ಮನ್ಕಿ ಬಾತ್ ವಿರೋಧಿಸಿ ಚಪ್ಪಾಳೆ ತಟ್ಟಿ: ಭಾರತೀಯ ಕಿಸಾನ್ ಯೂನಿಯನ್ ಕರೆ
ಪ್ರಧಾನಿ ನರೇಂದ್ರ ಮೋದಿ ಅವರು ಡಿ.25ರಂದು ಮನ್ ಕಿ ಬಾತ್ ಮಾತಾಡುವ ವೇಳೆ ಚಪ್ಪಾಳೆ ಬಾರಿಸುವಂತೆ ಭಾರತೀಯ ಕಿಸಾನ್ ಯೂನಿಯನ್ನ ಜಗಜೀತ್ ಸಿಂಗ್ ಸಿಂಗ್ ಕರೆ ನೀಡಿದ್ದಾರೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿ.25ರಂದು ಮನ್ ಕಿ ಬಾತ್ ಮಾತಾಡುವ ವೇಳೆ ಚಪ್ಪಾಳೆ ಬಾರಿಸುವಂತೆ ಭಾರತೀಯ ಕಿಸಾನ್ ಯೂನಿಯನ್ನ ಜಗಜೀತ್ ಸಿಂಗ್ ಸಿಂಗ್ ಕರೆ ನೀಡಿದ್ದಾರೆ.
ರೈತರ ಪ್ರತಿಭಟನೆ 25ನೇ ದಿನ ತಲುಪಿದರೂ ಕೇಂದ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸದ ಕಾರಣ ರೈತ ಒಕ್ಕೂಟಗಳು ಈ ನಿರ್ಧಾರ ತಳೆದಿವೆ. ಪ್ರಧಾನಿಯವರ ಮಾತನ್ನು ವಿರೋಧಿಸಿ ದೇಶದ ಜನರು ಘಂಟೆ ಜಾಗಟೆಗಳನ್ನೊಳಗೊಂಡ ಚಪ್ಪಾಳೆ ಬಾರಿಸಬೇಕೆಂದು ಅವರು ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ. ರೈತ ದಿನದದಂದು ದೇಶದ ರೈತರು ಊಟ ತ್ಯಜಿಸುವುದನ್ನು ನೀವು ಬಯಸುತ್ತೀರಾ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹರಿಯಾಣದ ಟೋಲ್ ಬೂತ್ಗಳನ್ನು ಡಿಸೆಂಬರ್ 25ರಿಂದ 27ರವರೆಗೆ ಮುಕ್ತಗೊಳಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ದೆಹಲಿ ಚಲೋಗೆ ಬೆಂಬಲ ವ್ಯಕ್ತಪಡಿಸಿರುವ ಸ್ವರಾಜ್ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್ 24 ಘಂಟೆಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.
‘ಮೋದಿ ಮಧ್ಯಸ್ಥಿಕೆ ವಹಿಸಿದರೆ ರೈತರ ಪ್ರತಿಭಟನೆಗೆ ನಿಮಿಷದೊಳಗೆ ಅಂತ್ಯ ಹಾಡಬಹುದು’