ಚಾಕಲೇಟ್ ತಿಂದು ಶಾಲೆಗೆ ಬಂದ ವಿದ್ಯಾರ್ಥಿಗಳ ವಿಚಿತ್ರ ವರ್ತನೆ: ಶಿಕ್ಷಕರಿಗೆ ಶಾಕ್, ಪೋಷಕರು ಕಂಗಾಲು

|

Updated on: Jan 11, 2024 | 3:46 PM

ಪಾನ್ ಗೂಡಂಗಡಿಗಳಲ್ಲಿ ಮಾರುತ್ತಿದ್ದ ಚಾಕಲೇಟ್ ತಿಂದು ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಕೋತೂರ್ ಮಂಡಲ ಕೇಂದ್ರದ ಸರಕಾರಿ ಪ್ರೌಢಶಾಲೆಯಲ್ಲಿ ಬೆಳಕಿಗೆ ಬಂದಿದೆ. ಶಾಲೆಯ ಪಕ್ಕದಲ್ಲೇ ಒರಿಸ್ಸಾದ ಕೆಲವರು ಪಾನ್ ಗಳಲ್ಲಿ ಮಾರುವ ಚಾಕಲೇಟ್ ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದರಂತೆ.

ಚಾಕಲೇಟ್ ತಿಂದು ಶಾಲೆಗೆ ಬಂದ ವಿದ್ಯಾರ್ಥಿಗಳ ವಿಚಿತ್ರ ವರ್ತನೆ: ಶಿಕ್ಷಕರಿಗೆ ಶಾಕ್, ಪೋಷಕರು ಕಂಗಾಲು
ಚಾಕಲೇಟ್ ತಿಂದು ಶಾಲೆಗೆ ಬಂದ ವಿದ್ಯಾರ್ಥಿಗಳ ವಿಚಿತ್ರ ವರ್ತನೆ
Follow us on

ಸಾಮಾನ್ಯವಾಗಿ ಅನೇಕ ವಿದ್ಯಾರ್ಥಿಗಳು ಶಾಲೆಯ ಬಳಿ ಇರುವ ಪಾನ್ ಅಂಗಡಿಗಳಲ್ಲಿ ಸಿಗುವ ಚಾಕಲೇಟ್ ಗಳನ್ನು ಹೆಚ್ಚಾಗಿ ಖರೀದಿಸಿ ತಿನ್ನುತ್ತಾರೆ. ಸಲೀಸಾಗಿ ದೊರೆಯುವುದರಿಂದ ಅಲ್ಲಿಗೆ ತಲುಪುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಿಷ್ಟೂ ಇಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ಆದರೆ ಮುಂದಿನದೇ ಆತಂಕಕಾರಿ ವಿದ್ಯಮಾನಗಳು. ಹಾಗೆ ಚಾಕಲೇಟ್ ತಿಂದ ವಿದ್ಯಾರ್ಥಿಗಳೆಲ್ಲ ಚಿತ್ರವಿಚಿತ್ರವಾಗಿ ವರ್ತಿಸತೊಡಗಿದ್ದಾರೆ. ಈ ವಿಚಿತ್ರ ವರ್ತನೆ ಏನು ಎಂದು ಪೋಷಕರಿಗೆ ಮತ್ತು ಶಿಕ್ಷಕರಿಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ. ಆದರೆ ಕೆಲವು ದಿನಗಳಿಂದ ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ್ದ ಕೆಲ ಶಿಕ್ಷಕರು.. ಶಾಲೆಯ ಸುತ್ತಮುತ್ತ ವಿಚಾರಿಸಿದಾಗ.. ಬೆಳಕಿಗೆ ಬಂದ ವಿಷಯ ತಿಳಿದು ಬೆಚ್ಚಿಬಿದ್ದಿದ್ದಾರೆ. ಮುಂದೆ ಪೊಲೀಸರೂ ಆ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪಾನ್ ಗೂಡಂಗಡಿಗಳಲ್ಲಿ ಮಾರುತ್ತಿದ್ದ ಚಾಕಲೇಟ್ ತಿಂದು ವಿದ್ಯಾರ್ಥಿಗಳು ವಿಚಿತ್ರವಾಗಿ ವರ್ತಿಸಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಕೋತೂರ್ ಮಂಡಲ ಕೇಂದ್ರದ ಸರಕಾರಿ ಪ್ರೌಢಶಾಲೆಯಲ್ಲಿ ಬೆಳಕಿಗೆ ಬಂದಿದೆ. ಶಾಲೆಯ ಪಕ್ಕದಲ್ಲೇ ಒರಿಸ್ಸಾದ ಕೆಲವರು ಪಾನ್ ಗಳಲ್ಲಿ ಮಾರುವ ಚಾಕಲೇಟ್ ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದರಂತೆ. ಚಾಕಲೇಟ್ ತಿಂದ ವಿದ್ಯಾರ್ಥಿಗಳು ತರಗತಿಗೆ ಬಂದಾಗ ವಿಚಿತ್ರವಾಗಿ ವರ್ತಿಸಿದ್ದನ್ನು ಶಿಕ್ಷಕರು ಗಮನಿಸಿದ್ದಾರೆ.

ಕೆಲವು ದಿನಗಳಿಂದ ವಿದ್ಯಾರ್ಥಿಗಳ ವಿಚಿತ್ರ ವರ್ತನೆಯನ್ನು ಗಮನಿಸಿದ ಶಿಕ್ಷಕರು ವಿಷಯ ಏನೆಂದು ವಿಚಾರಿಸಿದರು. ಮೊದಲಿಗೆ ಪಾನ್​ ಅಂಗಡಿ ವ್ಯಾಪಾರಿಗಳು ವಿದ್ಯಾರ್ಥಿಗಳಿಗೆ ಉಚಿತವಾಗಿ ಚಾಕಲೇಟ್ ನೀಡಿದ್ದಾರೆ.. ಕ್ರಮೇಣ ವಿದ್ಯಾರ್ಥಿಗಳು ಅದೇ ಚಟಕ್ಕೆ ಬಿದ್ದಿದ್ದಾರೆ. ಮುಂದೆ ತಲಾ 20 ರೂ. ಗೆ ಚಾಕಲೇಟ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಪಾನ್ ಬಾಕ್ಸ್ ಗಳ ಮಾಲೀಕರ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಾ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೂರು ಸ್ವೀಕರಿಸಿದ ತಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಿದ ಶಂಶಾಬಾದ್ ಎಸ್ ಒಟಿ ಪೊಲೀಸ್​​ ತಂಡ ಮೊನ್ನೆ ಮಂಗಳವಾರ ಪಾನ್ ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಆಗ ಪತ್ತೆಯಾಗಿದೆ ಒಂಬತ್ತು ಕೆಜಿ ಗಾಂಜಾ ಚಾಕಲೇಟ್ ಗಳು, ತಕ್ಷಣ ಅದನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಗ್ಯಾಂಗ್ ಒಡಿಷಾದಿಂದ ಗಾಂಜಾ ಚಾಕಲೇಟ್ ತಯಾರಿಸಿ ಕೊತ್ತೂರು ಗ್ರಾಮದ ಹಲವಾರು ಪಾನ್​ ಅಂಗಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರುತ್ತಿರುವುದು ಪತ್ತೆಯಾಗಿದೆ. ವಿಷಯ ತಿಳಿದು ಪೋಷಕರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