ದೆಹಲಿ: ಸುಡಾನ್‌ನಲ್ಲಿ (Sudan) ಸೇನೆಗಳ ಮಧ್ಯೆ ನಡೆಯುತ್ತಿರುವ ಕದನದಿಂದ ಭಾರತೀಯರ ಪರಿಸ್ಥಿತಿ ಹೇಗಿದೆ? ಎಂದು ಪರಿಶೀಲನೆ ನಡೆಸಲು ಪ್ರಧಾನಿ ಮೋದಿ ಮಹತ್ವದ ಸಭೆಯನ್ನು ಕರೆದಿದ್ದಾರೆ. ಕದನ ವಿರಾಮ ಘೋಷಣೆ ಮಾಡಿದ ಸುಡಾನ್ ಸೇನೆ, ಇದೀಗ ಪ್ರಧಾನಿ ಮೋದಿ, ಸುಡಾನ್‌ನಲ್ಲಿ ನಡೆಯುತ್ತಿರುವ ಕದನದ ಬಗ್ಗೆ ಮಾಹಿತಿ ಪಡೆದಿದ್ದು, ಭಾರತೀಯ ರಕ್ಷಣೆಯ ಬಗ್ಗೆ ಮತ್ತು ಭದ್ರತೆ ಪರಿಶೀಲನೆ ಬಗ್ಗೆ ಉನ್ನತಮಟ್ಟದ ಸಭೆಯನ್ನು ನಡೆಸಲಿದ್ದಾರೆ. ಸುಡಾನ್‌ನಲ್ಲಿ ಪರಿಸ್ಥಿತಿ “ತುಂಬಾ ಉದ್ವಿಗ್ನವಾಗಿದೆ” ಮತ್ತು ಅಲ್ಲಿ ಭಾರತೀಯರ ಸುರಕ್ಷತೆ ನಮ್ಮ ಮೊದಲ ಆದ್ಯತೆ, ಅವರನ್ನು ಸುರಕ್ಷತೆ ಸ್ಥಳಕ್ಕೆ ಸ್ಥಳಾಂತರಿಸುವಿಕೆ ಸೇರಿದಂತೆ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವತ್ತ ಗಮನಹರಿಸುತ್ತಿದೆ ಎಂದು ಭಾರತ ನಿನ್ನೆ ಹೇಳಿದೆ.
ವಿಶ್ವ ಅನೇಕ ರಾಷ್ಟ್ರಗಳು ಕದನ ವಿರಾಮ ಘೋಷಣೆ ಮಾಡಿ ಎಂಭ ಮನವಿಯನ್ನು ನಿರ್ಲಕ್ಷಿಸಿ ದೇಶದ ಸೇನೆ ಮತ್ತು ಅರೆಸೇನಾ ಪಡೆಗಳ ಯುದ್ಧ ಮಾಡಿದೆ, ಇದೀಗ ಈ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಸುಡಾನ್ ರಾಜಧಾನಿ ಖಾರ್ಟೌಮ್ ಜಿಲ್ಲೆಗಳಲ್ಲಿ ವಾಯುದಾಳಿಗಳು ಮತ್ತು ಟ್ಯಾಂಕ್‌ಗಳ ಗುಂಡಿನ ದಾಳಿಯಿಂದ ಸುಡಾನ್‌ನಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿದೆ ಎಂದು ಹೇಳಿದೆ. ಅಲ್ಲಿ ಐದು ಮಿಲಿಯನ್ ಹೆಚ್ಚಿನ ಜನರು ವಿದ್ಯುತ್, ಆಹಾರ, ನೀರು ಇಲ್ಲದೆ ಪರದಾಡುವ ಸ್ಥಿತಿ ಬಂದಿದೆ, ಈಗಾಗಲೇ ಭಾರತ ರಾಯಭಾರಿ ಕಚೇರಿ ಈಗಾಗಲೇ ಯಾರು ಭಾರತೀಯ ಮನೆಯಿಂದ ಹೊರಗಡೆ ಬರಬೇಡಿ ಎಂದು ಹೇಳಿದೆ.
ಇದನ್ನೂ ಓದಿ: Sudan Crisis: ಸುಡಾನ್‌ನಲ್ಲಿ 72 ಗಂಟೆಗಳ ಕದನ ವಿರಾಮ ಘೋಷಣೆ
PM Narendra Modi to chair a high-level meeting to review the situation relating to Indians in Sudan: Sources
(File Pic) pic.twitter.com/CMlP7eJjTI
— ANI (@ANI) April 21, 2023
ಸುಡಾನ್‌ನ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (RSF) ಶುಕ್ರವಾರ ಬೆಳಿಗ್ಗೆ 6 ರಿಂದ (0400 GMT) ಮಾನವೀಯ ಆಧಾರದ ಮೇಲೆ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಹೇಳಿದೆ, ಇದು ಮುಸ್ಲಿಂ ರಜಾದಿನವಾದ ಈದ್ ಅಲ್- ಫಿತರ್ ಇರುವ ಕಾರಣ ಕದನ ವಿರಾಮ ಘೋಷಣೆ ಮಾಡಿದೆ.
ಈದ್ ಅಲ್-ಫಿತರ್ ಆಚರಣೆ ಇರುವ ಕಾರಣ ಕದನ ವಿರಾಮವನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಾಗರಿಕರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ಅವಕಾಶವನ್ನು ನೀಡಲಾಗಿದೆ ಎಂದು ಆರ್‌ಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
Published On - 1:40 pm, Fri, 21 April 23