AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಗುಲ್ಮಾರ್ಗ್‌ನಲ್ಲಿ ಅಣ್ಣನ ಜತೆ ಸ್ನೋಮೊಬೈಲ್ಸ್‌ ಸವಾರಿ ಮಾಡಿದ ಪ್ರಿಯಾಂಕಾ ವಾದ್ರಾ

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸ್ನೋಮೊಬೈಲ್‌ (Snowmobile)ನಲ್ಲಿ ಸವಾರಿ ಮಾಡುತ್ತಿರುವುದು ವಿಡಿಯೊ ಎಲ್ಲ ಕಡೆ ವೈರಲ್ ಆಗಿದೆ.

ಅಕ್ಷಯ್​ ಪಲ್ಲಮಜಲು​​
|

Updated on:Feb 20, 2023 | 12:00 PM

Share

ಗುಲ್ಮಾರ್ಗ್‌: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul gandhi) ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರೊಂದಿಗೆ ಸ್ನೋಮೊಬೈಲ್‌ (Snowmobile) ನಲ್ಲಿ ಸವಾರಿ ಮಾಡುತ್ತಿರುವುದು ವಿಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಈ ಬಗ್ಗೆ ಶ್ರೀನಿವಾಸ ಬಿವಿ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಸ್ನೋಮೊಬೈಲ್‌ ಸ್ಕೀಯರ್‌ನಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸವಾರಿ ಮಾಡುವುದನ್ನು ಮತ್ತು ಅವರ ಸುತ್ತ ಜನರು ಇರುವುದುನ್ನು ಕಾಣಬಹುದು, ಜನಪ್ರಿಯ ಪ್ರವಾಸಿ ತಾಣದಲ್ಲಿ ಇವರಿಬ್ಬರು ಹಿಮದಲ್ಲಿ ಸ್ನೋಮೊಬೈಲ್‌ ಸವಾರಿ ಮಾಡುವ ಮೂಲಕ ಸಂತೋಷದ ಕ್ಷಣ ಕಳೆದಿದ್ದಾರೆ.

ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಈ ವೀಡಿಯೊದಲ್ಲಿ ರಾಹುಲ್ ಗಾಂಧಿ, ಸ್ಕೀ ಕನ್ನಡಕ ಮತ್ತು ಪ್ರಿಯಾಂಕಾ ಗಾಂಧಿ ಬಿಳಿಯ ಸ್ನೋಮೊಬೈಲ್​ ವಾಹನವನ್ನು ಸವಾರಿ ಮಾಡುತ್ತಿರುವುದನ್ನು ಹಾಗೂ ಅವರ ಹಿಂದೆ ರಕ್ಷಣಾ ಸಿಬ್ಬಂದಿಗಳು ಬರುತ್ತಿರುವುದನ್ನು ಈ ವಿಡಿಯೊ ಕಾಣಬಹುದು.

ಇದನ್ನೂ ಓದಿ: Rahul Gandhi: ಕಾಶ್ಮೀರಿ ಪಂಡಿತರು ತಮ್ಮ ಹಕ್ಕು ಕೇಳುತ್ತಿದ್ದಾರೆ, ಭಿಕ್ಷೆ ಬೇಡುತ್ತಿಲ್ಲ: ಜಮ್ಮು ಕಾಶ್ಮೀರದಲ್ಲಿ ರಾಹುಲ್ ಗಾಂಧಿ

ಬುಧವಾರ, ರಾಹುಲ್ ಮತ್ತು ಪ್ರಿಯಾಂಕ ಗುಲ್ಮಾರ್ಗ್‌ನ ಇಳಿಜಾರುಗಳ ಮೂಲಕ ಸ್ಕೀಯಿಂಗ್ ಮಾಡಿದ್ದಾರೆ, ಇಲ್ಲಿಗೆ ಇವರ ಎರಡು ದಿನದ ವೈಯಕ್ತಿಕ ಭೇಟಿಯಾಗಿದ್ದು, ಇದನ್ನು ಯಶಸ್ವಿ ಭಾರತ್ ಜೋಡೋ ಯಾತ್ರೆಯ ನಂತರದ ವಿಶ್ರಾಂತಿಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಕಾಶ್ಮೀರದ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ, ನಂತರ ತಮ್ಮ ಸಹೋದರಿಯ ಜೊತೆಗೆ ಗುಲ್ಮಾರ್ಗ್‌ನ ಇಳಿಜಾರಿನಲ್ಲಿ ಸ್ನೋಮೊಬೈಲ್‌ ರೈಡ್ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಉಚ್ಚಾಟನೆ ಅಭಿಯಾನಕ್ಕಾಗಿ ಬಿಜೆಪಿಯ ವಿರುದ್ಧ ತರಾಟೆಗೆ ತೆಗೆದುಕೊಂಡರು ಮತ್ತು ಇದು ಬಿಜೆಪಿಯ ಉದ್ದೇಶಪೂರ್ವಕ ಕ್ರಮ ಎಂದು ಹೇಳಿದ್ದಾರೆ. ಇಲ್ಲಿನ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಯೋಚನೆ ಇಲ್ಲಿ ಎಂದು ಹೇಳಿದ್ದಾರೆ.

Published On - 11:42 am, Mon, 20 February 23