AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಘರ್ಷ ಪೀಡಿತ ಖಾರ್ಟೂಮ್​​ನಲ್ಲಿರುವ ರಾಯಭಾರ ಕಚೇರಿಗೆ ಹೋಗಬೇಡಿ: ಸುಡಾನ್​​ನಲ್ಲಿರುವ ಭಾರತೀಯರಿಗೆ ಕೇಂದ್ರ ಸಲಹೆ

Sudan Conflict: ನಾವು ಭಾರತೀಯರಿಗೆ ಹೇಗೆ ಸುರಕ್ಷಿತವಾಗಿರಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತೇವೆ. ಇಲ್ಲಿನ ಪರಿಸ್ಥಿತಿ ಉಲ್ಬಣವಾಗಲೂ ಬಹುದು. ರಾಯಭಾರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆ ವಲಯದಲ್ಲಿ ಸಾಕಷ್ಟು ಕಾದಾಟಗಳು ನಡೆದಿದ್ದರಿಂದ ಅಲ್ಲಿಗೆ ನೇರವಾಗಿ ಹೋಗದಂತೆ ನಾವು ಜನರಿಗೆ ಹೇಳಿದ್ದೇವೆ. ಜನರು ಅಲ್ಲಿ ವಾಸಿಸುತ್ತಿಲ್ಲ

ಸಂಘರ್ಷ ಪೀಡಿತ ಖಾರ್ಟೂಮ್​​ನಲ್ಲಿರುವ ರಾಯಭಾರ ಕಚೇರಿಗೆ ಹೋಗಬೇಡಿ: ಸುಡಾನ್​​ನಲ್ಲಿರುವ ಭಾರತೀಯರಿಗೆ ಕೇಂದ್ರ ಸಲಹೆ
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ
Follow us
ರಶ್ಮಿ ಕಲ್ಲಕಟ್ಟ
|

Updated on:Apr 20, 2023 | 6:53 PM

ದೆಹಲಿ: ಸುಡಾನ್‌ನ (Sudan) ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಆತನ ಉಪ ಮುಖ್ಯಸ್ಥ ಮೊಹಮದ್ ಹಮ್ದಾನ್ ಡಗಾಲೊ ಅವರಿಗೆ ನಿಷ್ಠರಾಗಿರುವ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಕಾದಾಟ ನಡೆಯುತ್ತಿರುವ ದೇಶದ ರಾಜಧಾನಿ ಖಾರ್ಟೂಮ್‌ನಲ್ಲಿರುವ(Khartoum) ಭಾರತೀಯ ರಾಯಭಾರ ಕಚೇರಿಗೆ (Indian embassy )ಹೋಗದಂತೆ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಹೇಳಿದೆ. ರಾಯಭಾರ ಕಚೇರಿ ತೆರೆದಿದೆ ಮತ್ತು ಕಾರ್ಯನಿರ್ವಹಿಸುತ್ತಿದೆ, ಆದರೆ ಕಟ್ಟಡವು ಖಾರ್ಟೂಮ್‌ನ ವಿಮಾನ ನಿಲ್ದಾಣದ ಬಳಿ ಇರುವುದರಿಂದ ಯಾವುದೇ ಸಿಬ್ಬಂದಿ ಅಲ್ಲಿ ವಾಸಿಸುತ್ತಿಲ್ಲ. ಇದು ಸುಡಾನ್ ಸೇನೆ ಮತ್ತು ಆರ್‌ಎಸ್‌ಎಫ್ ನಡುವೆ ತೀವ್ರ ಯುದ್ಧಗಳನ್ನು ಕಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಇಂದು ಸುದ್ದಿಗಾರರಿಗೆ ತಿಳಿಸಿದರು.

ನಾವು ಭಾರತೀಯರಿಗೆ ಹೇಗೆ ಸುರಕ್ಷಿತವಾಗಿರಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತೇವೆ. ಅಲ್ಲಿನ ಪರಿಸ್ಥಿತಿ ಉಲ್ಬಣವಾಗಲೂ ಬಹುದು. ರಾಯಭಾರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆ ವಲಯದಲ್ಲಿ ಸಾಕಷ್ಟು ಕಾದಾಟಗಳು ನಡೆದಿದ್ದರಿಂದ ಅಲ್ಲಿಗೆ ನೇರವಾಗಿ ಹೋಗದಂತೆ ನಾವು ಜನರಿಗೆ ಹೇಳಿದ್ದೇವೆ. ಜನರು ಅಲ್ಲಿ ವಾಸಿಸುತ್ತಿಲ್ಲ. ರಾಯಭಾರ ಕಚೇರಿಯೊಳಗೆ ಯಾರೂ ಇಲ್ಲ. ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವವರು ನಗರದ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಬಾಗ್ಚಿ ಹೇಳಿದ್ದಾರೆ.

