ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಗ್ರಾಮವೊಂದರಲ್ಲಿ ಕರುಣಾಜನಕ ಘಟನೆ ನಡೆದಿದೆ. ಒಂದೇ ಗ್ರಾಮದವರಾಗಿದ್ದ ಬಾಲಕಿ ಹಾಗೂ ಆರೋಪಿ ಯುವಕ ಈಗಿನ್ನೂ ಓದುತ್ತಾ ಇದ್ರು. ಬಾಲಕಿ 10ನೇ ತರಗತಿ ಓದುತ್ತಾ ಇದ್ರೆ, ಆರೋಪಿ ಯುವಕ ಡಿಗ್ರಿ ಮಾಡ್ತಿದ್ದ. ಆದ್ರೆ ಅವನ ತಲೇಲಿ ಅದೇನು ಖತರ್ನಾಕ್ ಐಡಿಯಾ ಇತ್ತೋ ಗೊತ್ತಿಲ್ಲ.
ಬಾಲಕಿಯ ಹಿಂದೆ ಬಿದ್ದು, ಪ್ರೀತ್ಸೆ ಪ್ರೀತ್ಸೆ ಅಂತಾ ಪ್ರಾಣ ಹಿಂಡುತ್ತಿದ್ದ. ಅದನ್ನೂ ಮೀರಿ, ನೀನು ನನ್ನ ಪ್ರೀತಿ ಮಾಡದೇ ಇದ್ರೆ ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂತಾ ಬೆದರಿಕೆ ಕೂಡ ಹಾಕಿದ್ದನಂತೆ. ಇದೇ ಕಾರಣಕ್ಕೆ ಬೆಚ್ಚಿದ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದು, ಆರೋಪಿ ಯುವಕನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತೆಗೆದ ಸೆಲ್ಫಿ ವಿಡಿಯೋದಲ್ಲಿ ಯುವಕನ ವಿರುದ್ಧ ಹಲವಾರು ಆರೋಪಗಳನ್ನ ಮಾಡಿದ್ದಳು. ಇದೇ ವಿಡಿಯೋ ಆಧರಿಸಿ ಪೊಲೀಸರು ಆರೋಪಿ ಯುವಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತ್ತಿದ್ದಾರೆ. ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾಗಿದ್ದು, ಆರೋಪಿಗೆ ಸರಿಯಾಗಿ ಗ್ರಿಲ್ ಮಾಡ್ತಿದ್ದಾರೆ.
ಒಟ್ನಲ್ಲಿ ಓದಿ ಬದುಕು ಕಟ್ಟಿಕೊಳ್ಳಬೇಕಾದ ವಯಸ್ಸಲ್ಲಿ ಹುಡುಗಾಟ ಮಾಡುತ್ತಾ, ಬಾಲಕಿಗೆ ಕಿರುಕುಳ ಕೊಟ್ಟಿದ್ದ ಕಿರಾತಕ ಕಂಬಿ ಹಿಂದೆಬಿದ್ದಿದ್ದಾನೆ. ಇನ್ನೊಂದೆಡೆ ತಾನು ಮಾಡದ ತಪ್ಪಿಗೆ ಜೀವವನ್ನೇ ಬಿಟ್ಟಿರುವ ಬಾಲಕಿಯನ್ನ ನೆನೆದು ಆಕೆಯ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮದುವೆಗೆ ಹೊರಟ್ಟಿದ್ದ ಮಿನಿ ಬಸ್ ಪಲ್ಟಿ: ಪ್ರಯಾಣಿಕ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ
Published On - 6:52 am, Mon, 21 December 20