ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ತಡೆಯಲು ಇಂಟರ್ನೆಟ್​ಗೆ ನಿರ್ಬಂಧ: ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್​

‘ನಕಲು ತಡೆಯಬೇಕು ಎನ್ನುವ ಕಾರಣ ಮುಂದೊಡ್ಡಿ ರಾಜ್ಯಗಳು ಸಾರಾಸಗಟಾಗಿ ಇಂಟರ್ನೆಟ್ ನಿರ್ಬಂಧಿಸಬಾರದು’ ಎಂದು ಅರ್ಜಿದಾರರು ಕೋರಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ತಡೆಯಲು ಇಂಟರ್ನೆಟ್​ಗೆ ನಿರ್ಬಂಧ: ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್
Edited By:

Updated on: Sep 09, 2022 | 1:39 PM

ದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವಾಗ ನಕಲು ಆಗದಂತೆ ತಡೆಯುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಸುತ್ತಮುತ್ತ ಇಂಟರ್ನೆಟ್​ ಸ್ಥಗಿತಗೊಳಿಸುವ ಔಚಿತ್ಯ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ನ್ಯಾಯಪೀಠವು ಶುಕ್ರವಾರ (ಸೆ 9) ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನೋಟಿಸ್​ ಜಾರಿ ಮಾಡಿದೆ. ಪರೀಕ್ಷಾ ಮಾರ್ಗಸೂಚಿ ಮತ್ತು ನಕಲು ತಡೆಯುವ ಸಾಧ್ಯತೆಯ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ನ್ಯಾಯಪೀಠವು ಸೂಚಿಸಿದೆ.

ಕಾನೂನು ಸೇವೆಗಳನ್ನು ಒದಗಿಸುವ ‘ಸಾಫ್ಟ್​ವೇರ್ ಫ್ರೀಡಂ ಲಾ ಸೆಂಟರ್’ (Software Freedom Law Center) ಈ ಸಂಬಂಧ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ‘ನಕಲು ತಡೆಯಬೇಕು ಎನ್ನುವ ಕಾರಣ ಮುಂದೊಡ್ಡಿ ರಾಜ್ಯಗಳು ಸಾರಾಸಗಟಾಗಿ ಇಂಟರ್ನೆಟ್ ನಿರ್ಬಂಧಿಸಬಾರದು. ಆಡಳಿತಾತ್ಮಕ ಕಾರಣಗಳನ್ನು ಮುಂದೊಡ್ಡಿಯೂ ಇಂಟರ್ನೆಟ್ ನಿರ್ಬಂಧಿಸಬಾರದು ಅರ್ಜಿದಾರರು ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 2, 2017ರಲ್ಲಿ ರಾಜಸ್ಥಾನ ಸರ್ಕಾರವು ಒಂದು ಸಾರಾಸಗಟಾದ ಆದೇಶವನ್ನು ಹೊರಡಿಸಿ ನಿರ್ದಿಷ್ಟ ಜಿಲ್ಲೆ ಅಥವಾ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ಅಧಿಕಾರವನ್ನು ವಿಭಾಗಾಧಿಕಾರಿಗಳಿಗೆ ನೀಡಿತ್ತು. ಈ ಆದೇಶವನ್ನು ಸಾಫ್ಟ್​ವೇರ್ ಫ್ರೀಡಂ ಲಾ ಸೆಂಟರ್ ಪ್ರಶ್ನಿಸಿದೆ.