ಹಜ್ ಯಾತ್ರೆ, ಉಮ್ರಾ ಸೇವೆಗಳ ಮೇಲಿನ ಜಿಎಸ್​​ಟಿಯಿಂದ ವಿನಾಯಿತಿ ಕೋರಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Jul 26, 2022 | 8:10 PM

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠವು ಈ ಸೇವೆಗಳು ಈಗಾಗಲೇ ಧಾರ್ಮಿಕ ಚಟುವಟಿಕೆಗಳಿಗೆ ನೀಡಲಾದ ವಿನಾಯಿತಿಗೆ ಅರ್ಹವಾಗಿವೆ ಎಂದು ಹೇಳಿದೆ.

ಹಜ್ ಯಾತ್ರೆ, ಉಮ್ರಾ ಸೇವೆಗಳ ಮೇಲಿನ ಜಿಎಸ್​​ಟಿಯಿಂದ ವಿನಾಯಿತಿ ಕೋರಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಹಜ್
Follow us on

ಸೌದಿ ಅರೇಬಿಯಾಗೆ (Saudi Arabia) ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಹಜ್ (Hajj) ಮತ್ತು ಉಮ್ರಾ ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಕೋರಿ ವಿವಿಧ ಖಾಸಗಿ ಟೂರ್ ಆಪರೇಟರ್‌ಗಳು ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ (Supreme Court) ಮಂಗಳವಾರ ವಜಾಗೊಳಿಸಿದೆ. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠವು ಈ ಸೇವೆಗಳು ಈಗಾಗಲೇ ಧಾರ್ಮಿಕ ಚಟುವಟಿಕೆಗಳಿಗೆ ನೀಡಲಾದ ವಿನಾಯಿತಿಗೆ ಅರ್ಹವಾಗಿವೆ ಎಂದು ಹೇಳಿದೆ. ಸಂವಿಧಾನದ 245 ನೇ ವಿಧಿಯ ಪ್ರಕಾರ ಹೆಚ್ಚುವರಿ ಪ್ರಾದೇಶಿಕ ಚಟುವಟಿಕೆಗಳಿಗೆ ತೆರಿಗೆ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಯನ್ನು ನಿರ್ಧರಿಸಲಾಗಿಲ್ಲ. ವಿನಾಯಿತಿ ಮತ್ತು ತಾರತಮ್ಯ ಎರಡರ ಆಧಾರದ ಮೇಲೆ ನಾವು ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ್ದೇವೆ. ಹೆಚ್ಚುವರಿ ಪ್ರಾದೇಶಿಕ ಕಾರ್ಯಾಚರಣೆಯ ಇತರ ಸಮಸ್ಯೆಯನ್ನು ಬಾಕಿ ಇರಿಸಲಾಗಿದೆ. ಅದನ್ನು ನಿರ್ಧರಿಸಲಾಗಿಲ್ಲ ಎಂದು ಪೀಠ ಹೇಳಿದೆ.

ಸಂವಿಧಾನದ ಪರಿಚ್ಛೇದ 245 ರ ಪ್ರಕಾರ ಹೆಚ್ಚುವರಿ ಪ್ರಾದೇಶಿಕ ಚಟುವಟಿಕೆಗಳ ಮೇಲೆ ಯಾವುದೇ ತೆರಿಗೆ ಕಾನೂನು ಅನ್ವಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ನೋಂದಾಯಿತ ಖಾಸಗಿ ಟೂರ್ ಆಪರೇಟರ್‌ಗಳು ನೀಡುವ ಸೇವೆಗಳನ್ನು ಪಡೆದುಕೊಳ್ಳುವ ಹಜ್ ಯಾತ್ರಿಕರ ಮೇಲೆ ಜಿಎಸ್‌ಟಿ ವಿಧಿಸುವುದನ್ನು ಟೂರ್ ಆಪರೇಟರ್‌ಗಳು ಪ್ರಶ್ನಿಸಿದ್ದರು. ಭಾರತದ ಹೊರಗಿರುವ ಸೇವೆಗಳನ್ನು ಜಿಎಸ್‌ಟಿಗೆ ಒಳಪಡಿಸಲಾಗುವುದಿಲ್ಲ ಎಂಬುದು ಅವರ ವಾದವಾಗಿದೆ.

ಭಾರತದ ಹಜ್ ಸಮಿತಿಯ ಮೂಲಕ ತೀರ್ಥಯಾತ್ರೆ ಕೈಗೊಳ್ಳುವ ಕೆಲವು ಯಾತ್ರಿಕರಿಗೆ ವಿನಾಯಿತಿ ನೀಡುವುದು ತಾರತಮ್ಯವಾಗಿದೆ ಎಂದು ಅವರು ವಾದಿಸಿದ್ದಾರೆ.