ಸುಭಾಷ್‌ ಚಂದ್ರ ಬೋಸ್​ 125ನೇ ಜಯಂತಿ: ಟ್ವೀಟ್​ ಮೂಲಕ ಸ್ಮರಿಸಿದ ಗಣ್ಯರು

| Updated By: ಸಾಧು ಶ್ರೀನಾಥ್​

Updated on: Jan 23, 2021 | 10:03 AM

ಇಂದು ಸುಭಾಷ್‌ಚಂದ್ರ ಬೋಸ್​ರವರ 125ನೇ ಜಯಂತಿ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಗಣ್ಯರು ಸುಭಾಷ್​ಚಂದ್ರ ಬೋಸ್​ರನ್ನು ಸ್ಮರಿಸಿದ್ದಾರೆ.

ಸುಭಾಷ್‌ ಚಂದ್ರ ಬೋಸ್​ 125ನೇ ಜಯಂತಿ: ಟ್ವೀಟ್​ ಮೂಲಕ ಸ್ಮರಿಸಿದ ಗಣ್ಯರು
ನೇತಾಜಿ ಸುಭಾಷ್​ ಚಂದ್ರ ಬೋಸ್​
Follow us on

ಬೆಂಗಳೂರು: ಇಂದು ಸುಭಾಷ್‌ಚಂದ್ರ ಬೋಸ್​ರವರ 125ನೇ ಜಯಂತಿ. ಬೋಸ್‌ರ ದೇಶ ಪ್ರೇಮ, ಧೈರ್ಯ, ಹೋರಾಟ ಸ್ಫೂರ್ತಿ. ಭಾರತೀಯರಿಗೆ ಸುಭಾಷ್‌ ಚಂದ್ರ ಬೋಸ್ ಸ್ಫೂರ್ತಿಯ ಸೆಲೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಗಣ್ಯರು ಸುಭಾಷ್ ​ಚಂದ್ರ ಬೋಸ್​ರನ್ನು ಸ್ಮರಿಸಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ನೇತಾರ, ಧೈರ್ಯದಿಂದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಹೋರಾಟದ ಕಹಳೆಯನ್ನೂದಿದ ಪರಾಕ್ರಮಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯಂದು ಅವರಿಗೆ ಆದರ ಪೂರ್ವಕ ಪ್ರಣಾಮಗಳು. ಅವರ ದೇಶ ಪ್ರೇಮ, ಧೈರ್ಯ ಮತ್ತು ಹೋರಾಟಗಳು ಭಾರತೀಯರ ಪಾಲಿಗೆ ಸದಾ ಸ್ಫೂರ್ತಿಯ ಸೆಲೆಗಳಾಗಿವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ನೇತಾಜಿ ಸುಭಾಷ್​ ಚಂದ್ರ ಬೋಸ್ ಜನ್ಮ ದಿನ ಇನ್ಮುಂದೆ ’ಪರಾಕ್ರಮ ದಿವಸ್​‘: 23ರಂದು ಮೋದಿ-ದೀದಿ ಮುಖಾಮುಖಿ?