Madhya Pradesh: ಮಗಳ ಚಿಕಿತ್ಸೆಗಾಗಿ ರಕ್ತ ಮಾರಾಟ ಮಾಡುತ್ತಿದ್ದ ತಂದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ

ಮಗಳ ಚಿಕಿತ್ಸೆಗಾಗಿ ಮತ್ತು ತನ್ನ ಕುಟುಂಬ ಜೀವನ ಸಾಗಿಸಲು ಹಣ ಅವಶ್ಯಕತೆ ಇತ್ತು. ಆ ಕಾರಣದಿಂದ ಆಕೆಯ ತಂದೆ ಪ್ರಮೋದ್ ಮನೆ, ಅಂಗಡಿಯನ್ನು ಮಾರಾಟ ಮಾಡಿದ್ದಾರೆ ಎಂದು ಆತನ ಮಗಳು ಅನುಷ್ಕಾ ಗುಪ್ತಾ ಹೇಳಿದ್ದಾರೆ.

Madhya Pradesh: ಮಗಳ ಚಿಕಿತ್ಸೆಗಾಗಿ ರಕ್ತ ಮಾರಾಟ ಮಾಡುತ್ತಿದ್ದ ತಂದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ
Follow us
|

Updated on:Apr 20, 2023 | 4:52 PM

ಭೋಪಾಲ್: ಮನಷ್ಯನಿಗೆ ಕಷ್ಟ ಬರದೇ ಮತ್ತೆ ಯಾರಿಗೆ ಬರುತ್ತದೆ. ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡಾಗ ಒಂದು ಬಾರಿ ಭರವಸೆ ಕಳೆದುಕೊಳ್ಳುವುದು ಸಹಜ, ಆದರೆ ನಮ್ಮನ್ನೇ ಭರವಸೆಯಾಗಿ ನಂಬಿ ಒಂದು ಜೀವ ನಮ್ಮ ಜೀವನದಲ್ಲಿ ಇರುತ್ತದೆ, ಹೌದು ಇಲ್ಲೊಂದು ತನ್ನ ತಂದೆಯನ್ನು ನಂಬಿಕೊಂಡಿದ್ದ ಜೀವ ಈಗ ದುಃಖ ಪಡುತ್ತಿದೆ. ಮಧ್ಯಪ್ರದೇಶ(Madhya Pradesh) ಸತ್ನಾದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಅನಾಥ ಮಾಡಿ ಹೋಗಿದ್ದಾನೆ, ಈ ವ್ಯಕ್ಕಿ ತನ್ನ ಬಳಿ ಹಣವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ತನ್ನ ಮಗಳಿಗೆ ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ನಡೆಯಲಾಗುತ್ತಿಲ್ಲ. ಆಕೆಯ ಚಿಕಿತ್ಸೆಗೆ ಹಣ ಇಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಕುಟುಂಬ ತಿಳಿಸಿದೆ.

ಮಗಳ ಚಿಕಿತ್ಸೆಗಾಗಿ ಮತ್ತು ತನ್ನ ಕುಟುಂಬ ಜೀವನ ಸಾಗಿಸಲು ಹಣ ಅವಶ್ಯಕತೆ ಇತ್ತು. ಆ ಕಾರಣದಿಂದ ಆಕೆಯ ತಂದೆ ಪ್ರಮೋದ್ ಮನೆ, ಅಂಗಡಿಯನ್ನು ಮಾರಾಟ ಮಾಡಿದ್ದಾರೆ ಎಂದು ಆತನ ಮಗಳು ಅನುಷ್ಕಾ ಗುಪ್ತಾ ಹೇಳಿದ್ದಾರೆ. ಅನುಷ್ಕಾ ರಸ್ತೆ ಅಪಘಾತದಲ್ಲಿ ಬೆನ್ನುಮೂಳೆಗೆ ಪೆಟ್ಟಾಗಿದ್ದು, ಅಂದಿನಿಂದ ಹಾಸಿಗೆ ಹಿಡಿದಿದ್ದಾರೆ.

