ಮಹಿಳೆಯರು ನೋಡಲೇಬೇಕಾದ ವಿಡಿಯೋ ಇದು! ಅಬ್ಬಾ ಆ ಖದೀಮರಿಬ್ಬರು ಮಹಿಳೆಯ ಕೊರಳಿಂದ ಚಿನ್ನದ ಸರ ದೋಚಿದ್ದು ಹೇಗೆ ಗೊತ್ತಾ?

chain snatching: ಅಗಾಗಲೇ ಓಡಿಹೋಗಲು ಸಿದ್ಧವಿರುವ ವ್ಯಕ್ತಿಯ ಬೈಕ್‌ ಏರಿ ಇಬ್ಬರೂ ಅಲ್ಲಿಂದ ಪರಾರಿಯಾಗುತ್ತಾರೆ. ಇದರಿಂದ ಅಸಲಿಗೆ ನಡೆದಿದ್ದು ಏನು ಎಂಬುದೂ ಮಹಿಳೆಗೆ ತಕ್ಷಣಕ್ಕೆ ಗೊತ್ತಾಗದೆ, ದಿಗ್ಭ್ರಾಂತಿಗೆ ಗುರಿಯಾದರು.

ಮಹಿಳೆಯರು ನೋಡಲೇಬೇಕಾದ ವಿಡಿಯೋ ಇದು! ಅಬ್ಬಾ ಆ ಖದೀಮರಿಬ್ಬರು ಮಹಿಳೆಯ ಕೊರಳಿಂದ ಚಿನ್ನದ ಸರ ದೋಚಿದ್ದು ಹೇಗೆ ಗೊತ್ತಾ?
ಮಹಿಳೆಯರು ನೋಡಲೇಬೇಕಾದ ವಿಡಿಯೋ ಇಲ್ಲಿದೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 20, 2023 | 6:14 PM

ಪೊಲೀಸರು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಕಳ್ಳರು ದಿನೇ ದಿನೆ ತಮ್ಮ ಕೈಚಳ ತೋರುವುದನ್ನು ಹೆಚ್ಚು ಮಾಡುತ್ತಿದ್ದಾರೆ. ಈ ಹಿಂದೆ ಬೆಳ್ಳಂಬೆಳಗ್ಗೆ ರಂಗೋಲಿ ಬಿಡಿಸುವಾಗ ಮಹಿಳೆಯರ (woman) ಕತ್ತಿಗೆ ಕೈಹಾಕಿ ಚಿನ್ನದ ಸರವನ್ನು ನಿರ್ಲಜ್ಜರಾಗಿ ಎಗರಿಸುತ್ತಿದ್ದರು. ಅತವಾ ರಾತ್ರಿ ವೇಳೆಗಳಲ್ಲಿ ನಿರ್ಜನ ಪ್ರದೇಶಗಳನ್ನು ಗುರುತು ಮಾಡಿಕೊಂಡು ದರೋಡೆ, ಕಳ್ಳತನಕ್ಕೆ ಇಳಿಯುತ್ತಿದ್ದರು. ಆದರೆ ಈಗ ಅದಕ್ಕೆ ಸಮಯ ಸಂದರ್ಭ ಅಂತೇನೂ ಇಲ್ಲ. ಯಾವಾಗಂದರೆ ಆವಾಗ, ಜನರ ಮಧ್ಯೆಯೇ ಸರ ಎಗರಿಸಿ, ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದಾರೆ. ಕೊರಳಲ್ಲಿ ಆಭರಣ ಧರಿಸಿದ ಮಹಿಳೆಯರು ಕಾಣಿಸಿಕೊಂಡರೆ ಸಾಕು ಕ್ಷಣಗಳಲ್ಲಿ ಅದನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನೆರೆಯ ಆಂದ್ರದಲ್ಲೂ ಚೈನ್‌ ಸ್ನಾಚರ್‌ಗಳು (chain snatching) ವಿಜೃಂಭಿಸತೊಡಗಿದ್ದಾರೆ. ಇತ್ತೀಚಿಗೆ ಇಂತಹದ್ದೇ ಒಂದು ಘಟನೆ ಆಂಧ್ರಪ್ರದೇಶದ ಅನಂಪುರದಲ್ಲಿ ನಡೆದಿದೆ (CCTV).

