Rahul Gandhi: ಕಾಶ್ಮೀರಿ ಪಂಡಿತರು ತಮ್ಮ ಹಕ್ಕು ಕೇಳುತ್ತಿದ್ದಾರೆ, ಭಿಕ್ಷೆ ಬೇಡುತ್ತಿಲ್ಲ: ಜಮ್ಮು ಕಾಶ್ಮೀರದಲ್ಲಿ ರಾಹುಲ್ ಗಾಂಧಿ
Bharat Jodo Yatra ಕಾಶ್ಮೀರಿ ಪಂಡಿತರ ನಿಯೋಗ ಇಂದು ನನ್ನನ್ನು ಭೇಟಿ ಮಾಡಿದೆ. ಅವರು ನನಗೆ ಹೇಳಿದ ಮಾತುಗಳಿಂದ ನನಗೆ ಆಘಾತವಾಯಿತು. ನೀವು ಬೇಡಿಕೊಳ್ಳುವುದೇನೂ ಬೇಡ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದರು ಎಂದು ಅವರು ಹೇಳಿದ್ದಾರೆ. ಇದು ಭಯಾನಕವಾಗಿದೆ. ಅವರು ಈ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ನಾನು ಎಲ್‌ಜಿಗೆ ಹೇಳಲು ಬಯಸುತ್ತೇನೆ ಎಂದು ಸೋಮವಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ರಾಜ್ಯ ಸ್ಥಾನಮಾನ ಕೊಡಿಸಲು ಕಾಂಗ್ರೆಸ್ ಶ್ರಮಿಸುತ್ತದೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ (Bharat Jodo Yatra) ಕೊನೆಯ ಹಂತದಲ್ಲಿ ಜಮ್ಮು ಕಾಶ್ಮೀರದಲ್ಲಿ ಮಾತನಾಡುತ್ತಿದ್ದರವರು. 2019ರಲ್ಲಿ ಕೇಂದ್ರ ಸರ್ಕಾರವು ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಮೊದಲ ಬಾರಿಗೆ ಚುನಾವಣೆ ನಡೆಸಲು ಸಜ್ಜಾಗುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಕಾಶ್ಮೀರಿ ಪಂಡಿತರೊಂದಿಗೆ ಊಟ ಮಾಡುತ್ತಿರುವ ವಿಡಿಯೊವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಸ್ಥಾನಮಾನದ ವಿಷಯವಾಗಿ ವಿರೋಧ ಪಕ್ಷಗಳು ಪದೇ ಪದೇ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಬರುತ್ತಿವೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಡಳಿತ ಪಕ್ಷದ ನಾಯಕರು ಹೇಳಿದ್ದಾರೆ.
ಕಾಶ್ಮೀರಿ ಪಂಡಿತರ ನಿಯೋಗ ಇಂದು ನನ್ನನ್ನು ಭೇಟಿ ಮಾಡಿದೆ. ಅವರು ನನಗೆ ಹೇಳಿದ ಮಾತುಗಳಿಂದ ನನಗೆ ಆಘಾತವಾಯಿತು. ನೀವು ಬೇಡಿಕೊಳ್ಳುವುದೇನೂ ಬೇಡ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದರು ಎಂದು ಅವರು ಹೇಳಿದ್ದಾರೆ. ಇದು ಭಯಾನಕವಾಗಿದೆ. ಅವರು ಈ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ನಾನು ಎಲ್‌ಜಿಗೆ ಹೇಳಲು ಬಯಸುತ್ತೇನೆ ಎಂದು ಸೋಮವಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಹೇಳಿದ್ದಾರೆ.
ಇಂದು, ರಾಹುಲ್ ಗಾಂಧಿಯವರು ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿ ಮಾಡಿದರು. ಅವರು ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗಳನ್ನು ಪ್ರತಿಭಟಿಸುತ್ತಿರುವುದರಿಂದ ಅವರು ಸುಮಾರು 6 ತಿಂಗಳಿನಿಂದ ರಾಜ್ಯ ಸರ್ಕಾರದಿಂದ ಯಾವುದೇ ಸಂಬಳವನ್ನು ಪಡೆದಿಲ್ಲ ಎಂಬುದನ್ನು ಅವರು ಹೇಳಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Watch: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಸೀನರಾಗಿದ್ದ ವೇದಿಕೆಯಲ್ಲೇ ರಾಜಸ್ಥಾನ ವಿವಿ ಅಧ್ಯಕ್ಷರ ಮೇಲೆ ಹಲ್ಲೆ
ಮೂರು ಅಂಶಗಳ ಜ್ಞಾಪಕ ಪತ್ರವನ್ನು ಸಿದ್ಧಪಡಿಸುವಂತೆ ರಾಹುಲ್ ಗಾಂಧಿ ಅವರಿಗೆ ಹೇಳಿದ್ದಾರೆ. ಇಂದು ಪ್ರಧಾನಿ ಮೋದಿಗೆ ಪತ್ರ ಬರೆಯಲಿರುವ ಅವರು, ಸಂಸತ್ತಿನಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ. ಕಾಶ್ಮೀರಿ ಪಂಡಿತರ ವಿಷಯಕ್ಕೆ ಸಂಬಂಧಿಸಿದಂತೆ ಕಣಿವೆಗೆ ಕಾಂಗ್ರೆಸ್ ಪಕ್ಷದಿಂದ ಉನ್ನತ ಅಧಿಕಾರದ ನಿಯೋಗವನ್ನು ಕಳುಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಜೈರಾಮ್ ರಮೇಶ್ ಇನ್ನೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಕಳೆದ ವಾರ ಎರಡು ಸ್ಫೋಟಗಳು ವರದಿಯಾದ ನಂತರ ಬಿಗಿ ಭದ್ರತೆಯ ನಡುವೆ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಎಲ್ಲಾ ಸೂಕ್ತ ವ್ಯವಸ್ಥೆಗಳನ್ನು ಖಾತ್ರಿಪಡಿಸಲಾಗಿದೆ ಎಂದು ಆಡಳಿತ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:21 pm, Mon, 23 January 23