Mumbai: ಈಜುಕೊಳದಲ್ಲಿ ವ್ಯಕ್ತಿಯ ಮೇಲೆ ಎತ್ತರದಿಂದ ಹಾರಿದ ಯುವಕ, ಕುತ್ತಿಗೆ ಟ್ವಿಸ್ಟ್ ಆಗಿ ವೃದ್ಧ ಸಾವು
ಈಜುಕೊಳ(Swimming Pool) ಒಂದರಲ್ಲಿ ಎತ್ತರದಿಂದ ಯುವಕನೊಬ್ಬ ವೃದ್ಧನ ಮೇಲೆ ಹಾರಿದ ಪರಿಣಾಮ ಕುತ್ತಿಗೆ ಟ್ವಿಸ್ಟ್ ಆಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದೆ.
ಈಜುಕೊಳ(Swimming Pool) ಒಂದರಲ್ಲಿ ಎತ್ತರದಿಂದ ಯುವಕನೊಬ್ಬ ವೃದ್ಧನ ಮೇಲೆ ಹಾರಿದ ಪರಿಣಾಮ ಕುತ್ತಿಗೆ ಟ್ವಿಸ್ಟ್ ಆಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದೆ. ಗೋರೆಗಾಂವ್ ಪ್ರದೇಶದಲ್ಲಿರುವ ಓಜೋನ್ ಸ್ವಿಮ್ಮಿಂಗ್ಪೂಲ್ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಮೃತರನ್ನು 72 ವರ್ಷದ ವಿಷ್ಣು ಸಮಂತ್ ಎಂದು ಗುರುತಿಸಲಾಗಿದೆ. ತುಂಬಾ ಎತ್ತರದಿಂದ ಯುವಕನೊಬ್ಬ ಸ್ವಿಮ್ಮಿಂಗ್ ಫೂಲ್ಗೆ ಹಾರಿದ್ದ ಆಗ ತಿಳಿಯದೇ ವೃದ್ಧನ ಮೇಲೆ ಬಿದ್ದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ ನೀಡಿರುವ ದೂರಿನ ಪ್ರಕಾರ 20 ವರ್ಷದ ಯುವಕನ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.
ಜನವರಿಯಲ್ಲಿ ಖಾಸಗಿ ಈಜುಕೊಳದಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.
ಮತ್ತಷ್ಟು ಓದಿ: Belgaum: ಘಟಪ್ರಭಾ ನದಿಯಲ್ಲಿ ಈಜಲು ಹೋಗಿ ನಾಲ್ವರು ಯುವಕರು ಸಾವು
ಜರಗನಹಳ್ಳಿ ನಿವಾಸಿಗಳಾದ ಜಯಂತ್ (13) ಮತ್ತು ಮೋಹನ್(13) ಮೃತ ದುರ್ದೈವಿಗಳು. ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಜೆ.ಪಿ.ನಗರ 7ನೇ ಹಂತದ ಎಂಎನ್‌ಸಿ ಸ್ಪೋಟ್ಸ್‌ರ್ ಅಕಾಡೆಮಿಯ ಈಜುಕೊಳದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಅಕಾಡೆಮಿಯ ಈಜು ತರಬೇತುದಾರ ಮೋಯಿನ್ ಎಂಬಾತನನ್ನು ಬಂಧಿಸಲಾಗಿದೆ. ಅಕಾಡೆಮಿಯ ನರೇಶ್ ಮತ್ತು ಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿತ್ತು.