ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ್ದ ವ್ಯಕ್ತಿಗೆ ಸೇರಿದ ಕಟ್ಟಡ ಕೆಡವಿದ ನೋಯ್ಡಾ ಪ್ರಾಧಿಕಾರ
ಮಹಿಳೆ ಯಾರು ಎಂದು ತ್ಯಾಗಿಯ ಸಹಚರರು ಹೌಸಿಂ ಸೊಸೈಟಿಗೆ ಕೇಳಿಕೊಂಡು ಬಂದ ಬೆನ್ನಲ್ಲೇ ತ್ಯಾಗಿ ವಿರುದ್ಧ ಈ ಕ್ರಮಕೈಗೊಳ್ಳಲಾಗಿದೆ
ಕಳೆದ ವಾರ ನೋಯ್ಡಾ (Noida) ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆ ಜತೆ ಶ್ರೀಕಾಂತ್ ತ್ಯಾಗಿ (Shrikant Tyagi) ಎಂಬ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಮಹಿಳೆ ಜತೆ ವಾಗ್ವಾದ ನಡೆಸಿದ ತ್ಯಾಗಿ ಆಕೆಯನ್ನು ದೂಡುತ್ತಿರುವುದು ವಿಡಿಯೊದಲ್ಲಿ ಕಾಣಿಸಿದೆ. ಶ್ರೀಕಾಂತ್ ತ್ಯಾಗಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡವನ್ನು ಸೋಮವಾರ ಬುಲ್ಡೋಜರ್ ಬಂದು ಕೆಡವಿದೆ. ಆ ಮಹಿಳೆ ಯಾರು ಎಂದು ತ್ಯಾಗಿಯ ಸಹಚರರು ಹೌಸಿಂ ಸೊಸೈಟಿಗೆ ಕೇಳಿಕೊಂಡು ಬಂದ ಬೆನ್ನಲ್ಲೇ ತ್ಯಾಗಿ ವಿರುದ್ಧ ಈ ಕ್ರಮಕೈಗೊಳ್ಳಲಾಗಿದೆ. ತ್ಯಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಗ್ಯಾಂಗ್ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ತ್ಯಾಗಿ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬೆಳಗ್ಗೆ 10 ಗಂಟೆಗೆ ಮುಂಚೆಯೇ ಎರಡು ಬುಲ್ಡೋಜರ್‌ಗಳು ಬಂದಿದ್ದು ಮರದ ಕಂಬಗಳನ್ನು ಕತ್ತರಿಸುತ್ತಿದ್ದ ಕಾರ್ಮಿಕರು ಅವರಿಗೆ ದಾರಿ ಮಾಡಿಕೊಟ್ಟರು. ಬುಲ್ಡೋಜರ್‌ಗಳು ಗಾಜಿನ ಮೇಲ್ಛಾವಣಿ ಮತ್ತು ಮರದ ಕಂಬಗಳನ್ನು ಭಾಗಶಃ ಕೆಡವಿವೆ.
ನೋಯ್ಡಾ ಪ್ರಾಧಿಕಾರದ ಜನರಲ್ ಮ್ಯಾನೇಜರ್ (ಯೋಜನೆ) ಇಶ್ತಿಯಾಕ್ ಅಹ್ಮದ್ ಸಹ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳದಲ್ಲಿ ಉಪಸ್ಥಿತರಿದ್ದರು. ಕಳೆದ ವಾರ ಮಹಿಳೆ ಮತ್ತು ತ್ಯಾಗಿ ನಡುವಿನ ಜಗಳ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತ್ಯಾಗಿ ಮೇಲೆ ಕ್ರಮ ಕೈಗೊಳ್ಳಲಾಗಿತ್ತು.
#WATCH | Uttar Pradesh: Noida administration demolishes the illegal construction at the residence of #ShrikantTyagi, at Grand Omaxe in Noida’s Sector 93.
Tyagi, in a viral video, was seen abusing and assaulting a woman here in the residential society. pic.twitter.com/YirMljembh
— ANI UP/Uttarakhand (@ANINewsUP) August 8, 2022
ಸೊಸೈಟಿಯ ಸಾಮಾನ್ಯ ಪ್ರದೇಶದಲ್ಲಿ ಎಂಟು ತಾಳೆ ಮರಗಳನ್ನು ನೆಟ್ಟಿದ್ದಾರೆ ತ್ಯಾಗಿ.ಈ ಮೂಲಕ ಅವರು ಜಾಗ ಅತಿಕ್ರಮಿಸಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಮರಗಳನ್ನು ನೆಟ್ಟಿದ್ದರು ಮತ್ತು ಕಳೆದ ವಾರ ಕೆಲವು ಮುಳ್ಳುಗಿಡಗಳನ್ನು ನೆಡಲು ಸಜ್ಜಾಗಿದ್ದರು ಎಂದು ವಸತಿ ಸಮಾಜದ ಮಂಡಳಿಯ ಸದಸ್ಯರು ಈ ಹಿಂದೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದರು. ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿವೆ ಎಂದು ಪಾಲಿಕೆ ಸದಸ್ಯರು ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ 81,000 ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 52,400 ಫಾಲೋವರ್ ಹೊಂದಿರುವ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ತ್ಯಾಗಿ ಅವರನ್ನು ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಎಂದು ಹೇಳುತ್ತಿವೆ. ಆದರೆ ತ್ಯಾಗಿಗೂ ನಮಗೂ ಸಂಬಂಧವಿಲ್ಲ ಎಂದು ಪಕ್ಷ ಹೇಳಿದೆ.
Noida Police has announced 25000 reward on the arrest of goon Shrikant Tyagi who is on the run. pic.twitter.com/7Q0hjFD4aK
— Aditya Raj Kaul (@AdityaRajKaul) August 8, 2022
ತಲೆಮರೆಸಿಕೊಂಡಿರುವ ಶ್ರೀಕಾಂಕ್ ತ್ಯಾಗಿಯನ್ನು ಪತ್ತೆ ಹಚ್ಚಿದವರಿಗೆ 25000 ರೂಪಾಯಿ ಬಹುಮಾನವನ್ನು ನೋಯ್ಡಾ ಪೊಲೀಸರು ಘೋಷಿಸಿದ್ದಾರೆ.
ಹೆಚ್ಚಿನ ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