Sudan Crisis: ಸುಡಾನ್‌ನಲ್ಲಿ 72 ಗಂಟೆಗಳ ಕದನ ವಿರಾಮ ಘೋಷಣೆ
Sudan: ಸುಡಾನ್‌ನ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (RSF) ಶುಕ್ರವಾರ ಬೆಳಿಗ್ಗೆ 6 ರಿಂದ (0400 GMT) ಮಾನವೀಯ ಆಧಾರದ ಮೇಲೆ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಹೇಳಿದೆ
ಸುಡಾನ್‌ನಲ್ಲಿ ಸೇನೆಗಳ ನಡುವೆ ನಡೆಯುತ್ತಿರುವ ಯುದ್ಧದಿಂದ ಭಾರೀ ಸಾವು-ನೋವುಗಳು ಸಂಭವಿಸಿದೆ. ಇದರ ಜತೆಗೆ ಸುಡಾನ್ನಲ್ಲಿರುವ ಭಾರತೀಯರ ರಕ್ಷಣೆ ಕಾರ್ಯವು ನಡೆಯುತ್ತಿದೆ, ವಿದೇಶಾಂಗ ಸಚಿವ ಎಸ್. ಜೈ ಶಂಕರ್ ವಿಶ್ವ ಸಂಸ್ಥೆಯ ಕಾರ್ಯದರ್ಶಿಯನ್ನು ಈಗಾಗಲೇ ಜಿ20 ಶೃಂಗಸಭೆಯಲ್ಲಿ ಭೇಟಿಯಾಗಿದ್ದು, ಸುಡಾನ್ ನಡೆಯುತ್ತಿರುವ ಯುದ್ಧದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಇದೀಗ ಸುಡಾನ್‌ನ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (RSF) ಶುಕ್ರವಾರ ಬೆಳಿಗ್ಗೆ 6 ರಿಂದ (0400 GMT) ಮಾನವೀಯ ಆಧಾರದ ಮೇಲೆ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಹೇಳಿದೆ, ಇದು ಮುಸ್ಲಿಂ ರಜಾದಿನವಾದ ಈದ್ ಅಲ್- ಫಿತರ್ ಇರುವ ಕಾರಣ ಕದನ ವಿರಾಮ ಘೋಷಣೆ ಮಾಡಿದೆ. ಏ.14ರಂದು ರಾಜಧಾನಿ ಖಾರ್ಟೂಮ್ ಬಾಂಬ್ ಸ್ಫೋಟ ಮತ್ತು ಶೆಲ್ ದಾಳಿಯಿಂದ ತತ್ತರಿಸಿತು. ಈ ಬಗ್ಗೆ ಸೇನೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಅವರು ಸೇನೆಯ ಫೇಸ್‌ಬುಕ್ ಪುಟದಲ್ಲಿ ಲೈವ್ ಬಂದಿದ್ದು, ಕದನ ವಿರಾಮದ ಬಗ್ಗೆ ಪ್ರಸ್ತಾಸಪಿಸಿಲ್ಲ ಎಂದು ಹೇಳಲಾಗಿದೆ.
ಈದ್ ಅಲ್-ಫಿತರ್ ಆಚರಣೆ ಇರುವ ಕಾರಣ ಕದನ ವಿರಾಮವನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಾಗರಿಕರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ಅವಕಾಶವನ್ನು ನೀಡಲಾಗಿದೆ ಎಂದು ಆರ್‌ಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ಲಾಮಿ ನಿರಂಕುಶಾಧಿಕಾರಿ ಒಮರ್ ಅಲ್-ಬಶೀರ್ ಸಾಮೂಹಿಕ ಪ್ರತಿಭಟನೆಯ ನಾಲ್ಕು ವರ್ಷಗಳ ನಂತರ ಈ ಮಿಲಿಟರಿ ದಂಗೆಯ ನಡೆದಿದೆ. ನಮ್ಮ ಆತ್ಮರಕ್ಷಣೆಗೆ ಈ ದಂಗೆ ಎಂದು ಆರ್‌ಎಸ್‌ಎಫ್ ಹೇಳಿದೆ, ನಮ್ಮ ಸೇನೆ ಸಂಪೂರ್ಣ ಕದನ ವಿರಾಮಕ್ಕೆ ಬದ್ಧವಾಗಿದೆ ಎಂದು ಹೇಳಿದರು. ಈ ಹಿಂದೆ ಆಡಳಿತಾರೂಢ ಮಿಲಿಟರಿ ಜುಂಟಾದ ಇಬ್ಬರು ಮಿತ್ರ ನಾಯಕರಾದ ಸೇನಾ ಮುಖ್ಯಸ್ಥ ಬುರ್ಹಾನ್ ಮತ್ತು ಆರ್‌ಎಸ್‌ಎಫ್ ನಾಯಕ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ ನಡುವಿನ ಅಧಿಕಾರದ ಹೋರಾಟದಲ್ಲಿ 350 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:Sudan Crisis: ದಂಗೆ, ಹಿಂಸಾಚಾರದಿಂದ ತತ್ತರಿಸಿದ ಸುಡಾನ್; ಉತ್ತರ ಆಫ್ರಿಕಾ ರಾಷ್ಟ್ರದಲ್ಲಿನ ಬಿಕ್ಕಟ್ಟಿಗೆ ಕಾರಣವೇನು?
ಈ ಸಂಘರ್ಷವು ಸುಡಾನ್‌ನಲ್ಲಿ ಪ್ರಜಾಪ್ರಭುತ್ವದ ಪ್ರಗತಿಯ ಭರವಸೆಯನ್ನು ಹಾಳುಮಾಡಿದೆ, ಸುಡಾನ್ ನೆರೆಹೊರೆಯವರಲ್ಲಿ ದೇಶಗಳು ಜನರನ್ನು ಸೆಳೆಯುವ ಅಪಾಯವಿದೆ ಮತ್ತು ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪ್ರಾದೇಶಿಕ ಸ್ಪರ್ಧೆಗೆ ಇದು ಕಾರಣವಾಗಬಹುದು.
ಮೂರು ದಿನಗಳ ಕದನ ವಿರಾಮಕ್ಕೆ ಒತ್ತಾಯಿಸಿ, ಸಂಘರ್ಷ ವಲಯಗಳಲ್ಲಿ ಸಿಲುಕಿರುವ ನಾಗರಿಕರನ್ನು ಕಾಪಾಡಲು ಮತ್ತು ವೈದ್ಯಕೀಯ ಚಿಕಿತ್ಸೆ, ಆಹಾರ ಮತ್ತು ಇತರ ಸರಬರಾಜುಗಳನ್ನು ಪಡೆಯಲು ಅವಕಾಶ ನೀಡಬೇಕು ಎಂದು ಹೇಳಿದರು. ಯುನೈಟೆಡ್ ಸ್ಟೇಟ್ಸ್ ಕದನ ವಿರಾಮ ಪ್ರಸ್ತಾಪವನ್ನು ಅನುಮೋದಿಸಿತು.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Fri, 21 April 23