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ, ಆಹಾರ ಧಾನ್ಯಗಳಿಲ್ಲ ಎಂದು ಪ್ರಮೋದ್ ಕೆಲವೊಮ್ಮೆ ರಕ್ತ ಮಾರಾಟ ಮಾಡಿದ್ದು ಕೂಡ ಇದೆ ಎಂದು ಆತನ ಕುಟುಂಬದವರು ಹೇಳಿದ್ದಾರೆ. ನನ್ನ ತಂದೆ ನಿರಂತರ ರಕ್ತ ಮಾರಿದ ಕಾರಣ ಅನಾರೋಗ್ಯಕ್ಕೆ ಒಳಗಾಗಿದ್ದಾರೆ, ನಂತರದಲ್ಲಿ ಇದರಿಂದ ಅವರಿಗೆ ದುಡಿಯಲು ಕೂಡ ಸಾಧ್ಯವಾಗಿಲ್ಲ ಎಂದು ಅನುಷ್ಕಾ ಹೇಳಿದ್ದಾರೆ.

ಅನುಷ್ಕಾ 17 ವರ್ಷ ವಯಸ್ಸಿನವರು, ಶೈಕ್ಷಣಿಕ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಬೋರ್ಡ್ ಪರೀಕ್ಷೆಗಳಲ್ಲಿ ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಆಕೆಯನ್ನು ಊರಿನಲ್ಲಿ ಗೌರವಿಸಲಾಯಿತು. ನನ್ನ ಈ ಸ್ಥಿತಿಯನ್ನು ನೋಡಿ ಕೆಲವೊಂದು ಜನರು ಅಲ್ಪಸ್ವಲ್ಪ ಸಹಾಯ ಮಾಡಿದ್ದರು. ನನ್ನ ಶೈಕ್ಷಣಿಕ ಸಾಧನೆಯನ್ನು ಗುರುತಿಸಿದ ಯಾವುದೇ ಅಧಿಕಾರಿಗಳು ಅಥವಾ ಕುಟುಂಬದವರು ಬೆಂಬಲವನ್ನು ನೀಡಲಿಲ್ಲ. ಅಧಿಕಾರಿಗಳು ಈ ಬಗ್ಗೆ ಸಹಾಯ ಮಾಡುವುದಾಗಿ ಹೇಳಿದ್ದರು. ನನ್ನ ತಂದೆ ಆ ಯೋಜನೆ, ಈ ಯೋಜನೆ ಎಂದು ಅಧಿಕಾರಿಗಳ ಕಚೇರಿಗೆ ಅಳೆದಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ 1 ವರ್ಷದಲ್ಲಿ ಏನೂ ಆಗಲಿಲ್ಲ ಎಂದು ಅನುಷ್ಕಾ ಹೇಳುತ್ತಾರೆ. ನಮ್ಮ ಮನೆಗೆ ಅಥವಾ ನನ್ನ ಚಿಕಿತ್ಸೆಗಾಗಿ ನನ್ನ ತಂದೆ ತನ್ನ ರಕ್ತವನ್ನು ಸಹ ಮಾರಾಟ ಮಾಡಿದರು. ಆದರೆ ಇದರಿಂದ ಅವರು ತುಂಬಾ ಖಿನ್ನತೆಗೆ ಒಳಗಾಗದಿದ್ದರು. ಈ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Train Accident In Shahdol: ಮಧ್ಯಪ್ರದೇಶದಲ್ಲಿ ರೈಲುಗಳು ಮುಖಾಮುಖಿ ಡಿಕ್ಕಿ, ಹಲವು ರೈಲುಗಳ ಸಂಚಾರ ರದ್ದು

ಬೆಳಗಿನ ಜಾವ 4 ಗಂಟೆಗೆ ಮನೆಯಿಂದ ಅಂಗಡಿಗೆ ತೆರಳಿದ ಪ್ರಮೋದ್ ಗುಪ್ತಾ ನಾಪತ್ತೆಯಾಗಿದ್ದರು. ಮನೆಯವರೆಲ್ಲ ಹುಡುಕಾಟ ನಡೆಸಿದ್ದರು. ಅದರೂ ಸಿಗದ ಪ್ರಮೋದ್ ಗುಪ್ತಾ, ನಂತರ ಮನೆಯವರು ಪೊಲೀಸ್ ದೂರು ಕೂಡ ನೀಡಿದ್ದರು. ಮಂಗಳವಾರ ಸತ್ನಾದ ರೈಲ್ವೆ ಹಳಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಸತ್ನಾ ಉಪ ಪೊಲೀಸ್ ವರಿಷ್ಠಾಧಿಕಾರಿ ಖ್ಯಾತಿ ಮಿಶ್ರಾ ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:39 pm, Thu, 20 April 23