ಸರ್ಪ್ರೈಸ್ ನೀಡಿದ್ದಾರೆ.
ವಿಡಿಯೋದಲ್ಲಿ ಕಾಣುವಂತೆ, ಯುವತಿ ಕಾರಿನ ಹಿಂಭಾಗದಲ್ಲಿ ಕುಳಿತಿದ್ದಾರೆ. ತಂದೆ ಬಂದು ಕಾರಿನ ಡಿಕ್ಕಿಯನ್ನು ತೆಗೆಯುತ್ತಾರೆ. ಆಗ ಮಗಳನ್ನು ನೋಡಿ ಅಚ್ಚರಿಗೊಳಗಾಗುವ ತಂದೆ, ಭಾವುಕರಾಗುತ್ತಾರೆ. ತಂದೆ- ಮಗಳ ಬಾಂಧವ್ಯದ ಈ ಅಪರೂಪದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ:
View this post on Instagram
ವಿಡಿಯೋವನ್ನು ಹಂಚಿಕೊಂಡ ಮೆಗ್ ಮೆಕ್ಲಾಚಾನ್ ಸಹೋದರಿಯ ಆಗಮನದಿಂದ ಅತ್ಯಂತ ಸಂತಸಗೊಂಡಿದ್ದಾರೆ. ಅಲ್ಲದೇ ಆಕೆಯ ಭೇಟಿ ಕ್ರಿಸ್ಮಸ್ ಹಬ್ಬವನ್ನು ಮತ್ತಷ್ಟು ಸುಂದರವಾಗಿಸಲಿದೆ ಎಂದು ಬರೆದಿದ್ದಾರೆ. ಮೂರು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ನೋಡಿ ಭಾವುಕರಾಗಿದ್ದಾರೆ. ಅಲ್ಲದೇ ವಿವಿಧ ರೀತಿಯ ಕಾಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ವಿಡಿಯೋ ನೋಡಿ ನಿಮಗೇನನ್ನಿಸಿತು?
ಇದನ್ನೂ ಓದಿ:
ನೆಚ್ಚಿನ ಸಂಗಾತಿಯೊಂದಿಗೆ ಗೋವಾದ ಕಡಲತೀರದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದೀರಾ? ಇಲ್ಲಿದೆ ಪೂರ್ಣ ಮಾಹಿತಿ
ಮೆಹಂದಿ ಸಮಾರಂಭದಲ್ಲಿ ಮಿಂಚಿದ ಕತ್ರಿನಾ, ವಿಕ್ಕಿ; ಇಲ್ಲಿದೆ ಮಸ್ತ್ ಫೋಟೋ ಆಲ್ಬಂ