ವಿವರಗಳಲ್ಲಿ ಹೀಗಿವೆ… ಅನಂತಪುರ (anantapur) ನಗರದಲ್ಲಿ ಮಾರೆಕ್ಕ ಎಂಬ ಮಹಿಳೆಯೊಬ್ಬರು ಗುರುವಾರ ಬೆಳಗ್ಗೆ ಮನೆಯ ಮುಂದೆ ಪೊರಕೆ ಹಿಡಿದು ಮನೆ ಮುಂದೆ ಸ್ವಚ್ಛಗೊಳಿಸುತ್ತಿದ್ದರು. ಸರಿಯಾಗಿ ಅದೇ ಸಮಯದಲ್ಲಿ ಪಲ್ಸರ್ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಆ ಮನೆಯ ಮುಂದೆ ನಿಂತರು. ನಂತರ ಅವರಿಬ್ಬರಲ್ಲಿ ಒಬ್ಬ ಮಾರೆಕ್ಕ ಹತ್ತಿರ ಬಂದು ಯಾವುದೋ ಅಡ್ರಸ್‌ ಕೇಳುತ್ತಿರುವಂತೆ ನಟಿಸಿದನು.

Also Read:

Used Cot: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು, ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ರು ಅಂತಾ ಕೊನೆ ಕ್ಷಣದಲ್ಲಿ ಮದುವೆಗೆ ನಿರಾಕರಿಸಿದ ವರ!

ಇದನ್ನು ನಿಜವೆ ಎಂದು ನಂಬಿದ ಮಹಿಳೆ ಆತನು ಕೇಳಿದ ವಿಳಾಸದ ಬಗ್ಗೆ ಮಾಹಿತಿ ನೀಡತೊಡಗಿದಳು. ಈ ಮಧ್ಯೆ ಆ ಕಡೆ ಈ ಕಡೆ ನೋಡಿದ ಕಳ್ಳರಿಬ್ಬರೂ ತಮ್ಮ ಗುರಿ ಸಾಧನೆಗಾಗಿ ಸಿದ್ಧವಾಗುತ್ತಾರೆ. ಒಬ್ಬ ಬೈಕನ್ನು ಸ್ಟಾರ್ಟ್​ ಮಾಡಿಟ್ಟುಕೊಂಡು ತಾನು ಸಾಗಬೇಕಾದ ದಿಕ್ಕಿನಲ್ಲಿ ತಿರುಗಿಸಿಟ್ಟುಕೊಂಡಿದ್ದರೆ ಮತ್ತೊಬ್ಬ ಸೀದಾ ಮಹಿಳೆಯ ಕುತ್ತಿಗೆಗೆ ಕೈಹಾಕಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಾನೆ.

ಈಗಾಗಲೇ ಓಡಿಹೋಗಲು ಸಿದ್ಧವಿರುವ ವ್ಯಕ್ತಿಯ ಬೈಕ್‌ ಏರಿ ಇಬ್ಬರೂ ಅಲ್ಲಿಂದ ಪರಾರಿಯಾಗುತ್ತಾರೆ. ಇದು ಕೇವಲ ಕೆಲವೇ ಕ್ಷಣಗಳಲ್ಲಿಯೇ ನಡೆದಿದೆ. ಇದರಿಂದ ಅಸಲಿಗೆ ನಡೆದಿದ್ದು ಏನು ಎಂಬುದೂ ಮಹಿಳೆಗೆ ತಕ್ಷಣಕ್ಕೆ ಗೊತ್ತಾಗದೆ, ದಿಗ್ಭ್ರಾಂತಿಗೆ ಗುರಿಯಾದರು. ಸಾವರಿಸಿಕೊಂಡ ಮಹಿಳೆ ಅಲ್ಲಿದ್ದವರಿಗೆ ಏನಾಯಿತು ಎಂದು ಹೇಳುತ್ತಾಳೆ. ಆದರೆ ಆ ವೇಳೆಗೆ ದರೋಡೆಕೋರರಿಬ್ಬರೂ ನಾಪತ್ತೆಯಾಗಿರುತ್ತಾರೆ. ಇದೆಲ್ಲಾ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದೆ. ಇದರ ಫುಟೇಜ್‌ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್