Breaking ಪ್ರವಾದಿ ಕುರಿತು ನೂಪುರ್ ಶರ್ಮಾ ಹೇಳಿಕೆ ಪ್ರಕರಣ: ಟೈಮ್ಸ್ ನೌ ನಿರೂಪಕಿ ನವಿಕಾ ಕುಮಾರ್‌ಗೆ ಸುಪ್ರೀಂ ರಕ್ಷಣೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 08, 2022 | 2:36 PM

ನವಿಕಾ ಕುಮಾರ್  ಸಲ್ಲಿಸಿದ ರಿಟ್ ಅರ್ಜಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದ್ದು ಎಲ್ಲಾ ಒತ್ತಡದ ಕ್ರಮಗಳಿಂದ ರಕ್ಷಣೆ ನೀಡಿದೆ.

Breaking ಪ್ರವಾದಿ ಕುರಿತು ನೂಪುರ್ ಶರ್ಮಾ ಹೇಳಿಕೆ ಪ್ರಕರಣ: ಟೈಮ್ಸ್ ನೌ ನಿರೂಪಕಿ ನವಿಕಾ ಕುಮಾರ್‌ಗೆ ಸುಪ್ರೀಂ ರಕ್ಷಣೆ
ನವಿಕಾ ಕುಮಾರ್
Follow us on

ಟೈಮ್ಸ್ ನೌ ವಾಹಿನಿಯ  ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ (Nupur Sharma)  ಪ್ರವಾದಿ ಮೊಹಮ್ಮದ್ (Prophet Muhammad) ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಈ ಚರ್ಚೆಯನ್ನು ನಡೆಸಿಕೊಟ್ಟಿದ್ದು  ಟೈಮ್ಸ್ ನೌ ನಿರೂಪಕಿ ನವಿಕಾ ಕುಮಾರ್(Navika Kumar). ನೂಪುರ್ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ನವಿಕಾ ಕುಮಾರ್ ವಿರುದ್ಧ ಒಂದಕ್ಕಿಂತ ಹೆಚ್ಚು ಎಫ್ಐಆರ್ ದೂರು ದಾಖಲಾಗಿತ್ತು. ಈ ಎಫ್ಐಆರ್ ಬಂಧನದಿಂದ ತಮಗೆ ರಕ್ಷಣೆ ನೀಡಬೇಕು ಎಂದು ನವಿಕಾ ಕುಮಾರ್ ಸುಪ್ರೀಂಕೋರ್ಟ್ ಮೊರೆ  ಹೋಗಿದ್ದು, ನ್ಯಾಯಾಲಯ ಸೋಮವಾರ ನವಿಕಾ ಕುಮಾರ್ ಅವರಿಗೆ ಮಧ್ಯಂತರ ರಕ್ಷಣೆ ನೀಡಿದೆ. ಮೇ 26 ರಂದು ವಾಹಿನಿಯಲ್ಲಿ ಪ್ರಸಾರವಾದ ಚರ್ಚೆಯಲ್ಲಿ ನೀಡಿದ ಹೇಳಿಕೆಗಳ ಕುರಿತು ವಿವಿಧ ರಾಜ್ಯಗಳಲ್ಲಿ ದಾಖಲಾದ ಬಹು ಎಫ್‌ಐಆರ್‌ಗಳ ವಿರುದ್ಧ ನವಿಕಾ  ಕುಮಾರ್ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಮಧ್ಯಂತರ ರಕ್ಷಣೆ ನೀಡುವ ತೀರ್ಪು ನೀಡಿದ್ದಾರೆ. ನವಿಕಾ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ವಾದಿಸಿದ್ದು,  ನವಿಕಾ ಅವರು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಅವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು ಎಂದಿದ್ದಾರೆ.

