ಸೋಶಿಯಲ್ ಮೀಡಿಯಾದಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ! ಕೇಂದ್ರಕ್ಕೆ ಸುಪ್ರೀಂ ಎಚ್ಚರಿಕೆ

| Updated By: ಸಾಧು ಶ್ರೀನಾಥ್​

Updated on: Oct 14, 2020 | 10:39 AM

ದೆಹಲಿ: ಆಡೋ ಮಕ್ಕಳಿಂದ ಹಿಡಿದು ಹಣ್ಣ್ ಹಣ್ಣ್ ಮದುಕರು ಕೈಯಲ್ಲಿ ಈಗ ಮೊಬೈಲ್ ಇದ್ದೇ ಇರುತ್ತೆ.. ಏನೇ ತಿಂದ್ರೂ ಏನೇ ಮಾಡಿದ್ರೂ ಸೋಶಿಯಲ್ ಮೀಡಿಯಾದಲ್ಲಿ ಫಟಾಫಟ್ ಅಂತ ಅಪ್ಡೇಟ್ ಮಾಡ್ತಾನೆ ಇರ್ತಾರೆ.. ಅದರಲ್ಲೂ ನೆಟ್ಟಗೆ ಕಣ್ಣೇ ಬಿಟ್ಟ್ ಇರಲ್ಲ, ಅಂತಹ ಮಕ್ಕಳು ಮೊಬೈಲ್ ಅಂದ್ರೆ ಬಾಯಿ ಬಿಡ್ತಾವೆ.. ಒಂದ್ ಕಾಲದಲ್ಲಿ ಆಟ, ಪಾಠ ಅಂತಿದ್ದ ಮಕ್ಕಳು ಈಗ ಸೋಶಿಯಲ್ ಮಿಡಿಯಾದಲ್ಲೇ ಮುಳುಗಿ ಹೋಗಿ ಇರ್ತಾರೆ. ಮಕ್ಕಳನ್ನು ದೂರವಿಡುವ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಯೆಸ್‌, ಈಗ […]

ಸೋಶಿಯಲ್ ಮೀಡಿಯಾದಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ! ಕೇಂದ್ರಕ್ಕೆ ಸುಪ್ರೀಂ ಎಚ್ಚರಿಕೆ
Follow us on

ದೆಹಲಿ: ಆಡೋ ಮಕ್ಕಳಿಂದ ಹಿಡಿದು ಹಣ್ಣ್ ಹಣ್ಣ್ ಮದುಕರು ಕೈಯಲ್ಲಿ ಈಗ ಮೊಬೈಲ್ ಇದ್ದೇ ಇರುತ್ತೆ.. ಏನೇ ತಿಂದ್ರೂ ಏನೇ ಮಾಡಿದ್ರೂ ಸೋಶಿಯಲ್ ಮೀಡಿಯಾದಲ್ಲಿ ಫಟಾಫಟ್ ಅಂತ ಅಪ್ಡೇಟ್ ಮಾಡ್ತಾನೆ ಇರ್ತಾರೆ.. ಅದರಲ್ಲೂ ನೆಟ್ಟಗೆ ಕಣ್ಣೇ ಬಿಟ್ಟ್ ಇರಲ್ಲ, ಅಂತಹ ಮಕ್ಕಳು ಮೊಬೈಲ್ ಅಂದ್ರೆ ಬಾಯಿ ಬಿಡ್ತಾವೆ.. ಒಂದ್ ಕಾಲದಲ್ಲಿ ಆಟ, ಪಾಠ ಅಂತಿದ್ದ ಮಕ್ಕಳು ಈಗ ಸೋಶಿಯಲ್ ಮಿಡಿಯಾದಲ್ಲೇ ಮುಳುಗಿ ಹೋಗಿ ಇರ್ತಾರೆ.

