Kedarnath Yatra: ತೆರೆದ ಕೇದಾರನಾಥ ದೇವಾಲಯ: ಹಿಮಪಾತ, ಯಾತ್ರೆ ತಾತ್ಕಾಲಿಕ ಸ್ಥಗಿತ
ನಾಲ್ಕು ಧಾಮಗಳಲ್ಲಿ ಒಂದಾದ ಕೇದಾರನಾಥ(Kedarnath) ದೇವಾಲಯದ ಬಾಗಿಲು ಇಂದು ತೆರೆದಿದೆ. ಬೆಳಗ್ಗೆ 6.20ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲು ತೆರೆಯಲಾಯಿತು.
ನಾಲ್ಕು ಧಾಮಗಳಲ್ಲಿ ಒಂದಾದ ಕೇದಾರನಾಥ(Kedarnath) ದೇವಾಲಯದ ಬಾಗಿಲು ಇಂದು ತೆರೆದಿದೆ. ಬೆಳಗ್ಗೆ 6.20ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲು ತೆರೆಯಲಾಯಿತು. ಕೇದಾರನಾಥದಲ್ಲಿ ಧಾರಾಕಾರವಾಗಿ ಹಿಮ ಸುರಿಯುತ್ತಿದ್ದರೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನಕ್ಕೆ ಆಗಮಿಸಿದ್ದಾರೆ. ಮಾಹಿತಿ ಪ್ರಕಾರ 7 ಸಾವಿರಕ್ಕೂ ಹೆಚ್ಚು ಭಕ್ತರು ದೇವಾಲಯದ ಆವರಣದಲ್ಲಿದ್ದಾರೆ. ಬಾಗಿಲು ತೆರೆಯುವ ಸಂದರ್ಭದಲ್ಲಿ ಇಡೀ ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿದೆ.
ಮಾಹಿತಿ ಪ್ರಕಾರ, ಸುಮಾರು 35 ಕ್ವಿಂಟಾಲ್ ಹೂವುಗಳನ್ನು ದೇವಾಲಯವನ್ನು ಅಲಂಕರಿಸಲು ಬಳಸಲಾಗಿದೆ. ಸಮುದ್ರ ಮಟ್ಟದಿಂದ 3 ಸಾವಿರದ 581 ಮೀಟರ್ ಎತ್ತರದಲ್ಲಿರುವ ಈ ದೇವಾಲಯವನ್ನು ಐದನೇ ಜ್ಯೋತಿರ್ಲಿಂಗ ಎಂದು ಪೂಜಿಸಲಾಗುತ್ತದೆ. ಇಲ್ಲಿಯೇ ಶಿವನು ಪಾಂಡವರಿಗೆ ಗೂಳಿಯ ರೂಪದಲ್ಲಿ ಕಾಣಿಸಿಕೊಂಡನೆಂದು ನಂಬಲಾಗಿದೆ.
ಈ ಭವ್ಯವಾದ ದೇವಾಲಯವನ್ನು 8 ಮತ್ತು 9 ನೇ ಶತಮಾನದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರು ನಿರ್ಮಿಸಿದರು. ಕೇದಾರನಾಥ ಧಾಮದಲ್ಲಿ ಮಧ್ಯಂತರ ಹಿಮಪಾತ ಮತ್ತು ಮಳೆಯನ್ನು ಗಮನದಲ್ಲಿಟ್ಟುಕೊಂಡು, ಯಾತ್ರೆಯನ್ನು ಪ್ರಾರಂಭಿಸುವ ಮೊದಲು ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಅವರು ಭಕ್ತರನ್ನು ಕೇಳಿಕೊಂಡಿದ್ದಾರೆ.
ಮತ್ತಷ್ಟು ಓದಿ: Char Dham Yatra: ಕೇದಾರನಾಥ ಯಾತ್ರಾರ್ಥಿಗಳಿಗೆ ಮಳೆ, ಹಿಮಪಾತದ ಎಚ್ಚರಿಕೆ ನೀಡಿದ ಉತ್ತರಾಖಂಡ ಸರ್ಕಾರ
ಭಕ್ತರು ಕೇದಾರನಾಥಕ್ಕೆ ಬರುವ ಮುನ್ನ ಹವಾಮಾನವನ್ನು ಪರಿಶೀಲಿಸುವಂತೆ ತಿಳಿಸಲಾಗಿದೆ. ಪ್ರತಿಕೂಲ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಕೇದಾರನಾಥ ಧಾಮದಲ್ಲಿ ನಿವಾಸದ ವ್ಯವಸ್ಥೆಯನ್ನು ಮುಂಚಿತವಾಗಿಯೇ ಖಾತ್ರಿಪಡಿಸಿಕೊಳ್ಳುವಂತೆಯೂ ಮನವಿ ಮಾಡಲಾಗಿದೆ.
ಇದಕ್ಕೂ ಮುನ್ನ, ದೇವಾಲಯದ ಬಾಗಿಲು ತೆರೆಯುವ ಮುನ್ನಾದಿನದಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸೋಮವಾರ ಸಂಜೆ ಗುಪ್ತಕಾಶಿಗೆ ಆಗಮಿಸಿ ಪ್ರಯಾಣದ ವ್ಯವಸ್ಥೆಗಳ ಬಗ್ಗೆ ವಿಚಾರಿಸಿದರು.
ರಿಷಿಕೇಶ, ಗೌರಿಕುಂಡ್, ಗುಪ್ತಕಾಶಿ ಹಾಗೂ ಸೋನ್ಪ್ರಯಾಗ್ನಲ್ಲಿ ಭಕ್ತರಿಗೆ ಉಳಿದುಕೊಳ್ಳುವಂತೆ ತಿಳಿಸಲಾಗಿದೆ. ಆದರೆ ಕೆಲವು ಭಕ್ತರು ಈಗಾಗಲೇ ಕೇದಾರನಾಥಕ್ಕೆ ಆಗಮಿಸಿದ್ದಾರೆ.
ಏಪ್ರಿಲ್ 29 ರವರೆಗೆ ಈ ಪ್ರದೇಶದಲ್ಲಿ ಹಿಮಪಾತ ಮತ್ತು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ನಂತರ ಉತ್ತರಾಖಂಡ ಸರ್ಕಾರವು ಭಾನುವಾರ ಕೇದಾರನಾಥಕ್ಕೆ ಯಾತ್ರಿಕರ ಹೊಸ ನೋಂದಣಿಯನ್ನು ಏಪ್ರಿಲ್ 30 ರವರೆಗೆ ಮುಚ್ಚಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