AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Used Cot: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು, ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ರು ಅಂತಾ ಕೊನೆ ಕ್ಷಣದಲ್ಲಿ ಮದುವೆಗೆ ನಿರಾಕರಿಸಿದ ವರ!

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಬಹಳ ಮುಖ್ಯ. ಮದುವೆಯನ್ನು ಸಾಧ್ಯವಾದಷ್ಟು ಅದ್ಧೂರಿಯಾಗಿ ತಮ್ಮ ಕೈಗೆಟುಕುವಂತೆ, ತಮ್ಮ ಅಂತಸ್ತಿಗೆ ಅನುಗುಣವಾಗಿ ಮದುವೆ ಮಾಡುತ್ತಾರೆ. ಆದರೆ... ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ಟರು ಅಂತಾ ಕೊನೆ ಕ್ಷಣದಲ್ಲಿ ಮದುವೆಯಾಗಲು ನಿರಾಕರಿಸಿದ ವರ

Used Cot: ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು, ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ರು ಅಂತಾ ಕೊನೆ ಕ್ಷಣದಲ್ಲಿ ಮದುವೆಗೆ ನಿರಾಕರಿಸಿದ ವರ!
ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಬಿಟ್ಟು...
TV9 Web
| Updated By: ಸಾಧು ಶ್ರೀನಾಥ್​|

Updated on:Feb 20, 2023 | 11:30 AM

Share

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಬಹಳ ಮುಖ್ಯ. ಮದುವೆಯನ್ನು ಸಾಧ್ಯವಾದಷ್ಟು ಅದ್ಧೂರಿಯಾಗಿ ಆಚರಿಸಲು ಬಯಸುತ್ತಾರೆ. ತಮ್ಮ ಕೈಗೆಟುಕುವಂತೆ, ತಮ್ಮ ಅಂತಸ್ತಿಗೆ ಅನುಗುಣವಾಗಿ ಮದುವೆ ಮಾಡುತ್ತಾರೆ. ಇನ್ನು ವಧು-ವರರ (Bride -Bridegroom) ಬಂಧುಗಳಿಗೂ ಮದುವೆಯೆಂದರೆ (Bridegroom) ಒಂದು ಸಂಭ್ರಮ. ಮದುವೆ ಸಮಾರಂಭಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂತಹುದರಲ್ಲಿ ತುಂಬಾ ಸಂತೋಷದ ಮದುವೆ ಇದ್ದಕ್ಕಿದ್ದಂತೆ ನಿಂತರೆ ಏನಾಗುತ್ತದೆ? ಇತ್ತೀಚೆಗಷ್ಟೇ ಹೈದರಾಬಾದಿನಲ್ಲಿ (Hyderabad) ಇಂತಹ ಘಟನೆ ನಡೆದಿದೆ.

ಮದುವೆ ವಿಫಲಗೊಂಡು, ಅನಿರೀಕ್ಷಿತವಾಗಿ ಕೊನೆಗೊಳ್ಳಲು ಕೆಲವೊಮ್ಮೆ ಚಿತ್ರ ವಿಚಿತ್ರ ಕಾರಣಗಳು ಸನ್ನಿವೇಶಗಳು ಸೃಷ್ಟಿಯಾಗಿಬಿಡುತ್ತವೆ. ಹೈದರಾಬಾದ್ ನ ಹಳೆಯ ಏರಿಯಾದಲ್ಲಿಯೂ ವರಮಹಾಶಯನೊಬ್ಬ ಹೀಗೆಯೇ ವಿಚಿತ್ರ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ್ದಾನೆ. ವಿವರಕ್ಕೆ ಹೋದರೆ… ಹೈದರಾಬಾದ್‌ನ ಚಂದ್ರಯ್ಯನಗುಟ್ಟದ ಬಳಿ ಮೊಹಮ್ಮದ್ ಜಕ್ರಿಯಾ ಎಂಬ ವ್ಯಕ್ತಿ ಭಾನುವಾರ ವಿವಾಹವಾದರು. ಆದರೆ ಮದುವೆಯ ಸಮಯ ಸಮೀಪಿಸುತ್ತಿರುವಾಗ, ವಧುವಿನ ಸಂಬಂಧಿಕರು ತನಗೆ ಸೆಕೆಂಡ್ ಹ್ಯಾಂಡ್ ಮಂಚ, ಹಾಸಿಗೆಯನ್ನು (Used Bed Cot) ಕೊಟ್ಟಿದ್ದಾರೆ ಎಂದು ತಿಳಿದು, ಜಕ್ರಿಯಾ ಮದುವೆಯಾಗಲು ನಿರಾಕರಿಸಿದರು.

ಹಾಸಿಗೆ ಇದ್ದಷ್ಟು ಕಾಲು ಚಾಚದೆ, ಮಾವ ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ಟರು ಅಂತಾ ರೊಳ್ಳೆ ತೆಗೆದಿರುವ ವರಮಹಾಶಯನ ಬಗ್ಗೆ ವಧು ಹೇಳಿದ್ದೇನು?

ಇದೀಗ ಯುವತಿಯ ತಂದೆ ಚಂದ್ರಯ್ಯನಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಜಕ್ರಿನ್ ಅವರನ್ನು ಮದುವೆಯಾಗುವಂತೆ ಮನವೊಲಿಸಿದರು. ಕೊನೆಗೂ ಶಾಂತವಾದ ಯುವಕ ಮದುವೆಯಾಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ. ಆದರೆ ಇಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಇಂತಹ ಸಣ್ಣ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯನ್ನು ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಈಗ ವಧು ನಿರ್ಧರಿಸಿದ್ದಾಳೆ. ಇದರೊಂದಿಗೆ ಈ ಮದುವೆಯ ಕಥೆ ಮತ್ತೊಂದು ತಿರುವು ಪಡೆದುಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Mon, 20 February 23