ಚಿತ್ರದುರ್ಗ: ಚಳ್ಳಕೆರೆ ಮಾಜಿ ತಹಸೀಲ್ದಾರ್ ವಿರುದ್ಧ ವಂಚನೆ ಆರೋಪ, ದೂರು ದಾಖಲು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಾಜಿ ತಹಸೀಲ್ದಾರ್ ಎನ್.ರಘುಮೂರ್ತಿ ವಿರುದ್ಧ ವಂಚನೆ ಎಸಗಿರುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ (Chellakere) ತಾಲೂಕಿನ ಮಾಜಿ ತಹಸೀಲ್ದಾರ್ ಎನ್.ರಘುಮೂರ್ತಿ ವಿರುದ್ಧ ವಂಚನೆ ಎಸಗಿರುವ ಆರೋಪದಡಿ ಪ್ರಕರಣ ದಾಖಲಾಗಿದೆ. ಎನ್.ರಘುಮೂರ್ತಿ ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಜಿ ತಹಸೀಲ್ದಾರ್ ಎನ್ ರಘುಮೂರ್ತಿ, ಕಾಲುವೆಹಳ್ಳಿ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಸಿರಾಜ್, ಸಿದ್ಧಗಂಗಾ ಕಂಪ್ಯೂಟರ್ ಆಪರೇಟರ್ ರಾಘವೇಂದ್ರ, ಮೇಘನಾ, ಜಾಜೂರು ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಮುಮ್ತಾಜ್ ಉನ್ನಿಸಾ, ಸಂಜೀವಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಎನ್.ರಘುಮೂರ್ತಿ ಅವರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಹಸೀಲ್ದಾರ್ ಆಗಿದ್ದರು. ಈ ವೇಳೆ ನಕಲಿ ದಾಖಲೆ ಸೃಷ್ಟಿಸಿ ರೈತರ ಬೆಳೆ ಪರಿಹಾರದ 20,49,420 ರೂ. ಹಣವನ್ನು ಬೇರೆ ವ್ಯಕ್ತಿಗಳ ಅಕೌಂಟಿಗೆ ಜಮಾ ಮಾಡಿದ್ದಾರೆಂದು ಚಳ್ಳಕೆರೆ ತಾಲೂಕು ಕಚೇರಿ ಶಿರಸ್ತೆದಾರ್ ಸದಾಶಿವಪ್ಪ ಅವರು ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಎನ್.ರಘುಮೂರ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲಾದ ಹಿನ್ನೆಲೆ ಎನ್. ರಘುಮೂರ್ತಿ ಗುಡ್ ಬೈ ಆಫ್ ಚಳ್ಳಕೆರೆ ಎಂದು ಫೇಸ್ ಬುಕ್ ಪೋಸ್ಟ್ ಹಾಕಿಕೊಂಡಿದ್ದರು.
ಇದನ್ನೂ ಓದಿ: ಗಾಲ್ಫ್ ಬಾಲ್ ಬಿದ್ದು ಕಾರಿನ ಗಾಜು ಜಖಂ, ಚಾಲಕನಿಗೆ ಗಾಯ: ಗಾಲ್ಫ್ ಕ್ಲಬ್ ವಿರುದ್ಧ ಎಫ್‌ಐಆರ್ ದಾಖಲು
ಎನ್.ರಘುಮೂರ್ತಿ ಇತ್ತೀಚೆಗೆ ತಹಸೀಲ್ದಾರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಚಳ್ಳಕೆರೆಯಿಂದ ಬಿಜೆಪಿ ಅಬ್ಯರ್ಥಿಯಾಗಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು.
ಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ರೈತರ ಸಾವು
ಬೆಳಗಾವಿ: ಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ರೈತರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಗೋಧೋಳಿ ಗ್ರಾಮದ ಬಳಿ ನಡೆದಿದೆ. ಮಹಾಬಲೇಶ್ವರ ಶಿಂಧೆ(65), ಪುಂಡಲೀಕ ರೇಡೇಕರ(75) ಕೃಷ್ಣ ರೇಡೇಕರ(74) ಮೃತ ರೈತರು. ಕಾಗಿನಕರ (47) ಗಾಯಾಳು. ಗಾಯಾಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಡರಾತ್ರಿ ನಾಲ್ವರು ಹೊಲದಲ್ಲಿ ಬೆಳೆದಿದ್ದ ಕಬ್ಬಿಗೆ ನೀರು ಹಾಯಿಸಲೆಂದು ರೈತರು ಧಾರವಾಡ – ರಾಮನಗರ ರಾಜ್ಯ ಹೆದ್ದಾರಿ ಮುಖಾಂತರ ಹೊಲಕ್ಕೆ ಹೊರಟಿದ್ದರು. ಈ ವೇಳೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೃಷ್ಣ ರೇಡೇಕರ ಅವರಿಗೆ ಗಂಭೀರ ಗಾಯಗಳಾಗಿದ್ದು, ಮಂಜುನಾಥ ಕಾಗಿನಕರ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 am, Fri, 21 April 23