ತಿರುಪತಿಯ ತಲಕೋನಾ ಜಲಪಾತದಲ್ಲಿ ಈಜಲು ಹೋಗಿ ಬಂಡೆಗಳ ನಡುವೆ ಸಿಲುಕಿ ಮಂಗಳೂರು ಮೂಲದ ವಿದ್ಯಾರ್ಥಿ ಸಾವು

|

Updated on: Jul 02, 2023 | 1:57 PM

ಮಂಗಳೂರು ಮೂಲದ ವಿದ್ಯಾರ್ಥಿ ತಿರುಪತಿಯ ತಲಕೋನಾ ಜಲಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುಮಂತ್ ಸ್ನೇಹಿತರ ಜತೆಗೆ ಟ್ರಿಪ್​ಗೆಂದು ಬಂದಿದ್ದರು.

ತಿರುಪತಿಯ ತಲಕೋನಾ ಜಲಪಾತದಲ್ಲಿ ಈಜಲು ಹೋಗಿ ಬಂಡೆಗಳ ನಡುವೆ ಸಿಲುಕಿ ಮಂಗಳೂರು ಮೂಲದ ವಿದ್ಯಾರ್ಥಿ ಸಾವು
ಸುಮಂತ್
Follow us on

ಮಂಗಳೂರು ಮೂಲದ ವಿದ್ಯಾರ್ಥಿ ತಿರುಪತಿಯ ತಲಕೋನಾ ಜಲಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸುಮಂತ್ ಸ್ನೇಹಿತರ ಜತೆಗೆ ಟ್ರಿಪ್​ಗೆಂದು ಬಂದಿದ್ದರು. ಸುಮಂತ್ ಅವರು ತಲಕೋಣ ಜಲಪಾತಕ್ಕೆ ಧುಮುಕುತ್ತಿರುವರುವುದನ್ನು ಸ್ನೇಹಿತರು ವಿಡಿಯೋ ಮಾಡುತ್ತಿದ್ದರು.

ಆದರೆ, ಬಹಳ ಸಮಯವಾದರೂ ಆತ ಕಾಣಿಸಿದ ಕಾರಣ ಆತಂಕಗೊಂಡು ಸಮೀಪದ ಪೊಲೀಸ್ ಠಾಣೆ ಹಾಗೂ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಸುಮಂತ್‌ನ ತಲೆಯು ನೀರಿನ ಅಡಿಯಲ್ಲಿ ಎರಡು ಬಂಡೆಗಳ ನಡುವೆ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ. ಶನಿವಾರ ಅವರ ಮೃತದೇಹವನ್ನು ಜಲಪಾತದಿಂದ ಹೊರತೆಗೆಯಲಾಗಿದೆ.

ಮತ್ತಷ್ಟು ಓದಿ: Mumbai: ಈಜುಕೊಳದಲ್ಲಿ ವ್ಯಕ್ತಿಯ ಮೇಲೆ ಎತ್ತರದಿಂದ ಹಾರಿದ ಯುವಕ, ಕುತ್ತಿಗೆ ಟ್ವಿಸ್ಟ್ ಆಗಿ ವೃದ್ಧ ಸಾವು

ಸುಮಂತ್ ಚೆನ್ನೈನ ರಾಜೀವ್ ಗಾಂಧಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದ. ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ತಲಕೋನಾ ಜಲಪಾತದಲ್ಲಿ ನಡೆದ ಇಂತಹ ಮೂರನೇ ಘಟನೆ ಇದಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