ನೆಚ್ಚಿನ ಸಂಗಾತಿಯೊಂದಿಗೆ ಗೋವಾದ ಕಡಲತೀರದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದೀರಾ? ಇಲ್ಲಿದೆ ಪೂರ್ಣ ಮಾಹಿತಿ
ಫೋಟೋಗ್ರಾಫರ್, ಮೇಕಪ್, ಮೆಹಂದಿ, ಕೇಕ್ ಮತ್ತು ಪಟಾಕಿ ಇತ್ಯಾದಿಗಳಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಗೋವಾದಲ್ಲಿ ಸರಳವಾಗಿ ಮದುವೆ ಆಗಬೇಕು ಎಂದರೂ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಲಿದೆ.
ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತು ಸಾಮಾನ್ಯವಾಗಿ ನಮ್ಮ ನಡುವೆಯಿದೆ. ಅದರಂತೆ ಅನೇಕರು ತಾವು ಇಷ್ಟಪಟ್ಟ ಸಂಗಾತಿಯೊಂದಿಗೆ ವಿಶಿಷ್ಟ ರೀತಿಯಲ್ಲಿ ವಿವಾಹವಾಗಲು ಬಯಸುತ್ತಾರೆ. ಅದರಲ್ಲೂ ಇತ್ತೀಚೆಗೆ ಬೀಜ್ ಬಳಿ ವಿವಾಹವಾಗುವುದು ಒಂದು ಟ್ರೆಂಡ್ ಆಗಿದೆ. ಹೀಗಾಗಿ ಗೋವಾದ ಕಡಲತೀರದಲ್ಲಿ ಮದುವೆಯಾಗಲು ಬಯಸಿದರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
1 / 6
100 ಜನರೊಂದಿಗೆ ಗೋವಾದಲ್ಲಿ ನೀವು ಮದುವೆಯಾಗಲು ಬಯಸಿದರೆ ಆಹಾರದ ವೆಚ್ಚ 10 ಲಕ್ಷ ರೂಪಾಯಿಗಿಂತ ಹೆಚ್ಚಿರಬಹುದು. ಗೋವಾದಲ್ಲಿನ ಸ್ಟಾರ್ ಹೋಟೆಲ್‌ಗಳಲ್ಲಿ ಸರಾಸರಿ ವೆಚ್ಚವು ಪ್ರತಿ ಕೊಠಡಿಗೆ 13,000 ರಿಂದ 20,000 ರೂಪಾಯಿ ನಡುವೆ ಇರುತ್ತದೆ.
2 / 6
ಫೋಟೋಗ್ರಾಫರ್, ಮೇಕಪ್, ಮೆಹಂದಿ, ಕೇಕ್ ಮತ್ತು ಪಟಾಕಿ ಇತ್ಯಾದಿಗಳಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಗೋವಾದಲ್ಲಿ ಸರಳವಾಗಿ ಮದುವೆ ಆಗಬೇಕು ಎಂದರೂ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಲಿದೆ.
3 / 6
ಗೋವಾದಲ್ಲಿ ಮದುವೆ ಮಂಟಪ ಮತ್ತು ಹೂವಿನ ಅಲಂಕಾರವು ಕೂಡ ಮುಖ್ಯಪಾತ್ರ ವಹಿಸುತ್ತದೆ. ಇದು 3 ಲಕ್ಷದಿಂದ 7 ಲಕ್ಷ ರೂಪಾಯಿ ವರೆಗೆ ಇರುತ್ತದೆ. ಇನ್ನು ಮದುವೆ ಸಂಭ್ರಮ ಹೆಚ್ಚಿಸಲು ಡಿಜೆ ಬೇಕು ಎನಿಸಿದರೆ ಇದಕ್ಕೂ ಅವಕಾಶ ಇದೆ. ಸುಮಾರು 1 ರಿಂದ 2 ಲಕ್ಷ ರೂಪಾಯಿ ಇದಕ್ಕೆ ಖರ್ಚಾಗುತ್ತದೆ.
4 / 6
ಗೋವಾದಲ್ಲಿ ಮದುವೆಯ ಸ್ಥಳಗಳಿಗೆ ಹಲವು ಆಯ್ಕೆಗಳಿವೆ. ವಿಲ್ಲಾಗಳು, ಖಾಸಗಿ ಬೀಚ್‌ಗಳು ಅಥವಾ ಹೋಟೆಲ್‌ಗಳನ್ನು ಆಯ್ಕೆ ಮಾಡಬಹುದು. ಇಲ್ಲಿ ಮದುವೆಗೆ ಸುಮಾರು 50 ಲಕ್ಷ ರೂಪಾಯಿಯ ಬಜೆಟ್ ಇರಬೇಕು.
5 / 6
ಒಟ್ಟಾರೆ ನೀವು ಮೆಚ್ಚಿದ ಸಂಗಾತಿಯೊಂದಿಗೆ ಗೋವಾದಲ್ಲಿ ಮದುವೆಯಾಗಲು ಬಯಸಿದರೆ ಈ ಕುರಿತು ಯೋಚಿಸಬಹುದು.