ಶನಿವಾರ ನಡೆದ ಕಾದಾಟದಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ. ಐದು ಮಿಲಿಯನ್ ಜನರು ವಾಸಿಸುವ ಖಾರ್ಟೂಮ್‌ನಲ್ಲಿ ಕೆಲವು ಭೀಕರ ಯುದ್ಧಗಳು ನಡೆದಿವೆ. ಅವರಲ್ಲಿ ಹೆಚ್ಚಿನವರು ವಿದ್ಯುತ್, ಆಹಾರ ಮತ್ತು ನೀರು ಇಲ್ಲದೆ ತಮ್ಮ ಮನೆಗಳಲ್ಲಿ ಬಂಧಿಯತಾಗಿದ್ದಾರೆ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.

ಸುಡಾನ್​​ನಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದು ನಮಗೆ ಲೆಕ್ಕವಿದೆ. ಭದ್ರತಾ ಸಮಸ್ಯೆಯಿಂದಾಗಿ ಅಲ್ಲಿ ಎಷ್ಟು ಮಂದಿ ಇದ್ದಾರೆ, ಅವರು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ನಾವು ಬಹಿರಂಗ ಪಡಿಸಲು ಬಯಸುವುದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಗಳನ್ನು ನೋಡಿದ ನಂತರ ನಾವು ಕೆಲವು ಭಾರತೀಯರನ್ನು ಸಂಪರ್ಕಿಸಿದ್ದೇವೆ. ಅಲ್ಲಿನ ಪರಿಸ್ಥಿತಿ ಮೇಲೆ ನಾವು ನಿಗಾ ಇರಿಸಿದ್ದೇವೆ ಎಂದಿದ್ದಾರೆ ಬಾಗ್ಚಿ.

ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಧಿಕೃತ ಭೇಟಿಗಾಗಿ ದಕ್ಷಿಣ ಅಮೆರಿಕಕ್ಕೆ ತೆರಳಿದ್ದು, ಸುಡಾನ್ ಪರಿಸ್ಥಿತಿ ಬಗ್ಗೆ ಅಪ್ಡೇಟ್ ನೀಡುತ್ತಾರೆ ಎಂದು ವಕ್ತಾರರು ಹೇಳಿದ್ದಾರೆ.  ನಿನ್ನೆ ಕದನ ವಿರಾಮದ ನಂತರ ಸುಡಾನ್‌ನಲ್ಲಿ ಹಿಂಸಾಚಾರವು ಏಳನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿ ಗುಂಡಿನ ಚಕಮಕಿಗಳು ಕೇಳಿಬಂದವು. ಸೇನೆಯಂತೆಯೇ ತನ್ನ ಪಡೆಗಳು ಬುಧವಾರ 24 ಗಂಟೆಗಳ ಕಾಲ ಸಂಪೂರ್ಣ ಕದನ ವಿರಾಮಕ್ಕೆ ಸಂಪೂರ್ಣವಾಗಿ ಬದ್ಧವಾಗಿರುತ್ತವೆ ಎಂದು ಆರ್‌ಎಸ್‌ಎಫ್ ಹೇಳಿತ್ತು.

ಇದನ್ನೂ ಓದಿಆರಾಧ್ಯ ಬಚ್ಚನ್ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಯುಟ್ಯೂಬ್ ಚಾನೆಲ್​​​ಗೆ ನಿರ್ಬಂಧ; ವಿಡಿಯೊ ತೆಗೆದು ಹಾಕಲು ಗೂಗಲ್​​ಗೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್

ಆದರೆ ಖಾರ್ಟೂಮ್‌ನಲ್ಲಿ ನಿಗದಿತ ಸಮಯದಿಂದ ಮತ್ತು ರಾತ್ರಿಯವರೆಗೆ ಗುಂಡಿನ ಚಕಮಕಿ ನಿಲ್ಲಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಹಲವು ದಿನಗಳಲ್ಲಿ ಎರಡನೇ ಬಾರಿಗೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಮತ್ತೊಂದು ಕದನ ವಿರಾಮವನ್ನು ಉಲ್ಲಂಘಿಸಲಾಗಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Thu, 20 April 23

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್