ಮಕ್ಕಳನ್ನು ದೂರವಿಡುವ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ಯೆಸ್‌, ಈಗ ಇಡೀ ಜತ್ತು ಸೋಶಿಯಲ್ ಮೀಡಿಯಾದಲ್ಲಿ ಮುಳುಗಿದೆ. ಡೊಡ್ಡವರಿಂದ ಹಿಡಿದು ಮಕ್ಕಳವರೆಗೂ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾಗಿದೆ. ಅದರಲ್ಲೂ ಕೊರೊನಾ ಬಂದ ನಂತರ ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ಮಕ್ಕಳು ಅತೀ ಹೆಚ್ಚು ಸಮಯವನ್ನು ಸೋಶಿಯಲ್ ಮೀಡಿಯಾದಲ್ಲೇ ಕಳೆದಿದ್ದಾರೆ.

ಇದರಿಂದ ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀಳುತ್ತಿದ್ದು ಕಲಿಕೆಯ ಮೇಲಿನ ಆಸಕ್ತಿ ಕಡಿಮೆ ಆಗ್ತಿದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾನೂನು ರೂಪಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.

ಮಕ್ಕಳ ಮೇಲಿನ ಸೋಶಿಯಲ್ ಮಿಡಿಯಾ ಪರಿಣಾಮ ಕುರಿತು ದೆಹಲಿ ಮೂಲದ ಇಬ್ಬರು ಕಾನೂನು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ರು. ಸಾಮಾಜಿಕ ಜಾಲತಾಣದಲ್ಲಿ ಚೈಲ್ಡ್ ಪೋರ್ನ್‌ನಂತಹ ಪ್ರಮುಖ ಪದಗಳ ಹುಡುಕಾಟದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ವಿಡಿಯೋಗಳು ಮತ್ತು ಖಾಸಗಿ ಗ್ರಾಫಿಕ್‌ಗಳು ಸಾಕಷ್ಟು ಸಿಗುತ್ತಿವೆ. ಜೊತೆಗೆ ನಕಲಿ ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗಳನ್ನು ಬೇರು ಸಹಿತ ಕಿತ್ತು ಹಾಕುವ ಅವಶ್ಯಕತೆಯಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಅರ್ಜಿಯಲ್ಲಿ ತಿಳಿಸಲಾಗಿದೆ.

ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ನೇತೃತ್ವದ ಪೀಠವು ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿದ್ದು, ಈಗ ಈ ವಿಚಾರವಾಗಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ. ಮುಂಬರುವ ದಿನಗಳಲ್ಲಿ ಇಂತಹ ವಿಷಯವನ್ನು ಎದುರಿಸಲು ಸರ್ಕಾರ ಸೂಕ್ತ ಕಾನೂನನ್ನು ರೂಪಿಸಬೇಕೆಂದು ಸುಪ್ರೀಂ ನಿರ್ದೇಶಿಸಿದೆ.

ಒಟ್ನಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಪ್ರತಿಕ್ರಿಯೆ ನೀಡುವಂತೆ ಹೇಳಿದೆ. ಆದ್ರೆ ಮಕ್ಕಳನ್ನು ಸಾಮಾಜಿಕ ಮಾಧ್ಯಮಗಳಿಂದ ದೂರ ಇಡಲು ಕೇಂದ್ರ ಯಾವ ಕಾನೂನು ಜಾರಿಗೆ ತರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಈ ಬಗ್ಗೆ ಆದಷ್ಟು ಗಮನ ಹರಿಸಿ ಮಕ್ಕಳ ಭವಿಷ್ಯಕ್ಕೆ ಸೋಶಿಯಮ್ ಮೀಡಿಯಾದಿಂದ ಕತ್ತು ಬರದಂತೆ ನೋಡಿಕೊಳ್ಳಬೇಕಿದೆ. ಪೋಷಕರು ಕೂಡ ಈ ಬಗ್ಗೆ ಎಚ್ಚರ ವಹಿಸಬೇಕಿದೆ.

Published On - 6:43 am, Wed, 14 October 20