ಈ ನಿರ್ದಿಷ್ಟ ಚರ್ಚೆಯಲ್ಲಿ ನಿರೂಪಕರು ಏನೂ  ಹೇಳಿಲ್ಲ. ಅದು ಜ್ಞಾನವಾಪಿಗೆ  ಸಂಬಂಧಿಸಿದ್ದಾಗಿತ್ತು. ದಿಢೀರನೆ ಚರ್ಚೆಯಲ್ಲಿ ಭಾಗವಹಿಸಿದ ಒಬ್ಬ ವ್ಯಕ್ತಿ ಮಾತನಾಡುತ್ತಿದ್ದಂತೆ ಇನ್ನೊಬ್ಬರು ತಡೆದರು. ನನ್ನ ಅರ್ಜಿದಾರರರು ಏನೂ  ಹೇಳಿಲ್ಲ, ನಾವು  ಸಂವಿಧಾನದ ಮೂಲಕ ಹೋಗಬೇಕು ಎಂದು ಹೇಳಿ ನಿರೂಪಕರು  ಬೆಂಕಿ ನಂದಿಸುವ ಪ್ರಯತ್ನ ಮಾಡಿದರು ಎಂದು ರೋಹ್ಟಗಿ ಹೇಳಿದ್ದಾರೆ. ಮೊದಲ ಎಫ್‌ಐಆರ್ ದೆಹಲಿಯಲ್ಲಿ ದಾಖಲಿಸಲಾಗಿದೆ. ದೆಹಲಿ ಎಫ್‌ಐಆರ್‌ನೊಂದಿಗೆ ಪ್ರಕರಣಗಳನ್ನು ಸೇರಿಸಲು ಪ್ರಯತ್ನಿಸಲಾಗಿದೆ ಎಂದು ರೋಹ್ಟಗಿ  ಹೇಳಿದ್ದಾರೆ. ನವಿಕಾ ಕುಮಾರ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಎಫ್ಐಆರ್ ಎದುರಿಸುತ್ತಿದ್ದಾರೆ. ಕೋಲ್ಕತ್ತಾದಲ್ಲಿ ಅವರ ವಿರುದ್ಧ ಆರು ಎಫ್‌ಐಆರ್‌ಗಳಿವೆ. ಅದೇ ಪ್ರಕರಣಕ್ಕೆ  ಸಂಬಂಧಿಸಿದಂತೆ ಎರಡನೇ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಅವರು ಟಿಟಿ ಆಂಟನಿ ಪ್ರಕರಣದ ನಿರ್ಧಾರವನ್ನು ಉಲ್ಲೇಖಿಸಿದ್ದಾರೆ. ಪ್ರಧಾನ ಆರೋಪಿ ನೂಪುರ್ ಶರ್ಮಾಗೆ ನ್ಯಾಯಾಲಯ ಮಧ್ಯಂತರ ರಕ್ಷಣೆ ನೀಡಿದೆ ಎಂದು ಹಿರಿಯ ವಕೀಲರು ಸೂಚಿಸಿದರು.

ಪಶ್ಚಿಮ ಬಂಗಾಳ ರಾಜ್ಯದ ಪರ ಹಿರಿಯ ವಕೀಲ ಡಾ.ಮೇನಕಾ ಗುರುಸ್ವಾಮಿ ವಾದ ಮಂಡಿಸಿದ್ದು ಮೊದಲ ಎಫ್‌ಐಆರ್ ಕೋಲ್ಕತ್ತಾದಲ್ಲಿ ದಾಖಲಾಗಿದ್ದು, ದೆಹಲಿ ಎಫ್‌ಐಆರ್ ಸಂಬಂಧಿತ ಪ್ರಸಾರಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದರು.

ಈ ವಿಷಯದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ವಿಶೇಷ ಆಸಕ್ತಿ ಏನು? ಎಂದು ರೋಹ್ಟಗಿ ಪ್ರಶ್ನಿಸಿದರು.

ಪೀಠವು ನೋಟಿಸ್ ನೀಡಲು ಒಪ್ಪಿಕೊಂಡಿದ್ದು ನವಿಕಾ ಕುಮಾರ್ ಮೇಲೆ  ಒತ್ತಡದ ಕ್ರಮದಿಂದ ಮಧ್ಯಂತರ ಪರಿಹಾರವನ್ನು ನೀಡಿತು.

ರೋಹ್ಟಗಿ ಅವರು ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಒತ್ತಾಯಿಸಿದ್ದು,  ಪ್ರತಿವಾದಿಗಳನ್ನು ಆಲಿಸದೆ ಇಂತಹ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

“ಈ ಆದೇಶವು ನಿಮ್ಮ ಉದ್ದೇಶವನ್ನು ಪೂರೈಸುತ್ತದೆ” ಎಂದು ನ್ಯಾಯಮೂರ್ತಿ ಮುರಾರಿ ಅವರು  ರೋಹ್ಟಗಿ ಅವರಲ್ಲಿ ಹೇಳಿದ್ದಾರೆ.

ಪ್ರವಾದಿ ಮೊಹಮ್ಮದ್ ಅವಹೇಳನಾಕಾರಿ ಹೇಳಿಕೆ ಪ್ರಕರಣದಲ್ಲಿ 2022 ಜುಲೈ 19 ರಂದು ಬಿಜೆಪಿಯ  ಮಾಜಿ ಬಿಜೆಪಿ ವಕ್ತಾರೆ  ನೂಪುರ್ ಶರ್ಮಾ ಅವರ ವಿರುದ್ಧ, ಕುರಿತು ಹಲವಾರು ರಾಜ್ಯಗಳಲ್ಲಿ ದಾಖಲಾದ ಅನೇಕ ಎಫ್‌ಐಆರ್‌ಗಳಲ್ಲಿ ಶರ್ಮಾ ವಿರುದ್ಧ ಯಾವುದೇ ಒತ್ತಡದ ಕ್ರಮಗಳನ್ನು ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ಹೆಚ್ಚಿನ ರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 1:56 pm, Mon, 8 August 22